''ಪಳನಿ'' ವಿಶ್ವಾಸಮತಕ್ಕೆ ''ಪನ್ನೀರ್'' ಆಕ್ರೋಶ

ಚೆನ್ನೈ, ಶನಿವಾರ, 18 ಫೆಬ್ರವರಿ 2017 (15:52 IST)

ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷಗಳನ್ನು ಹೊರಗಿಟ್ಟು ವಿಶ್ವಾಸಮತಯಾಚನೆಗೆ ಅವಕಾಶ ನೀಡಲಾಯಿತು ಎಂದು  ಮಾಜಿ ಸಿಎಂ ಪನ್ನೀರ್ ಸೆಲ್ವಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಶಾಸಕರನ್ನು ರೆಸಾರ್ಟ್‌ನಲ್ಲಿ ಅಡಗಿಸಿಟ್ಟು ಅವರನ್ನು ಹೆದರಿಸಿ, ಬೆದರಿಸಿ ಮುಖ್ಯಮಂತ್ರಿ ಪಳನಿಸ್ವಾಮಿ ಪರ ಮತ ನೀಡುವಂತೆ ಒತ್ತಾಯಿಸಲಾಗಿದೆ. ಸ್ಪೀಕರ್ ರಹಸ್ಯ ಮತದಾನಕ್ಕೆ ಅವಕಾಶ ಕೊಡುವಂತೆ ಕೋರಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
 
ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸಭಾಪತಿ ಧನಪಾಲ್, ಚರ್ಚೆಗೆ ಕೂಡಾ ಅವಕಾಶ ನೀಡಲಿಲ್ಲ. ಕೇವಲ ಧ್ವನಿಮತದಿಂದ ಮಾತ್ರ ವಿಶ್ವಾಸಮತ ಯಾಚನೆಗೆ ಅವಕಾಶ ಕೊಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಮುಂಬರುವ ದಿನಗಳಲ್ಲಿ ಪ್ರತಿಯೊಂದು ಹಳ್ಳಿಯಿಂದ ನಗರಗಳವರೆಗೆ ಧರ್ಮಯುದ್ಧ ಆರಂಭವಾಗಲಿದೆ. ಜನತೆಯ ಎದುರು ನಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತೇವೆ ಎಂದು ಮಾಜಿ ಸಿಎಂ ಪನ್ನೀರ್ ಸೆಲ್ವಂ ಘೋಷಿಸಿದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪಳನಿ ಸ್ವಾಮಿ ಪನ್ನೀರ್ ಸೆಲ್ವಂ ಎಐಎಡಿಎಂಕೆ ಎಂ.ಕೆ.ಸ್ಟಾಲಿನ್ ಡಿಎಂಕೆ Palaniswami Panneerselvam Aiadmk Dmk M.k.stalin

ಸುದ್ದಿಗಳು

news

ಅಗ್ನಿ ಪರೀಕ್ಷೆ ಗೆದ್ದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ

ಚೆನ್ನೈ: ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಧ್ವನಿಮತದ ಮೂಲಕ ಯಾಚಿಸಲಾದ ವಿಶ್ವಾಸಮತದಲ್ಲಿ ಮುಖ್ಯಮಂತ್ರಿ ...

news

ಹರಿದ ಪಂಚೆ, ಶರ್ಟನಲ್ಲೇ ಹೊರಬರುತ್ತಿರುವ ಡಿಎಂಕೆ ಶಾಸಕರು

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಸ್ಪೀಕರ್ ಆದೇಶದಂತೆ ಮಾರ್ಷಲ್‌ಗಳು ...

news

ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲದೇ ದರಿದ್ರ ಬಂದಿದೆ: ಕುಮಾರಸ್ವಾಮಿ

ಮೈಸೂರು: ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲದೇ ದರಿದ್ರ ಬಂದಿದೆ ಎಂದು ಮಾಜಿ ಸಿಎಂ ಜೆಡಿಎಸ್ ...

news

ದೇಶವಿರೋಧಿ ಡಿಎಂಕೆಗಿಂತ ಶಶಿಕಲಾ ಉತ್ತಮ: ಸುಬ್ರಮಣಿಯನ್ ಸ್ವಾಮಿ

ಪಳನಿಸ್ವಾಮಿ ಮತಯಾಚನೆ ಸಂದರ್ಭದಲ್ಲಿ ತಮಿಳುನಾಡು ವಿಧಾನಸಭೆಯಲ್ಲಾದ ಗಲಾಟೆಗೆ ಕಿಡಿಕಾರಿರುವ ಬಿಜೆಪಿ ಹಿರಿಯ ...

Widgets Magazine