ಪಾಕಿಸ್ತಾನ ದುರ್ಬಲ ರಾಷ್ಟ್ರವಲ್ಲ, ಮುಟ್ಟಿದರೆ ತಟ್ಟಿ ಬಿಡ್ತದೆ: ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ

ಶ್ರೀನಗರ:, ಗುರುವಾರ, 16 ನವೆಂಬರ್ 2017 (14:20 IST)

ವಿವಾದಾತ್ಮಕ ಹೇಳಿಕೆ ನೀಡುವುದನ್ನೇ ಕಾಯಕವಾಗಿಸಿಕೊಂಡಿರುವ ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಪಾಕ್ ಆಕ್ರಮಿತ ಕಾಶ್ಮಿರವನ್ನು ವಶಪಡಿಸಿಕೊಳ್ಳಲು ದುರ್ಬಲ ರಾಷ್ಟ್ರವಲ್ಲ ಎಂದು ಹೇಡಿ ಹೇಳಿಕೆ ನೀಡಿದ್ದಾರೆ. 
 
ನೆರೆಯ ರಾಷ್ಟ್ರವಾದ ಪಾಕಿಸ್ತಾನ ಶಕ್ತಿಶಾಲಿ ರಾಷ್ಟ್ರವಾಗಿದ್ದರಿಂದ ಪಾಕ್ ಆಕ್ರಮಿತ ಕಾಶ್ಮಿರವನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
 
ಪಾಕ್ ಆಕ್ರಮಿತ ಕಾಶ್ಮಿರವನ್ನು ವಶಕ್ಕೆ ತೆಗೆದುಕೊಳ್ಳುವುದಾಗಿ ಭಾರತ ಹೇಳುತ್ತಿದೆ. ಆದರೆ, ಪಾಕಿಸ್ತಾನ ದುರ್ಬಲ ರಾಷ್ಟ್ರವಲ್ಲ ಎನ್ನುವುದು ಭಾರತ ಸರಕಾರಕ್ಕೆ ತಿಳಿದಿರಬೇಕು. ಪಾಕ್ ಹತ್ತಿರ ಅಣ್ವಸ್ತ್ರಗಳಿವೆ ಎನ್ನುವುದನ್ನು ಮರೆಯಬಾರದು ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
 
ನೆರೆಯ ರಾಷ್ಟ್ರದೊಂದಿಗೆ ಯುದ್ಧ ಮಾಡುವುದರಿಂದ ಯಾವುದೇ ಸಾಧನೆಯಾಗದು. ಯುದ್ಧದಿಂದ ಯಾವುದೇ ರಾಷ್ಟ್ರಕ್ಕೆ ಲಾಭವಾಗುವುದಿಲ್ಲ ಎಂದು ಜಮ್ಮು ಕಾಶ್ಮಿರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಪುಕ್ಕಟೆ ಸಲಹೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಪಿಎಂಇ ವಿಧೇಯಕ ಜಾರಿಗೆ ತರಬೇಡಿ: ಸಿಎಂಗೆ ಪುತ್ರ ಯತೀಂದ್ರ ಸಲಹೆ

ಬೆಂಗಳೂರು: ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಂಇ ವಿಧೇಯಕ ಜಾರಿಗೆ ತರಬೇಡಿ ಎಂದು ...

news

ಮಹಾತ್ಮಾ ಗಾಂಧಿ ಹಂತಕನಿಗೆ ದೇವಾಲಯ ನಿರ್ಮಿಸಲಿರುವ ಹಿಂದು ಮಹಾಸಭಾ

ಭೋಪಾಲ್: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯ ದೇವಾಲಯವನ್ನು ಬಲಪಂಥೀಯ ಸಂಘಟನೆಯಾದ ...

news

ವೈದ್ಯರ ಮುಷ್ಕರ: ಸರಕಾರ, ಖಾಸಗಿ ವೈದ್ಯರಿಗೆ ಹೈಕೋರ್ಟ್ ಡೆಡ್‌ಲೈನ್

ಬೆಂಗಳೂರು: ಸರಕಾರಿ, ಖಾಸಗಿ ವೈದ್ಯರಿಗೆ ಹೈಕೋರ್ಟ್ ಡೆಡ್‌ಲೈನ್ ನೀಡಿದ್ದು ಮಧ್ಯಾಹ್ನ 2 ಗಂಟೆಯೊಳಗೆ ಸಮಸ್ಯೆ ...

news

ವೈದ್ಯರೇ ಮುಷ್ಕರ ಕೈಬಿಡಿ: ಸಿಎಂ ಸಿದ್ದರಾಮಯ್ಯ ಮನವಿ

ಬೆಂಗಳೂರು: ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ. ಕೂಡಲೇ ಮುಷ್ಕರ ಕೈಬಿಡಿ ಎಂದು ಸಿಎಂ ...

Widgets Magazine
Widgets Magazine