ವಂದೇ ಮಾತರಂ ಹಾಡುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ: ನಖ್ವಿ

ನವದೆಹಲಿ, ಭಾನುವಾರ, 30 ಜುಲೈ 2017 (16:13 IST)

ನವದೆಹಲಿ: ವಂದೇ ಮಾತರಂ ಹಾಡುವುದು ಬಿಡುವುದು ಜನರ ಆಯ್ಕೆಗೆ ಬಿಟ್ಟ ವಿಚಾರ. ಒಂದು ವೇಳೆ ವಂದೇ ಮಾತರಂ ಹಾಡಲಿಲ್ಲವೆಂದಮಾತ್ರಕ್ಕೆ ಅವರನ್ನು ದೇಶದ್ರೋಹಿಗಳು ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.
 
ವಂದೇ ಮಾತರಂ ಕಡ್ಡಾಯಗೊಳಿಸಿ ಮದ್ರಾಸ್‌ ಹೈಕೋಟ್‌ ನೀಡಿರುವ ಆದೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು,. ವಂದೇ ಮಾತರಂ ಹಾಡುವುದು ಬಿಡುವುದು ಅವರವರ ಆಯ್ಕೆಗೆ ಬಿಟ್ಟಿದ್ದು. ಯಾರಿಗೆ ರಾಷ್ಟ್ರಗೀತೆ ಹಾಡಬೇಕೊ ಅವರು ಹಾಡಲಿ , ಇಷ್ಟವಿಲ್ಲದವರು ಹಾಡುವುದು ಬೇಡ. ಹಾಡದೇ ಇರುವವ ದೇಶದ್ರೋಹಿ ಆಗುವುದಿಲ್ಲ ಎಂದಿದ್ದಾರೆ. 
 
ಆದರೆ ಬಂಕೀಮ್‌ಚಂದ್ರ  ಚಟ್ಟೋಪಧ್ಯಾಯ ಅವರು ಬರೆದಿರುವ ರಾಷ್ಟ್ರ ಗೀತೆಯನ್ನು ಯಾರಾದರು ಉದ್ದೇಶಪೂರ್ವಕವಾಗಿ ವಿರೋಧಿಸಿದರೆ ಅದು ಅವರ ಕೆಟ್ಟ ಸಂಪ್ರದಾಯವನ್ನು ತೋರುತ್ತದೆ ಹೊರತು ಅದು ದೇಶದ ಹಿತಾಸಕ್ತಿಯನ್ನು ಅಲ್ಲ ಎಂದಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಾಮಮಾರ್ಗದಿಂದ ರಾಜ್ಯಗಳ ಕಬಳಿಕೆ: ಮೋದಿ ವಿರುದ್ಧ ದೇವೇಗೌಡ ವಾಗ್ದಾಳಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಾಮ ಮಾರ್ಗದ ಮೂಲಕ ಎಲ್ಲಾ ರಾಜ್ಯಗಳನ್ನು ವಶಕ್ಕೆ ತೆಗೆದುಕೊಳ್ಳಲು ...

news

ನೆಹರೂ-ಎಡ್ವಿನಾ ಮೌಂಟ್ ಬೇಟನ್ ಸಂಬಂಧದ ರಹಸ್ಯ ಬಿಚ್ಚಿಟ್ಟ ಎಡ್ವಿನಾ ಪುತ್ರಿ

ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಕೊನೆಯ ಬ್ರಿಟಿಷ್ ವೈಸರಾಯ್ ಲಾರ್ಡ್ ಲೂಯಿಸ್ ...

news

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ಅರೆಸ್ಟ್

ಬೆಂಗಳೂರು: ಶಾಲಾ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ...

news

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿ ರದ್ದು

ಬೆಂಗಳೂರು: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ...

Widgets Magazine