Widgets Magazine
Widgets Magazine

ಪಾಕಿಸ್ತಾನದೊಂದಿಗೆ ಯುದ್ಧ ಘೋಷಿಸಿ: ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಯುವಕರು

ಸಂಭಾಲ್, ಗುರುವಾರ, 22 ಸೆಪ್ಟಂಬರ್ 2016 (17:50 IST)

Widgets Magazine

ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿ ದೇಶಾದ್ಯಂತ ಆಕ್ರೋಶ ಮೂಡಿಸಿದೆ. ಇದೀಗ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಯುವಕರು ತಮ್ಮ ರಕ್ತದಿಂದ ಪ್ರಧಾನಿ ಮೋದಿಗೆ ಪತ್ರ ಬರೆದು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸುವಂತೆ ಒತ್ತಾಯಿಸಿದ್ದಾರೆ.
 
ಶಹಿದೋಂ ಕೋ ಇನ್ಸಾಫ್ ಚಾಯಿಯೇ, ನವಾಜ್ ಕೋ ಹೋಶ್ ಮೇ ಲಾವೋ, ವಾರ್ತಾ ನಹೀ ಜಂಗ್ ಚಾಯಿಯೇ, ವಿಶ್ವಸಂಸ್ಖೆಯಲ್ಲಿ ನವಾಜ್ ಭಾಷಣ ಮಾಡಿದ ನಂತರವಾದರೂ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಯುವಕರು ರಕ್ತದಿಂದ ಪತ್ರ ಬರೆದಿದ್ದಾರೆ.   
 
ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಉರಿ ಸೇನಾ ಕಚೇರಿಯ ಮೇಲೆ ಬೆಳಗಿನ ಜಾವ ದಾಳಿ ನಡೆಸಿದ ಉಗ್ರರು, 18 ಸೈನಿಕರನ್ನು ಹತ್ಯೆಗೈದಿದ್ದಲ್ಲದೇ 20 ಕ್ಕೂ ಹೆಚ್ಚು ಸೈನಿಕರನ್ನು ಗಾಯಗೊಳಿಸಿದ್ದರು. 
 
ನಂತರ ನಡೆದ ಎನ್‌ಕೌಂಟರ್‌ನಲ್ಲಿ ಸೇನಾಪಡೆಗಳು ಕೆಲವೇ ಗಂಟೆಗಳಲ್ಲಿ ಉಗ್ರರನ್ನು ಹೊಡೆದುರುಳಿಸಿದ್ದರು. 
 
ಸೇನಾ ಕಚೇರಿಯ ಮೇಲೆ ದಾಳಿ ನಡೆಸಿದ ಉಗ್ರರು ಮೂಲದ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿದ್ದಾರೆ. ದಾಳಿಯ ಹಿಂದಿರುವವರನ್ನು ಶಿಕ್ಷಿಸದೇ ಬಿಡಲಾರೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೋಕಾ ಕೋಲಾ ಮತ್ತು ಪೆಪ್ಸಿಕೊ ಮೇಲೆ ಹೆಚ್ಚಿನ ತೆರಿಗೆಗೆ ಆಗ್ರಹ

ಕೋಕಾ ಕೋಲಾ ಮತ್ತು ಪೆಪ್ಸಿಕೊ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವಂತೆ ಯೋಗ ಗುರು ಬಾಬಾ ...

news

ಪ್ರಾದೇಶಿಕ ಭಾಷೆಯಲ್ಲೂ 'ಮನ್ ಕೀ ಬಾತ್'

ಪ್ರಧಾನಿ ಮೋದಿ ಅವರ ರೇಡಿಯೋ ಭಾಷಣ 'ಮನ್ ಕೀ ಬಾತ್' ಇನ್ನು ಮುಂದೆ ಪ್ರಾದೇಶಿಕ ಭಾಷೆಯಲ್ಲಿ ಕೂಡ ...

news

ಷರೀಫ್‌ಗೆ ಮುಖಭಂಗ; ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಿ: ವಿಶ್ವಸಂಸ್ಥೆ

ಕಾಶ್ಮೀರ ವಿವಾದವನ್ನು ಬಗೆಹರಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂಬ ಪಾಕಿಸ್ತಾನದ ಪ್ರಧಾನಿ ನವಾಜ್ ...

news

ಪಾಕ್ ಉಗ್ರ ರಾಷ್ಟ್ರ: ಭಾರತ

ಪಾಕಿಸ್ತಾನ 'ಭಯೋತ್ಪಾದಕ ರಾಷ್ಟ್ರ', ನಮ್ಮ ವಿರುದ್ಧ ಭಯೋತ್ಪಾದನೆ ನಡೆಸುವುದನ್ನು ಸುದೀರ್ಘ ಕಾಲದ ...

Widgets Magazine Widgets Magazine