ಅಮರನಾಥ ಯಾತ್ರಿಕರ ಮೇಲೆ ದಾಳಿ: ಪಿಡಿಪಿ ಶಾಸಕನ ಡ್ರೈವರ್ ಅರೆಸ್ಟ್

ನವದೆಹಲಿ, ಶನಿವಾರ, 15 ಜುಲೈ 2017 (12:10 IST)

Widgets Magazine

ಶ್ರೀನಗರ: ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಜಾಜ್ ಅಹ್ಮದ್ ಅವರ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
 
ಬಂಧಿತ ಆರೋಪಿಯನ್ನು ಪುಲ್ವಾಮ ನಿವಾಸಿ ತೌಸೀಫ್ ಅಹ್ಮದ್ ಎಂದು ತಿಳಿದುಬಂದಿದೆ. ಭಯೋತ್ಪಾದಕರಿಗೆ ಮಾಹಿತಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
 
ಜು.10 ರಾತ್ರಿ 8.20 ಸುಮಾರಿಗೆ ಉಗ್ರರ ಗುಂಪೊಂದು ಅಮರನಾಥ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ದಾಳಿ ನಡೆಸಿತ್ತು.  ಈ ಘಟನೆಯಲ್ಲಿ 7 ಯಾತ್ರಿಗಳು ಸಾವನ್ನಪ್ಪಿದ್ದು, 12 ಯಾತ್ರಿಕರು ಗಾಯಗೊಂಡಿದ್ದರು. ದಾಳಿ ಪ್ರಕರಣವನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಯಾತ್ರಾರ್ಥಿಗಳಿದ್ದ ಬಸ್ ಹಾಗೂ ಅದು ಹೋಗುತ್ತಿದ್ದ ಮಾರ್ಗದ ಬಗ್ಗೆ ಉಗ್ರರಿಗೆ ಯಾರು ಮಾಹಿತಿ ನೀಡಿದ್ದರು, ಉಗ್ರರಿಗೆ ವಾಹನ ನೀಡಿದವರು ಯಾರು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅನುಮಾನಕ್ಕೆ ಕಾರಣವಾಯ್ತು ಡಿಜಿ ಸತ್ಯನಾರಾಯಣ ಪರಪ್ಪನ ಅಗ್ರಹಾರ ಜೈಲಿನ ಭೇಟಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಡಿಐಜಿ ರೂಪಾ ವರದಿಯ ಬೆನ್ನಲ್ಲೇ ಸಿಎಂ ...

news

ಡಿಐಜಿ ರೂಪಾಗೆ ಈಗ ನೂರಾನೆಯ ಬಲ ಬಂದಿದೆಯಂತೆ! ಕಾರಣವೇನು ಗೊತ್ತಾ?

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ನಟರಾಜನ್ ಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂದು ...

news

‘ನನ್ನ ಹೆಸರಲ್ಲೂ ರಾಮ ಇದ್ದಾನೆ, ನಾನೂ ಹಿಂದೂ’

ಮೈಸೂರು: ಹಿಂದೂಗಳು ಬಿಜೆಪಿಯವರ ಸೊತ್ತಲ್ಲ. ನನ್ನ ಹೆಸರಲ್ಲೂ ‘ರಾಮ’ ಇದ್ದಾನೆ. ಅಂದರೆ ನಾನೂ ಹಿಂದೂ ಎಂದು ...

news

ಮುಂದಿನ ಚುನಾವಣೆಯೇ ಸಿಎಂ ಸಿದ್ಧರಾಮಯ್ಯಗೆ ಕೊನೇ ಚುನಾವಣೆ

ಮೈಸೂರು: ಸಿಎಂ ಸಿದ್ಧರಾಮಯ್ಯ ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮುಂಬರುವ ಚುನಾವಣೆಗೆ ...

Widgets Magazine