ಜೈಲಿನಲ್ಲಿ ಶಶಿಕಲಾ ಫ್ರೀಬರ್ಡ್.. ಆರ್`ಟಿಐ ಬಯಲು ಮಾಡಿದೆ ಮತ್ತೊಂದು ಸತ್ಯ..?

ಬೆಂಗಳೂರು, ಬುಧವಾರ, 13 ಸೆಪ್ಟಂಬರ್ 2017 (11:25 IST)

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆಯಾ..? ಹೌದು ಎನ್ನುವಂತಿದೆ ಮಾಧ್ಯಮಗಳು ಬಿಡುಗಡೆ ಮಾಡಿರುವ ಆರ್`ಟಿಐ ಮಾಹಿತಿ.


ಶಶಿಕಲಾ ಜೈಲು ಸೇರಿ 6-7 ತಿಂಗಳು ಕಳೆದಿದ್ದು, ಇದುವರೆಗೂ ಶಶಿಲಾಗೆ ಯಾವುದೇ ಕೆಲಸ ನೀಡಿಲ್ಲ. ಜೈಲಿನ ನಿಯಮದ ಪ್ರಕಾರ ಜೈಲು ಶಿಕ್ಷೆಗೀಡಾದ ಕೈದಿಗೆ ಜೈಲಿನಲ್ಲಿರುವ ಕೆಲಸಗಳ ಪೈಕಿ ಯಾವುದಾದರೊಂದು ಕೆಲಸ ನೀಡಬೇಕು. ಆದರೆ, ಜೈಲಿನಲ್ಲಿ ಈ ಬಗ್ಗೆ ಯಾವುದೇ ನಿಯಮ ಪಾಲನೆ ಮಾಡಲಾಗಿಲ್ಲ ಎಂಬುದು ವರದಿಗಳಲ್ಲಿ ಸ್ಪಷ್ಟವಾಗಿದೆ. ಜೊತೆಗೆ ಫೆಬ್ರವರಿಯಿಂದ ಏಪ್ರಿಲ್ ತಿಂಗಳಿನಲ್ಲೇ 24 ಮಂದಿ ಶಶಿಕಲಾ ಅವರನ್ನ ಭೇಟಿಯಾಗಿರುವುದು ಆರ್`ಟಿಐ ಮಾಹಿತಿಯಲ್ಲಿ ಬೆಳಕಿಗೆ ಬಂದಿದೆ.    

ಈ ಹಿಂದೆ ಜೈಲಿನಲ್ಲಿ ಶಶಿಕಲಾ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಅಂದಿನ ಕಾರಾಗೃಹದ ಡಿಐಜಿ ಡಿ. ರೂಪಾ ನೀಡಿದ್ದ ವರದಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಶಶಿಕಲಾಗೆ ವಿಶೇಷ ಕಿಚನ್, ಸಿಬ್ಬಂದಿ ನೇಮಕ ಸೇರಿದಂತೆ ಹಲವು ವಿಷಯಗಳನ್ನೊಳಗೊಂಡಂತೆ ಉನ್ನತಾಧಿಕಾರಿಗೆ ವರದಿ ನೀಡಿದ್ದರು. ಈ ಪ್ರಕರಣ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಜೈಲಿನ ಮತ್ತೊಂದು ನಿಯಮ ಉಲ್ಲಂಘನೆ ಬಯಲಾದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಶಶಿಕಲಾ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ Sasikala Central Jail Parappana Agrahara

ಸುದ್ದಿಗಳು

news

ಬ್ರಿಟನ್ನಿನಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಮುಟ್ಟುಗೋಲು

ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ...

news

ರಾಜಕಾರಣಿಗಳು ಇನ್ನು ಪತ್ನಿಯ ಈ ಸೀಕ್ರೆಟ್ ಬಹಿರಂಗಪಡಿಸಬೇಕು!

ನವದೆಹಲಿ: ರಾಜಕಾರಣಿಗಳು ಚುನಾವಣೆ ಸಮಯ ಬಂದಾಗ ತಮ್ಮ ಆದಾಯ ಘೋಷಿಸಿ ಸುಮ್ಮನಾಗುತ್ತಾರೆ. ಆದರೆ ಪತ್ನಿಯ ...

news

ಗೌರಿ ಲಂಕೇಶ್, ಕುಲಬರ್ಗಿ ಹಂತಕರ ಬಗ್ಗೆ ಪೊಲೀಸರಿಗೆ ಸಿಕ್ಕಿದೆ ಒಂದು ಸುಳಿವು

ಬೆಂಗಳೂರು: ವಿಚಾರವಾದಿ ಗೌರಿ ಲಂಕೇಶ್ ಮತ್ತು ಎಂಎಂ ಕುಲಬರ್ಗಿ ಸಾವಿಗೀಡಾಗಿದ್ದು ಒಂದೇ ಆಯುಧದಿಂದ ಎಂದು ...

news

ಪ್ರತಾಪ್ ಸಿಂಹಗೆ ಬಿಎಸ್ ವೈ ತಪರಾಕಿ

ಬೆಂಗಳೂರು: ಮೈಸೂರು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ಪ್ರತಾಪ್ ಸಿಂಹಗೆ ಬಿಜೆಪಿ ...

Widgets Magazine