24 ಗಂಟೆಯಲ್ಲಿ 3ನೇ ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್

ಜಮ್ಮು ಕಾಶ್ಮೀರ, ಶುಕ್ರವಾರ, 13 ಅಕ್ಟೋಬರ್ 2017 (13:12 IST)

ಜಮ್ಮು ಕಾಶ್ಮೀರ: ಪಾಕ್ ಪಡೆ ಮತ್ತೆ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿವೆ. ಪೂಂಚ್‌ ಜಿಲ್ಲೆಯ ಕೃಷ್ಣಘಾಟಿ ಸೆಕ್ಟರ್ ನಲ್ಲಿ ಪಾಕ್‌ ಪಡೆ ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿವೆ.


24 ಗಂಟೆಗಳಲ್ಲಿ ಪಾಕ್‌ ಪಡೆ ನಡೆಸಿದ ಮೂರನೇ ಅಪ್ರಚೋದಿತ ಗುಂಡಿನ ದಾಳಿ ಇದಾಗಿದೆ. ಬೆಳಗ್ಗೆ 7.45ರ ಸುಮಾರಿಗೆ ಕೆಜಿ ಸೆಕ್ಟರ್ ಬಳಿ ಕದನ ವಿರಾಮ ಉಲ್ಲಂಘಿಸಿದ್ದು, ಗುಂಡಿನ ದಾಳಿ ನಡೆಸಿದೆ. ಭಾರತೀಯ ಯೋಧರು ಪಾಕ್ ಗೆ ಅತ್ಯಂತ ಪರಿಣಾಮಕಾರಿ ಗುಂಡಿನ ಉತ್ತರ ನೀಡಿದ್ದಾರೆ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.

ನಿನ್ನೆ ಸಹ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದು, ಎಲ್ ಜಿ ಸೆಕ್ಟರ್ ಬಳಿ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಸ್ಥಳೀಯ ನಿವಾಸಿ ಮತ್ತು ಯೋಧ ವೀರ ಮರಣವನ್ನಪ್ಪಿದ್ದಾರೆ. ಈ ವರ್ಷದಲ್ಲಿ ಪಾಕ್ ಉಪಟಳ ತೀವ್ರ ಹೆಚ್ಚಳವಾಗಿದ್ದು ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಾಸನಾಂಬೆಯ ದರ್ಶನಕ್ಕೆ ಬಂದ ದೇವೇಗೌಡ ಕುಟುಂಬ

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬೆ ಕ್ಷೇತ್ರದ ಬಾಗಿಲು ತೆರೆದಿದ್ದು, ...

news

ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದೇ?

ನವದೆಹಲಿ: ಸ್ತ್ರೀಯರು ಶಬರಿ ಮಲೆ ದೇಗುಲ ಪ್ರವೇಶಿಸಬಾರದು ಎಂದು ಇದುವರೆಗೆ ನಡೆದುಕೊಂಡು ಬಂದಿರುವ ಪದ್ಧತಿ. ...

news

ಗಲ್ಲು ಶಿಕ್ಷೆ ರದ್ದು… ಸಾಯುವವರೆಗೆ ಸೈನೈಡ್ ಮೋಹನ್ ಗೆ ಜೈಲೇ ಗಟ್ಟಿ

ಬೆಂಗಳೂರು: ಸೈನೈಡ್ ಕಿಲ್ಲರ್, ಅಪರಾಧಿ ಸೈನೈಡ್ ಮೋಹನ್ ಗೆ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದು ಪಡಿಸಿರುವ ...

news

ಗಾಂಧಿ ಹತ್ಯೆಯಿಂದ ಕಾಂಗ್ರೆಸ್ ಗೆ ಲಾಭವಾಗಿದೆ: ಉಮಾ ಭಾರತಿ ವಿವಾದಾತ್ಮಕ ಹೇಳಿಕೆ

ನವದೆಹಲಿ: ಮಹಾತ್ಮ ಗಾಂಧಿ ಹತ್ಯೆಯಿಂದ ಕಾಂಗ್ರೆಸ್ ಗೆ ಲಾಭವಾಗಿದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ...

Widgets Magazine
Widgets Magazine