ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಸುಳ್ಳು ಹೇಳಿದ್ದೇವೆ ಕ್ಷಮಿಸಿ: ತಮಿಳುನಾಡು ಸಚಿವ

ಚೆನ್ನೈ, ಶನಿವಾರ, 23 ಸೆಪ್ಟಂಬರ್ 2017 (19:28 IST)

ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲರು ಜನತೆಗೆ ಸುಳ್ಳು ಹೇಳಿದ್ದೇವೆ. ಅದಕ್ಕಾಗಿ ಜನತೆಯ ಕ್ಷಮೆಯಾಚಿಸುತ್ತೇವೆ ಎಂದು ಅರಣ್ಯ ಖಾತೆ ಸಚಿವ ಸಿ. ಶ್ರೀನಿವಾಸನ್ ಹೇಳಿಕೆ ನೀಡಿ ಆಘಾತ ಮೂಡಿಸಿದ್ದಾರೆ.
ಪೋಸ್ ಗಾರ್ಡನ್ ನಿವಾಸದಲ್ಲಿ ಉಸಿರಾಟದ ತೊಂದರೆಯ ಕಾರಣದಿಂದಾಗಿ ಜಯಲಲಿತಾ, ಸೆಪ್ಟೆಂಬರ್ 22 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಪೋಲೋ ಹಾಸ್ಪಿಟಲ್‌ನಲ್ಲಿ 75 ದಿನಗಳ ಜೀವನ್ಮರಣದ ಹೋರಾಟದ ನಂತರ ಡಿಸೆಂಬರ್ 5 ರಂದು ಮೃತಪಟ್ಟಿದ್ದರು.
 
ಅವಳು ಆಸ್ಪತ್ರೆಯಲ್ಲಿ ಇಡ್ಲಿ ತಿನ್ನುತ್ತಿದ್ದಳು ಎನ್ನುವ ನಮ್ಮ ಹೇಳಿಕೆ ಅಪಪ್ಟ ಸುಳ್ಳು.ಯಾಕೆಂದರೆ. ಯಾರೊಬ್ಬರನ್ನು ಜಯಲಲಿತಾ ಹತ್ತಿರ ಹೋಗಲು ಬಿಡುತ್ತಿರಲಿಲ್ಲ. ನಮಗೆ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯೂ ಇರಲಿಲ್ಲ ಎಂದು ತಿಳಿಸಿದ್ದಾರೆ.
 
ಎಐಎಡಿಎಂಕೆ ಸಚಿವ ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಚಿವ ಶ್ರೀನಿವಾಸನ್ ಜನತೆಯ ಕ್ಷಮೆ ಯಾಚಿಸಿದ್ದಾರೆ.
 
ಆಸ್ಪತ್ರೆಗೆ ಹಲವಾರು ನಾಯಕರು ಭೇಟಿ ನೀಡಿದ್ದರು. ಅವರನ್ನು ಮೊದಲ ಮಹಡಿಗೆ ಮಾತ್ರ ತೆರಳಲು ಅನುಮತಿ ನೀಡಲಾಗುತ್ತಿತ್ತು. ಜಯಲಲಿತಾ ಭೇಟಿಗೆ ಬಂದ ನಾಯಕರನ್ನು ಕುರ್ಚಿ ಅಥವಾ ನೆಲದ ಮೇಲೆ ಕುಳಿತುಕೊಳ್ಳಲು ಹೇಳಿ ಕೆಲ ಮಾತುಕತೆಗಳ ನಂತರ ಮರಳಬೇಕಾಗಿತ್ತು. ಅಮ್ಮನನ್ನು ನಾವ್ಯಾರೂ ನೋಡಲೇ ಇಲ್ಲ ಎಂದು ತಿಳಿಸಿದ್ದಾರೆ.
 
ಗವರ್ನರ್ ಸಿ ವಿದ್ಯಾಸಾಗರ್ ರಾವ್ ಮತ್ತು ಇತರ ಹಲವು ಗಣ್ಯರನ್ನು ಜಯಲಲಿತಾ ಕೋಣೆಯ ಮುಂಚೆಯೇ ನಿಲ್ಲಿಸಲಾಗುತ್ತಿತ್ತು. ನಾವು ಎಲ್ಲರೂ ಸುಳ್ಳು ಹೇಳಿದ್ದರಿಂದ ಪಕ್ಷದ ರಹಸ್ಯವು ಸೋರಿಕೆಯಾಗಲಿಲ್ಲ" ಎಂದು ಹೇಳಿದ್ದಾರೆ.
 
ಒಂದು ವಾರದ ಹಿಂದೆ, ಸಚಿವ ಅವರು ಶಶಿಕಲಾ ಮತ್ತು ಅವರ ಕುಟುಂಬ ಆಸ್ಪತ್ರೆಯಲ್ಲಿ ಜಯಲಲಿತಾ ಅವರ ಚಿಕಿತ್ಸೆಯ ಬಗ್ಗೆ ರಹಸ್ಯವನ್ನು ಕಾಪಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
 
ಕಳೆದ ವಾರ ಸಚಿವರೊಬ್ಬರು, ಶಶಿಕಲಾ ಮತ್ತು ಅವರ ಕುಟುಂಬದ ಸದಸ್ಯರು ಜಯಲಲಿತಾ ಆರೋಗ್ಯದ ಬಗ್ಗೆ ರಹಸ್ಯವನ್ನು ಕಾಪಾಡಿಕೊಂಡಿದ್ದರು ಎಂದು ಆರೋಪಿಸಿದ್ದರು.
 
ಜಯಲಲಿತಾ ಸಾವಿಗೆ ಶಶಿಕಲಾ ಮತ್ತು ಆಕೆಯ ಕುಟುಂಬದವರೇ ಹೊಣೆ. ಆಸ್ಪತ್ರೆಯಲ್ಲಿದ್ದಾಗ ಅವರನ್ನು ನೋಡಲು ಯಾರಿಗೂ ಅವಕಾಶ ನೀಡಲಿಲ್ಲ. ಅಮ್ಮ ಹೇಗೆ ಇಹಲೋಕ ತ್ಯಜಿಸಿದರು ಎನ್ನುವುದು ಶಶಿಕಲಾಗೆ ಮಾತ್ರ ಗೊತ್ತಿದೆ ಎಂದು ಅರಣ್ಯ ಖಾತೆ ಸಚಿವ ಸಿ.ಶ್ರೀನಿವಾಸನ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿ. ಶ್ರೀನಿವಾಸನ್ ಜಯಲಲಿತಾ ಎಐಎಡಿಎಂಕೆ ಶಶಿಕಲಾ ಅಮ್ಮ Jayalalithaa Aiadmk Amma Sasikala Family C Sreenivasan

ಸುದ್ದಿಗಳು

news

ವಿದೇಶಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಬಾಲಕನಿಗೆ ಧರ್ಮದೇಟು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ/ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ವಿದೇಶಿ ...

news

ಗೋಮಾಂಸ ತಿಂದಿದ್ದೇನೆ.. ಕೇಳೋಕೆ ನೀವ್ಯಾರು ಎಂದ ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ನಾನು ದನದ ಮಾಂಸ ತಿಂದಿದ್ದೇನೆ. ಅದನ್ನು ಕೇಳಲು ನೀವ್ಯಾರು ಎಂದು ಗೋರಕ್ಷಕರಿಗೆ ಸಚಿವ ಕಾಗೋಡು ...

news

ಸಚಿವ ಟಿ.ಬಿ.ಜಯಚಂದ್ರಗೆ ಛೀಮಾರಿ ಹಾಕಿದ ಗ್ರಾಮಸ್ಥರು

ತುಮಕೂರು: ಕಾನೂನುಖಾತೆ ಸಚಿವ ಟಿ.ಬಿ.ಜಯಚಂದ್ರಗೆ ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮಸ್ಥರು ಛೀಮಾರಿ ...

news

ಶಾಕಿಂಗ್! ಇಬ್ಬರು ಕಾಮುಕರಿಂದ ನರ್ಸ್ ಮೇಲೆ ಅತ್ಯಾಚಾರ

ಗಾಜಿಯಾಬಾದ್: ನರ್ಸ್ ಉದ್ಯೋಗದಲ್ಲಿರುವ ಯುವತಿ ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ...

Widgets Magazine
Widgets Magazine