ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಬಿಜೆಪಿ ಯುವ ನಾಯಕನ ಹೇಳಿಕೆ

NewDelhi, ಬುಧವಾರ, 12 ಏಪ್ರಿಲ್ 2017 (13:57 IST)

Widgets Magazine

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲೆ ಕಡಿದು ತಂದವರಿಗೆ 11 ಲಕ್ಷ ಬಹುಮಾನ ಘೋಷಿಸಿದ ಬಿಜೆಪಿ ಯುವ ನಾಯಕ ಯೋಗೇಶ್ ವಾರ್ಷ್ನಿ ಹೇಳಿಕೆ ಇಂದು ಲೋಕಸಭೆಯನ್ನು ಅಲ್ಲೋಕಲ್ಲೋಲ ಮಾಡಿತು.


 
 
ಪಕ್ಷ ಬೇದ ಮರೆತು ಮಹಿಳಾ ಸದಸ್ಯರು ಆವೇಶಭರಿತರಾಗಿ ಬಿಜೆಪಿ ಯುವಕನ ಹೇಳಿಕೆ ಖಂಡಿಸಿದರು. ಸಂಸದೆ ಜಯಾ ಬಚ್ಚನ್ ಹಾಗೂ ಬಿಎಸ್ ಪಿ ನಾಯಕಿ ಮಮತಾ ಬ್ಯಾನರ್ಜಿ ಆವೇಶಭರಿತರಾಗಿ ಮಾತನಾಡಿದರು. ‘ಒಬ್ಬ ಮಹಿಳೆಯ ಬಗ್ಗೆ ಹೀಗೆ ಮಾತನಾಡಲು ಆತನಿಗೆ ಎಷ್ಟು ಧೈರ್ಯ?’ ಎಂದು ಜಯಾ ತಮ್ಮ ಆಕ್ರೋಶ ಹೊರಹಾಕಿದರು.
 
 
ಇದೇ ವೇಳೆ ವಿಪಕ್ಷಗಳ ಆರೋಪಗಳಿಗೆ ಎದಿರೇಟು ನೀಡಿದ ಬಿಜೆಪಿಯ ರೂಪಾ ಗಂಗೂಲಿ ‘ನನ್ನ ಮೇಲೆ 17 ಗೂಂಡಾಗಳು ಹಲ್ಲೆನಡೆಸಿದ್ದರು. ಆಗ ಇದೇ ಮಹಿಳಾ ಮುಖ್ಯಮಂತ್ರಿ ಸುಮ್ಮನಿದ್ದರು’ ಎಂದರು. ಇದೇ ವೇಳೆ ಯೋಗೇಶ್ ಹೇಳಿಕೆ ಖಂಡಿಸಿದ ಬಿಜೆಪಿಯ ಮುಕ್ತಾರ್ ಅಬ್ಬಾಸ್ ನಖ್ವಿ ಆತನ ವಿರುದ್ಧ ತಕ್ಕ ಕ್ರಮ ಕೈಗೊಳ್ಳಲು ರಾಜ್ಯ  ಸರ್ಕಾರಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೊಳವೆಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಕೊಳವೇ ಬಾವಿ ರೀಬೋರಿಂಗ್ ವೇಳೆ ಮಣ್ಣು ಕುಸಿದು ಇಬ್ಬರು ಕೊಳವೆ ಬಾವಿಗೆ ಬಿದ್ದಿರುವ ಘಟನೆ ಗದಗ ಜಿಲ್ಲೆಯ ರೋಣ ...

news

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್

ನವದೆಹಲಿ: ವಿದೇಶೀ ವಿನಿಮಯ ಪ್ರಾಧಿಕಾರದ ನಿಯಮಾವಳಿ ಮುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ನ್ಯಾಯಾಲಯ ...

news

242 ಕೆ.ಜಿ ತೂಕ ಕಳೆದುಕೊಂಡ ಈಜಿಫ್ಟಿಯನ್ ಮಹಿಳೆ ಎಮನ್

ಜಗತ್ತಿನ ಅತ್ಯಂತ ತೂಕದ ಮಹಿಳೆ ಎಮನ್ ಅಹಮ್ಮದ್ ಅಬ್ದುಲಾತಿ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. 500 ಕೆ.ಜಿ ...

news

ಪಾಕಿಸ್ತಾನಿ ಅಧಿಕಾರಿಗಳ ಜೀವ ರಕ್ಷಿಸಿದ ಭಾರತೀಯ ಮೀನುಗಾರರು

ನವದೆಹಲಿ: ಅತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಯಾದವ್ ರನ್ನು ಗಲ್ಲಿಗೇರಿಸಲು ಪಾಕಿಸ್ತಾನ ತಯಾರಿ ...