ಕಾಲಿನ ಹೆಬ್ಬೆರಳಿನಲ್ಲಿ ಪೆನ್ ಹಿಡಿದು ಪರೀಕ್ಷೆ ಬರೆದ ಬಾಲಕಿ

ಪಾಟ್ನಾ, ಬುಧವಾರ, 8 ಮಾರ್ಚ್ 2017 (20:38 IST)

Widgets Magazine

ಪಾಟ್ನಾ(ಮಾ.08): ಸಾಧಿಸುವ ಛಲವಿದ್ದರೆ ಯಾವುದೇ ಅಂಗವಿಕಲತೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಬಿಹಾರದ ಈ ಬಾಲಕಿ ಪ್ರತ್ಯಕ್ಷ ಸಾಕ್ಷಿ. ಬಿಹಾರದ ಸರಣ್ ಜಿಲ್ಲೆಯ ವಿದ್ಯಾರ್ಥಿನಿ ಅಂಕಿತಾ ಕುಮಾರಿ ಕಾಲಿನ ಹೆಬ್ಬೆರಳಲ್ಲಿ ಪೆನ್ನನ್ನ ಹಿಡಿದು 10ನೇ ತರಗತಿ ಪರೀಕ್ಷೆ ಬರೆದಿದ್ದಾಳೆ.

5ನೇ ವಯಸ್ಸಿಗೆ ಮಾರಕ ಪೋಲಿಯೋಗೆ ತುತ್ತಾಗಿ ಅಂಗವಿಕಲೆಯಾಗಿರುವ ಬಾಲಕಿಗೆ ಕೈನಲ್ಲಿ ಬರೆಯಲು ಸಾಧ್ಯವಾಗುವುದಿಲ್ಲ. ಮಾತಾಡುವುದೂ ಕಷ್ಟ. ಆದರೆ, ಈ ಎಲ್ಲ ಅಂಗವೈಕಲ್ಯ ಮೆಟ್ಟಿನಿಂತ ಬಾಲಕಿ ಅಂಕಿತಾ 10ನೇ ತರಗತಿ ಪರೀಕ್ಷೆ ಬರೆದಿದ್ದಾಳೆ.

 

ತನ್ನ ಅಜ್ಜಿಯ ಜೊತೆ ಪರೀಕ್ಷಾ ಕೇಂದ್ರಕ್ಕೆ ಬಂದ ಅಂಕಿತಾ  ಕಾರ್ಪೆಟ್ ಮೆಲೆ ಕುಳಿತು ಕಾಲಿನಲ್ಲಿ ಪೆನ್ನಿಡಿದು ಪರೀಕ್ಷೆ ಬರೆದಿದ್ದಾರೆ.

 

ಅಂಕಿತಾಳ ಛಲ ಕಂಡ ಇನ್ವಿಜಿಲೇಟರ್ ರೂಪಾ ಕುಮಾರಿ ಅಕ್ಷರಶಃ ಬೆರಗಾಗಿದ್ದಾರೆ. ಅಂಕಿತಾ ಕುಮಾರಿಗೆ ಉಜ್ವಲ ಭವಿಷ್ಯವಿದೆ ಎಂದು ಹಾರೈಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜಕೀಯ ಜೀವನಕ್ಕೆ ಮಸಿ ಬಳೆಯಲು ಷಡ್ಯಂತ್ರ: ಮೋಟಮ್ಮ

ಬೆಂಗಳೂರು: ಭೂಮಿ ಹಂಚಿಕೆ ಕುರಿತಂತೆ ತಹಶೀಲ್ದಾರ್‌ಗೆ ಬೆದರಿಕೆ ಹಾಕಿದ್ದೇನೆ ಎನ್ನುವ ಆರೋಪದಲ್ಲಿ ...

news

ರೌಡಿಶೀಟರ್‌ ಸುನೀಲ್ ಬರ್ಬರ ಹತ್ಯೆ: ಸ್ಪಾಟ್ ನಾಗನ ಕೈವಾಡ ಶಂಕೆ

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರೌಡಿಗಳ ಅಟ್ಟಹಾಸ, ಅಬ್ಬರ ಆತಂಕ ಮೂಡಿಸಿದೆ. ...

news

ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರ್ಪಡೆಯಾಗುವುದು ವಿಷಾದಕರ ಸಂಗತಿ: ಖರ್ಗೆ

ನವದೆಹಲಿ: ರಾಜಕೀಯ ಜೀವನದಲ್ಲಿ ಉತ್ತಂಗದಲ್ಲಿದ್ದಾಗಲೂ ಸಿದ್ದಾಂತಗಳನ್ನು ಪಾಲಿಸಿಕೊಂಡು ಬಂದಿದ್ದ ಮಾಜಿ ಸಿಎಂ ...

news

"ಕೈ" ಬಿಟ್ಟು "ಕಮಲ" ಪಕ್ಷ ಸೇರಿದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ

ಬೆಂಗಳೂರು: ಮಾಜಿ ಸಂಸದ ಹಿರಿಯ ಕಾಂಗ್ರೆಸ್ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಕೈ ಬಿಟ್ಟು ಕಮಲ ಪಕ್ಷಕ್ಕೆ ...

Widgets Magazine Widgets Magazine