ಈಶಾನ್ಯ ರಾಜ್ಯಗಳಲ್ಲಿ ಭೀಕರ ಪ್ರವಾಹ, ಭೂಕುಸಿತ: 80 ಜನರ ಸಾವು

ಗುವಾಹಟಿ, ಶುಕ್ರವಾರ, 14 ಜುಲೈ 2017 (11:02 IST)

ಗುವಾಹಟಿ:ಈಶಾನ್ಯ  ಭಾಗದ ಮೂರು ರಾಜ್ಯಗಳಾದ ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರಗಳಲಿ ಉಂಟಾದ ನೆರೆ ಹಾಗೂ ಭೂಕುಸಿತದಿಂದ 58 ಜಿಲ್ಲೆಗಳಿಗೆ ಹಾನಿಯುಂಟಾಗಿದ್ದು, ಸುಮಾರು 80 ಮಂದಿ ಸಾವನ್ನಪ್ಪಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದಾರೆ.
 
ಅಸ್ಸಾಂನ ನ 26 ಜಿಲ್ಲೆಗಳಲ್ಲಿ 17 ಲಕ್ಷ ಜನ ಸಂತ್ರಸ್ತರಾಗಿದ್ದು ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೇರಿದೆ. ಬ್ರಹ್ಮಪುತ್ರ ಸೇರಿದಂತೆ ಇತರ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಹಲವು ಪಟ್ಟಣಗಳು ಜಲಾವೃತಗೊಂಡಿದ್ದು, ಕಟ್ಟಡಗಳು, ಮನೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ. 
 
ಕಾಝಿರಂಗ ರಾಷ್ಟ್ರೀಯ ಉದ್ಯಾನವನದ 70 ಶೇಕಡಾ ಭಾಗ ಜಲಾವೃತ್ತವಾಗಿದೆ. ಹಲವು ಪ್ರಾಣಿಗಳು ಸಾವನ್ನಪ್ಪಿದ್ದು ಕೆಲವು ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ. ಗೋಲಘಾಟ್‌, ಲಕ್ಕೀಂಪುರ್‌, ನಾಗೌನ್‌ನಲ್ಲಿ ಅತೀಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 86,000 ಹೆಕ್ಟೇರ್‌ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. ಇನ್ನು ಕೇಂದ್ರ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಈಶಾನ್ಯ ರಾಜ್ಯಗಳ  ನೆರೆ ಪರಿಸ್ಥಿತಿಯನ್ನು ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲಿಸಿದ್ದು, ಕೇಂದ್ರದಿಂದ ಎಲ್ಲಾ ರೀತಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  
ಈಶಾನ್ಯ ರಾಜ್ಯ ಪ್ರವಾಹ 80 ಜನರು ಸಾವು 80 Dead Assam Northeast Flood Arunachal Pradesh And Manipur

ಸುದ್ದಿಗಳು

news

ಚಾಮುಂಡೇಶ್ವರಿ ಮೆಟ್ಟಿಲು ಹತ್ತಿದ ಶೋಭಾ ಕರಂದ್ಲಾಜೆ

ಮೈಸೂರು: ಮಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆ ಮುಗಿಸಿ ರಾಜ್ಯ ರಾಜಧಾನಿಗೆ ಬರುವ ಮೊದಲು ಸಂಸದೆ ಶೋಭಾ ...

news

ಉದ್ಯೋಗ ಅಭದ್ರತೆ: ಹೋಟೆಲ್ ಟೆರೇಸ್`ನಿಂದ ಜಿಗಿದು ಐಟಿ ಉದ್ಯೋಗಿ ಆತ್ಮಹತ್ಯೆ

ಆಂಧ್ರಪ್ರದೇಶ ಮೂಲದ ಸಾಫ್ಟ್`ವೇರ್ ಇಂಜಿನಿಯರ್ ಹೋಟೆಲ್ ಟೆರೇಸ್`ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ...

news

‘ನಿಮ್ಮ ಬಾಡಿ ಕರೆಕ್ಟ್ ಶೇಪ್ ನಲ್ಲಿದೆ’

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ...

news

ಭಾರತ ಸುತ್ತುವರಿಯುತ್ತಿರುವ ಚೀನಾ ಪಡೆಗಳು

ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಸೇನಾ ಪಡೆಗಳನ್ನು ಬಿಟ್ಟು ಗಡಿ ತಗಾದೆ ತೆಗೆಯುತ್ತಿರುವ ಚೀನಾ ಮತ್ತೊಂದೆಡೆ ...

Widgets Magazine