Widgets Magazine

ಡಿಸ್ಕವರಿ ಚಾನೆಲ್ ನಲ್ಲಿ ಇಂದು ಪ್ರಧಾನಿ ಮೋದಿ ಕಾರ್ಯಕ್ರಮ

ನವದೆಹಲಿ| Krishnaveni K| Last Modified ಸೋಮವಾರ, 12 ಆಗಸ್ಟ್ 2019 (10:09 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರುವ ಮ್ಯಾನ್ ವರ್ಸಸ್ ವೈಲ್ಡ್ ಸರಣಿಯ ಕಾರ್ಯಕ್ರಮ ಇಂದು ರಾತ್ರಿ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

 

ಬಿಯರ್ ಗ್ರಿಲ್ಸ್ ಜತೆಗೆ ಪ್ರಧಾನಿ ಮೋದಿ ಉತ್ತರಾಖಂಡದ ಕಾಡು ಮೇಡುಗಳಲ್ಲಿ ಸುತ್ತಾಡಿರುವ ಕಾರ್ಯಕ್ರಮ ಇಂದು ಪ್ರಸಾರವಾಗಲಿದೆ. ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ನಂತರ ಒಂದು ದೇಶದ ಪ್ರಧಾನಿಯೊಬ್ಬರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲಾಗಿದೆ.
 
ಈ ಕಾರ್ಯಕ್ರಮ ಇಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಪ್ರಧಾನಿ ಮೋದಿಯ ಇನ್ನೊಂದು ಮುಖ ಈ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.
ಇದರಲ್ಲಿ ಇನ್ನಷ್ಟು ಓದಿ :