ವೃಷಣಗಳನ್ನೇ ಕತ್ತರಿಸಿ ಶಿವನಿಗರ್ಪಿಸಿದ... ಏಕೆ ಗೊತ್ತಾ?

ಗಂಜಮ್, ಸೋಮವಾರ, 6 ಮಾರ್ಚ್ 2017 (14:23 IST)

Widgets Magazine

ಬೇಡರ ಕಣ್ಣಪ್ಪ ಭಕ್ತಿಯ ಪರವಶತೆಯಲ್ಲಿ ತನ್ನೆರಡು ಕಣ್ಣುಗಳನ್ನು ಶಿವನಿರ್ಪಿಸಿದ ಕಥೆಯನ್ನು ಕೇಳಿರುತ್ತೀರ. ಭಕ್ತ ಸಿರಿಯಾಳ ತನ್ನ ಮಗ ಚಿಲ್ಲಾಳನನ್ನು ಕತ್ತರಿಸಿ ದೇವಾದಿದೇವ ಮಹಾದೇವನಿಗೆ ಉಣಬಡಿಸಿರುವ ಬಗ್ಗೆ ಕೂಡ ಪುರಾಣದಲ್ಲಿ ಕಥೆ ಇದೆ. ಆದರೆ ಒಡಿಶಾದಲ್ಲೊಂದು ವಿಲಕ್ಷಣ ಕೃತ್ಯ ನಡೆದಿದ್ದು ವ್ಯಕ್ತಿಯೋರ್ವ ತನ್ನ ವೃಷಣಗಳೆರಡನ್ನು ಕತ್ತರಿಸಿ ಶಿವನಿಗರ್ಪಿಸಿದ್ದಾನೆ. ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿರುವ ಈತ, ಇದರಿಂದ ಮುಕ್ತಿ ನೀಡು ಎಂದು ದೇವರಲ್ಲಿ ಪ್ರಾರ್ಥಿಸಿ ತನ್ನೆರಡು ವೃಷಣಗಳನ್ನು ಅರ್ಪಿಸಿದ್ದಾನೆ ಎನ್ನಲಾಗುತ್ತಿದೆ.
ಗಂಜಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು , ಅಲಸು ಜಿಲ್ಲೆಯ 40 ವರ್ಷದ ನಟವರ್ ನಾಯ್ಕ ಶುಕ್ರವಾರ ಸಂಜೆ  ಪ್ರಜ್ಞಾಹೀನ ಸ್ಥಿತಿಯಲ್ಲಿ, ರಕ್ತದ ಮಡುವಿನಲ್ಲಿ ದೇವಸ್ಥಾನದಲ್ಲಿ ಬಿದ್ದಿದ್ದ, ಅಲ್ಲಿನ ಪೂಜಾರಿ ಹೇಳುವ ಪ್ರಕಾರ ಗುರುವಾರ ರಾತ್ರಿಯಿಂದಲೇ ಆತ ದೇವಸ್ಥಾನದಲ್ಲಿ ಪ್ರಾರ್ಥನೆಯಲ್ಲಿ ತಲ್ಲೀನನಾಗಿದ್ದ. ದೇವಸ್ಥಾನದ ಬಾಗಿಲು ಮುಚ್ಚಿದ ಪೂಜಾರಿ ಅಲ್ಲಿಂದ ತೆರಳಿದ್ದಾನೆ. ಆದರೂ ನಟವರ್ ಅಲ್ಲೇ ಇದ್ದ.
 
ಶುಕ್ರವಾರ ಪೂಜಾರಿ ಹಿಂತಿರುಗಿದಾಗ ನಟವರ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.ತಕ್ಷಣ ಆತ ದೇವಸ್ಥಾನದ ಆಡಳಿತ ಮಂಡಳಿಗೆ ಈ ಕುರಿತು  ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಅಲ್ಲಿ ಅವರೆಲ್ಲ ಕಂಡ ದೃಶ್ಯ ನಿಜಕ್ಕೂ ಭೀಕರವಾಗಿತ್ತು. ನಟವರ್ ತನ್ನ ವೃಷಣಗಳೆಡನ್ನು ಕತ್ತರಿಸಿ ಶಿವನ ವಾಹನ ನಂದಿಯ ಮೂರ್ತಿಯ ಮೇಲಿಟ್ಟಿದ್ದಾನೆ.
 
ಕೆಲವರು ಹೇಳುವ ಪ್ರಕಾರ ಅಪಸ್ಮಾರ ಕಾಯಿಲೆಯಿಂದ ಮುಕ್ತಿ ಕೋರಿ ನಟವರ್ ಈ ರೀತಿ ಹರಕೆ ಒಪ್ಪಿಸಿದ್ದಾನೆ. ಇನ್ನು ಕೆಲವರ ಪ್ರಕಾರ ಮಕ್ಕಳಾಗಿಲ್ಲವೆಂಬ ನೋವಿನಲ್ಲಾತ ಈ ರೀತಿಯಾಗಿ ನಡೆದುಕೊಂಡಿದ್ದಾನೆ.
 
ಪೊಲೀಸರು ತನಿಖೆ ನಡೆಸುತ್ತಿದ್ದು ನಟವರ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಜಾವತಿ ಬಂಧನ ತಡೆಗೆ ಸುಪ್ರೀಂ ನಕಾರ

ಅತ್ಯಾಚಾರ ಆರೋಪದಡಿ ಬಂಧನ ಭೀತಿ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಉತ್ತರಪ್ರದೇಶದ ಸಚಿವ ಗಾಯತ್ರಿ ...

news

8 ದಿನದ ಶಿಶುವಿನ ಪ್ರಾಣ ಕಾಪಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ 8 ದಿನದ ಶಿಶುವಿನ ಪಾಲಿಗೆ ನಿಜಕ್ಕೂ ದೇವರಾದರು. ಶ್ವಾಸಕೋಶ ...

news

3 ಆಟೋಗಳಿಗೆ ಗುದ್ದಿದ ಟ್ರಕ್: 7 ದುರ್ಮರಣ

ಉತ್ತರ ಪ್ರದೇಶದ ಆಗ್ರಾ- ಮಥುರಾ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ನಡೆದಿದ್ದು, 7 ಜನರು ...

news

ಗೊಂದಲದ ಗೂಡು: ಬಿಎಸ್‌ವೈ ಸಭೆಗೆ ಈಶ್ವರಪ್ಪ ಬಣ ಗೈರು

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ನಡುವಿನ ಜಟಾಪಟಿ ಮುಂದುವರಿದಿದೆ. ಇಂದು ...

Widgets Magazine Widgets Magazine