ಒಂದೇ ಒಂದು ಪಕ್ಷದಲ್ಲಿ ಹೇರಳ ಹಣವಿದೆ: ಬಿಜೆಪಿಗೆ ಶಿವಸೇನೆ ಪರೋಕ್ಷ ಟಾಂಗ್

ಮುಂಬೈ, ಸೋಮವಾರ, 23 ಅಕ್ಟೋಬರ್ 2017 (17:00 IST)

ದೇಶದ ರಾಜಕೀಯ ಪಕ್ಷಗಳಲ್ಲಿ ಒಂದೇ ಪಕ್ಷದಲ್ಲಿ ಮಾತ್ರ ಅನಿಗದಿತ ಹಣವಿದೆ. ಗೋವಾ, ಮಣಿಪುರ ರಾಜ್ಯಗಳಲ್ಲಿ ಮತದಾರರು ತಿರಸ್ಕರಿಸಿದ್ದರೂ ಹಣದ ಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಶಿವಸೇನೆ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. 
ಹಣದ ಬಲದಿಂದ ಶಿವಸೇನೆಯನ್ನು ಛಿದ್ರ ಛಿದ್ರಗೊಳಿಸಲು ಪ್ರಯತ್ನಿಸಿದೆ. ನೋಟು ನಿಷೇಧದ ನಂತರ ಆರ್ಥಿಕತೆಯಲ್ಲಿ ಕುಸಿತವಾಗಿದ್ದರೂ ಒಂದು ಪಕ್ಷ  ಮಾತ್ರ ಹಣದ ಬಲದಿಂದ ಗೋವಾ, ಮಣಿಪುರ ರಾಜ್ಯಗಳಲ್ಲಿ ಮತದಾರರು ತಿರಸ್ಕರಿಸಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಟೀಕಿಸಲಾಗಿದೆ.
 
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಬಿಜೆಪಿ ಪಕ್ಷ ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಸರಕಾರ ರಚಿಸಿತ್ತು. ಹಣದ ಬಲದಿಂದ ಕುದುರೆ ವ್ಯಾಪಾರವನ್ನು ಯಾವ ಪಕ್ಷ ನಡೆಸುತ್ತಿದೆ ಎನ್ನುವುದನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದೆ.
 
ಶಿವಸೇನೆಯನ್ನು ಕೂಡಾ ಹಣದ ಬಲದಿಂದ ಖರೀದಿಸಲು ನಮ್ಮ ಹಿರಿಯ ಮಿತ್ರಪಕ್ಷ ಪ್ರಯತ್ನಿಸಿದೆ. ಆದರೆ, ಸಫಲವಾಗಿಲ್ಲ. ಒಂದು ವೇಳೆ ಶಿವಸೇನೆ ಸರಕಾರದಿಂದ ಬೆಂಬಲ ಹಿಂಪಡೆದರೂ ಸರಕಾರ ಸ್ಥಿರವಾಗಿರಲು ಬೆಂಬಲ ನೀಡಲಿದೆ ಎಂದು ಶಿವಸೇನೆ ಮುಖವಾಣಿ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮದ್ಯದ ಮತ್ತಿನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ರೇಪ್ ಎಸಗಿದ ಭೂಪ

ವಿಶಾಖಪಟ್ಟಣಂ: ಮದ್ಯ ಸೇವಿಸಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಫುಟ್ಪಾತ್‌ ಮೇಲೆಯೇ ಮಹಿಳೆಯೊಬ್ಬಳ ಮೇಲೆ ...

news

ಯುವತಿಯ ಮುಂದೆ ಹಸ್ತಮೈಥುನಗೈದ ಆರೋಪಿ ಅರೆಸ್ಟ್

ಮುಂಬೈ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆಕೆಯ ಮುಂದೆಯೇ ಹಸ್ತಮೈಥುನ ಮಾಡಿಕೊಂಡ 30 ವರ್ಷದ ...

news

ಬಿಜೆಪಿ ಘೋಷಣೆಗಳನ್ನು ಮಾತ್ರ ನೀಡಿದೆ, ರಾಹುಲ್ ಪ್ರಾಮಾಣಿಕL ಅಲ್ಪೇಶ್ ಠಾಕೂರ್

ಗಾಂಧಿನಗರ್(ಗುಜರಾತ್): ಬಿಜೆಪಿ ಕೇವಲ ಘೋಷಣೆಗಳನ್ನು ನೀಡುತ್ತಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ...

news

ತಾಜ್‌ಮಹಲ್ ನಮ್ಮ ಸಂಸ್ಕ್ರತಿ, ಇತಿಹಾಸದ ಭಾಗ: ಸಿಎಂ ಯೋಗಿ

ಚಿತ್ರಕೋಟ್: ನನ್ನ ತಾಜ್‌ಮಹಲ್ ಭೇಟಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವುದರಿಂದ, ತಾಜ್‌ಮಹಲ್‌ನ್ನು ...

Widgets Magazine
Widgets Magazine