Widgets Magazine
Widgets Magazine

ನ್ಯೂಸ್ ಪೇಪರ್ ಜಾಹೀರಾತು ಮೂಲಕ ತಲಾಖ್ ಕೊಟ್ಟ ಭೂಪ

ಹೈದ್ರಾಬಾದ್, ಗುರುವಾರ, 6 ಏಪ್ರಿಲ್ 2017 (10:05 IST)

Widgets Magazine

ವಾಟ್ಸಾಪ್, ಫೇಸ್ಬುಕ್, ಪೋಸ್ಟ್ ಕಾರ್ಡ್ ಬಳಿಕ ನ್ಯೂಸ್ ಪೇಪರ್ ಜಾಹೀರಾತು ಮೂಲಕವೂ ತಲಾಖ್ ನೀಡುವ ಪರಿಪಾಠಕ್ಕೂ ಮುನ್ನುಡಿ ಬರೆದಿದ್ದಾನೆ ಸೌದಿಯ ಅನಿವಾಸಿ ಭಾರತೀಯ. ಪತ್ರಿಕೆಯಲ್ಲಿ ಗಂಡ ತಲಾಖ್ ಕೊಟ್ಟಿರುವ ಜಾಹೀರಾತು ಕಂಡು ಶಾಕ್`ಗೆ ಒಳಗಾದ ಹೈದ್ರಬಾದ್`ನ ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದಾಳೆ.
 


ಹೈದ್ರಾಬಾದ್ ಮೂಲದ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಮೊಹಮ್ಮದ್ ಮುಸ್ತಾಖುದ್ದೀನ್ ಇಂತಹ ಆರೋಪ ಎದುರಿಸುತ್ತಿದ್ದಾನೆ. 2015ರಲ್ಲಿ ಮೊಹಮ್ಮದ್ 25 ವರ್ಷದ ಯುವತಿಯನ್ನ ಮದುವೆಯಾಗಿದ್ದ. ಬಳಿಕ ಪತ್ನಿಯನ್ನ ಸೌದಿಗೆ ಕರೆದೊಯ್ದಿದ್ದ. ಕಳೆದ ತಿಂಗಳು 10 ತಿಂಗಳ ಮಗುವಿನ ಜೊತೆ ದಂಪತಿ ತವರಿಗೆ ಬಂದಿದ್ದರು. ಬಳಿಕ ಮಗು ಮತ್ತು ತಾಯಿಯನ್ನ ಮೊಹಮ್ಮದ್ ಹೈದ್ರಾಬಾದ್`ನಲ್ಲಿ ಬಿಟ್ಟು ತೆರಳಿದ್ದಾನೆ.
 
ಮೊಹಮ್ಮದ್ ಸೌದಿಗೆ ಹೋಗಿದ್ದೇ ಹೋಗಿದ್ದು ಮೊಹಮ್ಮದ್ ಸಂಬಂಧಿಕರು ಪತ್ನಿಯನ್ನ ಮನೆಗೆ ಸೇರಿಸಿಲ್ಲ. ಈ ಮಧ್ಯೆ, ಸ್ಥಳೀಯ ಉರ್ದು ಪತ್ರಿಕೆಯಲ್ಲಿ ಗಂಡ ನೀಡಿರುವ ತಲಾಖ್ ಜಾಹೀರಾತು ಕಣ್ಣಿಗೆ ಬಿದ್ದಿದೆ. ಪೊಲೀಸರು ಹೇಳುವ ಪ್ರಕಾರ, ಮೊಹಮ್ಮದ್ ಸೌದಿಗೆ ತೆರಳುವ ಮುನ್ನ 20 ಲಕ್ಷ ವರದಕ್ಷಿಣೆಗಾಗಿ ಪತ್ನಿಯನ್ನ ಪೀಡಿಸಿದ್ದ. ಇದೇ ಕಾರಣಕ್ಕೆ ತಲಾಖ್ ನೀಡಿರಬಹುದು ಎಂದಿದ್ದಾರೆ.
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹುಡುಗಿ ಸಿಗದಿದ್ದಕ್ಕೆ ಈ ಭೂಪ ಮಾಡಿದ್ದೇನು ಗೊತ್ತೇ?!

ಬೀಜಿಂಗ್: ನಮ್ಮಲ್ಲಿ ಈಗ ಮದುವೆಯಾಗಬೇಕಾದರೆ ಹುಡುಗಿ ಸಿಗೋದು ಕಷ್ಟ ಎನ್ನುವ ಮಾತು ಕೇಳಿದ್ದೇವೆ. ಆದರೆ ಈ ...

news

ಉತ್ತರ ಪ್ರದೇಶದಲ್ಲಿ ಇನ್ನು ಜೀನ್ಸ್ ಪ್ಯಾಂಟ್ ಗೂ ನಿಷೇಧ!

ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಉತ್ತರ ಪ್ರದೇಶದಲ್ಲಿ ಮದ್ಯ, ಮಾಂಸ, ...

news

ನಿದ್ದೆ ಮಾತ್ರೆ ಸೇವಿಸಿದ್ದ ಪ್ರಥಮ್ ಕಿಮ್ಸ್ ಆಸ್ಪತ್ರೆಗೆ ದಾಖಲು

ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್ ಆಸ್ಪತ್ರೆಯಲ್ಲೂ ಗಲಾಟೆ ...

news

ಸಿಎಂ ಸಿದ್ದರಾಮಯ್ಯ ನಿನಗೆ ಯೋಗ್ಯತೆಯಿದ್ರೆ ಸಾಲ ಮನ್ನಾ ಮಾಡು: ಬಿಎಸ್‌ವೈ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಿನಗೆ ಯೋಗ್ಯತೆಯಿದ್ರೆ ರೈತರ ಸಾಲ ಮನ್ನಾ ಮಾಡು ಎಂದು ಬಿಜೆಪಿ ...

Widgets Magazine Widgets Magazine Widgets Magazine