ಇದೀಗ, ಮದ್ಯ ಖರೀದಿಸಲು ಆಧಾರ ಕಾರ್ಡ್ ಬೇಕಂತೆ...!

ನವದೆಹಲಿ, ಗುರುವಾರ, 21 ಸೆಪ್ಟಂಬರ್ 2017 (15:31 IST)

ಮುಂದಿನ ಬಾರಿ ನೀವು ಹೈದರಾಬಾದ್‌ನಲ್ಲಿರುವ ಪಬ್‌ಗೆ ಹೋದಲ್ಲಿ ನಿಮ್ಮ ಆಧಾರ್ ಕಾರ್ಡ್ ಪ್ರದರ್ಶಿಸಲು ಸಿದ್ಧರಾಗುವಂತಹ ಪರಿಸ್ಥಿತಿ ಎದುರಾಗಿದೆ.
ಮಾಧ್ಯಮಗಳ ವರದಿಯ ಪ್ರಕಾರ, ತೆಲಂಗಾಣ ಸರಕಾರ, ಅಬಕಾರಿ ಇಲಾಖೆಗೆ ನೋಟಿಸ್ ನೀಡಿ, ಪಬ್‌ಗೆ ಹೋಗುವವರು ಗುರುತಿನ ಪತ್ರ ತೋರಿಸಬೇಕಾಗುತ್ತದೆ. ಅದರಲ್ಲೂ ಆಧಾರ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.
 
ನಗರದಾದ್ಯಂತವಿರುವ ಪಬ್‌ ಮಾಲೀಕರು, ತಮ್ಮ ಗ್ರಾಹಕರು ವಯಸ್ಸನ್ನು ಪ್ರಾಮಾಣಿಕರಿಸುವ ಆಧಾರ ಕಾರ್ಡ್ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. 21 ವರ್ಷ ವಯಸ್ಸಿನ ಕೆಳಗಿರುವವರಿಗೆ ಪಬ್ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಕೋರಿದೆ. 
 
ನಗರದ ಹೋಟೆಲ್‌ನಲ್ಲಿ 17 ವರ್ಷ ವಯಸ್ಸಿನ ಬಾಲಕಿ ಮತ್ತು ಆಕೆಯೊಂದಿಗಿದ್ದ ಇತರ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಲಾಗಿದೆ. ನಂತರ ಬಾಲಕಿಯನ್ನು ಹತ್ಯೆ ಮಾಡಲಾಗಿದೆ ಎನ್ನುವ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. 
 
ಹೆಚ್ಚುವರಿಯಾಗಿ, ತಮ್ಮ ಗ್ರಾಹಕರ ವಿವರಗಳನ್ನು ಪ್ರತ್ಯೇಕವಾಗಿ ನೋಂದಾಯಿಸುವಂತೆ ಪಬ್ ಮತ್ತು ಬಾರ್ ಮ್ಯಾನೇಜರ್‌ಗಳಿಗೆ ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಹೈದ್ರಾಬಾದ್ ಪಬ್ ಆಧಾರ ಕಾರ್ಡ್ ಅಬಕಾರಿ ಇಲಾಖೆ Hyderabad Alchohol Hyderabad Pub Aadhaar Card Telangana Prohibition And Excise Department

ಸುದ್ದಿಗಳು

news

ಕುಡಿದ ಮತ್ತಿನಲ್ಲಿ ಉಬೇರ್ ಕಾರು ಚಾಲಕನ ಮೇಲೆ ಹಲ್ಲೆ ನಡಿಸಿದ ನಟಿಯ ಬಂಧನ

ಕೊಚ್ಚಿ: ಮದ್ಯ ಸೇವಿಸಿದ ಮತ್ತಿನಲ್ಲಿ ಉಹೇರ್ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಟಿವಿ ...

news

ರೌಡಿಶೀಟರ್ ನಾಗರಾಜ್, ಮಕ್ಕಳಿಗೆ ಹೈಕೋರ್ಟ್`ನಿಂದ ಜಾಮೀನು

ಪೊಲೀಸ್ ದಾಳಿ ವೇಳೆ ಮನೆಯಲ್ಲಿ ಕೋಟಿ ಕೋಟಿ ನಿಷೇಧಿತ ನೋಟು ಪತ್ತೆಯಾಗಿ ಬಂಧನಕ್ಕೀಡಾಗಿದ್ದ ರೌಡಿ ಶೀಟರ್ ...

news

ಟ್ರಾಲ್`ನ ಸಿಆರ್`ಪಿಎಫ್ ಯೂನಿಟ್ ಮೇಲೆ ಉಗ್ರರ ದಾಳಿ: ಮೂವರು ಸ್ಥಳೀಯರು ಬಲಿ

ಸಿಆರ್`ಪಿಎಫ್ ಯೂನಿಟ್ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟು, 20ಕ್ಕೂ ...

news

21 ವರ್ಷದ ಯುವತಿ ಮೇಲೆ ಅತ್ಯಾಚಾರ: 70 ವರ್ಷದ ಸ್ವಯಂಘೋಷಿತ ದೇವಮಾನವ ಅರೆಸ್ಟ್

ಜೈಪುರ್: ರಾಜಸ್ಥಾನದ ಸ್ವಯಂಘೋಷಿತ ದೇವಮಾನವ ನಿರಂತರವಾಗಿ ಅತ್ಯಾಚಾರಗೈದಿದ್ದಾನೆ ಎಂದು 21 ವರ್ಷದ ...

Widgets Magazine