ನಾಲ್ಕು ವರ್ಷದ ಬಳಿಕ ಸಿಕ್ತು ಸೆರೆವಾಸದಿಂದ ಮುಕ್ತಿ

ನವದೆಹಲಿ, ಮಂಗಳವಾರ, 17 ಅಕ್ಟೋಬರ್ 2017 (07:47 IST)

ನವದೆಹಲಿ: ಜೋಡಿ ಕೊಲೆ ಆರೋಪ ಹೊತ್ತು ನಾಲ್ಕು ವರ್ಷದಿಂದ ಜೈಲು ಪಾಲಾಗಿದ್ದ ಆರುಷಿ ಪೋಷಕರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.


14 ವರ್ಷದ ಮಗಳು ಆರುಷಿ ತಲ್ವಾರ್ ಹಾಗೂ ಮನೆಕೆಲಸದ ಹೇಮರಾಜ್ ಕೊಲೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಕಳೆದ ವಾರ ಆರುಷಿ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ರನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್ ನ ದಾಸ್ನಾ ಜೈಲಿನಿಂದ ನಿನ್ನೆ(ಅ.16) ಬಿಡುಗಡೆಯಾಗಿದ್ದಾರೆ.

ನಾಲ್ಕು ವರ್ಷದ ಬಳಿಕ ಜೈಲುವಾಸದಿಂದ ಹೊರಬಂದ ತಲ್ವಾರ್ ದಂಪತಿಯನ್ನು ರಾಜೇಶ್ ಸಹೋದರ ದಿನೇಶ್ ತಲ್ವಾರ್, ವಕೀಲರಾದ ಮನೋಜ್ ಸಿಸೋಡಿಯಾ ಹಾಗೂ ತನ್ವೀರ್ ಅಹ್ಮದ್ ಮೀರ್ ಸಂತಸದಿಂದ ಬರಮಾಡಿಕೊಂಡರು. ಇದೇವೇಳೆ ಜೈಲಿನಿಂದ ತಮ್ಮ ಕಕ್ಷಿದಾರರು ಬಿಡುಗಡೆ ಆಗುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ತನ್ವೀರ್ ಹೇಳಿದ್ದಾರೆ.

ಇನ್ನು ದಂಪತಿ ವೃತ್ತಿಯಲ್ಲಿ ದಂತ ವೈದ್ಯರು. ಜೈಲಿನಲ್ಲಿರುವಷ್ಟು ದಿನ ಅಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿಡುಗಡೆಯಾದ ಬಳಿಕವೂ ತಲ್ವಾರ್ ದಂಪತಿ, 15 ದಿನಕ್ಕೊಮ್ಮೆ ಜೈಲಿಗೆ ತೆರಳಿ ಅಲ್ಲಿ ಚಿಕಿತ್ಸೆ ನೀಡುವುದಾಗಿ ದಂಪತಿ ಖುದ್ದು ಹೇಳಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ಆಧುನಿಕ ರಾವಣ: ಅನಂತ್ ಕುಮಾರ್

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ರಾವಣನಿದ್ದಂತೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ...

news

ಜೆಡಿಎಸ್‌‌ಗೆ ಹೋಗ್ತಿನಂತ ಯಾವ ಮುಠ್ಠಾಳ ಹೇಳಿದ್ದು: ಈಶ್ವರಪ್ಪ ಕಿಡಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯ ವೇಳೆಗೆ ಜೆಡಿಎಸ್ ಪಕ್ಷಕ್ಕೆ ಹೋಗ್ತಿನಂತ ಯಾವ ಮುಠ್ಠಾಳ ...

news

ಮೋದಿ ಸರಕಾರಕ್ಕೂ ಯುಪಿಎ ಸರಕಾರಕ್ಕೂ ವ್ಯತ್ಯಾಸವಿಲ್ಲ: ಆರೆಸ್ಸೆಸ್

ನಾಗ್ಪುರ್: ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರಕ್ಕೂ ಹಿಂದಿದ್ದ ಯುಪಿಎ ಸರಕಾರಕ್ಕೂ ಯಾವುದೇ ...

news

ಆ.22 ರಂದು ಬಿಜೆಪಿ ಅಥವಾ ಜೆಡಿಎಸ್ ಸೇರುವ ಬಗ್ಗೆ ತೀರ್ಮಾನ: ಸಿ.ಪಿ.ಯೋಗೇಶ್ವರ್

ಮದ್ದೂರು: ಮುಂಬರುವ ಕೆಲ ದಿನಗಳಲ್ಲಿ ಯಾವ ಪಕ್ಷ ಸೇರುತ್ತೇನೆ ಎನ್ನುವ ಬಗ್ಗೆ ಅಂತಿಮ ತೀರ್ಮಾನ ...

Widgets Magazine
Widgets Magazine