ಆಪರೇಷನ್ ಕಮಲ ಭಯ: ಕರ್ನಾಟಕಕ್ಕೆ ಬಂದ ಗುಜರಾತ್ ಕೈ ಶಾಸಕರು

ಬೆಂಗಳೂರು, ಶನಿವಾರ, 29 ಜುಲೈ 2017 (09:55 IST)

Widgets Magazine

ಬೆಂಗಳೂರು: ಗುಜರಾತ್ ನಲ್ಲಿ ಕಾಂಗ್ರೆಸ್ ನಾಯಕ ವಘೇಲಾ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಪಾಳಯ ಸೇರಿಕೊಂಡ ಮೇಲೆ ಮತ್ತಷ್ಟು ಶಾಸಕರು ಬಿಜೆಪಿ ಸೇರಬಹುದೆಂಬ ಭೀತಿಯಲ್ಲಿ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ.


 
ಇದರೊಂದಿಗೆ ಮತ್ತೊಂದು ರೆಸಾರ್ಟ್ ರಾಜಕಾರಣ ಶುರುವಾಗಿದೆ. ಈ ವರ್ಷಾಂತ್ಯದಲ್ಲಿ ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಕೈ ಶಾಸಕರನ್ನು ಬಿಜೆಪಿ ಸೆಳೆದುಕೊಳ್ಳಬಹುದು ಎಂಬ ಭಯದಲ್ಲಿರುವ ಕೈ ಪಾಳಯ ಕರ್ನಾಟಕದ ರೆಸಾರ್ಟ್ ಒಂದರಲ್ಲಿ ಪಕ್ಷದ  ಶಾಸಕರನ್ನು ಇರಿಸಿದೆ.
 
ಇಂದು ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾಸಕರನ್ನು ಡಿ.ಕೆ. ಶಿವಕುಮಾರ್ ಸಹೋದರ ಸಂಸದ ಡಿಕೆ ಸುರೇಶ್ ಬರಮಾಡಿಕೊಂಡು ರೆಸಾರ್ಟ್ ಗೆ ಕರೆದೊಯ್ದಿದ್ದಾರೆ. ಆಪರೇಷನ್ ಕಮಲಕ್ಕೆ ಬಲಿಯಾಗುವ ಆತಂಕದಲ್ಲಿರುವ ಕೈ ಶಾಸಕರು ಕೆಲವು ದಿನಗಳ ಮಟ್ಟಿಗೆ ಇಲ್ಲಿಯೇ ಉಳಿದುಕೊಳ್ಳಲಿದ್ದಾರೆ.
 
ಬಿಹಾರ ರಾಜ್ಯವನ್ನೂ ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಯಶಸ್ವಿಯಾಗಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಂತ್ರ ಗುಜರಾತ್ ನಲ್ಲೂ ಫಲ ಕೊಡಬಹುದೆಂಬ ಭೀತಿಯಲ್ಲಿ ಕೈ ಶಾಸಕರಿದ್ದಾರೆ.
 
ಇದನ್ನೂ ಓದಿ..  ಅಭಿಮಾನಿಗಳ ಆಕ್ರೋಶದ ನಡುವೆಯೇ ಅರ್ಧಶತಕ ದಾಖಲಿಸಿದ ಅಭಿನವ್ ಮುಕುಂದ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗುಜರಾತ್ ಕಾಂಗ್ರೆಸ್ ಪ್ರಧಾನಿ ಮೋದಿ ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಸುದ್ದಿಗಳು Bjp Pm Modi Amith Shah Gujrath Congress National News

Widgets Magazine

ಸುದ್ದಿಗಳು

news

‘ಕೆಟ್ಟ ಪದ ಬಳಕೆ ಮಾಡಲು ಕೇಜ್ರಿವಾಲ್ ಸೂಚಿಸಿದ್ದರು’

ನವದೆಹಲಿ: ಅರುಣ್ ಜೇಟ್ಲಿ ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಎದುರಿಸುತ್ತಿರುವ ದೆಹಲಿ ...

news

ಗಂಡನಿಗೆ ಸೆಕ್ಸ್ ಒಲ್ಲೆನೆನ್ನುವುದೂ ಕಿರುಕುಳವಂತೆ!

ಮಲೇಷ್ಯಾ: ಗಂಡ ಮಧುಮಂಚಕ್ಕೆ ಕರೆದರೆ ಮರು ಮಾತನಾಡದೇ ಪತ್ನಿ ಆತನ ಜತೆ ದೇಹ ಹಂಚಿಕೊಳ್ಳಬೇಕು. ಆಕೆ ...

news

ಗುಜರಾತ್ ಕಾಂಗ್ರೆಸ್‌ನಲ್ಲಿ ಉಲ್ಬಣಿಸಿದ ಬಿಕ್ಕಟ್ಟು: 6 ಶಾಸಕರ ರಾಜೀನಾಮೆ

ವಡೋದರಾ: ಗುಜರಾತ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಲ್ಬಣಿಸಿದ್ದು ಮೂರು ದಿನಗಳಲ್ಲಿ ಆರು ಕಾಂಗ್ರೆಸ್ ...

news

ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ: ಕೇಂದ್ರಕ್ಕೆ ಸಿಎಂ ಪತ್ರ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಕುರಿತಂತೆ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ...

Widgets Magazine