ವಿದೇಶ ಪ್ರಯಾಣಕ್ಕೆ ಮೊದಲು ನನಗೆ ತಿಳಿಸಿ ಎಂದು ಪ್ರಧಾನಿ ಮೋದಿ ಬಿಜೆಪಿ ಸಿಎಂಗಳಿಗೆ ಆದೇಶಿಸಿದ್ದು ಯಾಕೆ?

ನವದೆಹಲಿ, ಶುಕ್ರವಾರ, 14 ಸೆಪ್ಟಂಬರ್ 2018 (09:08 IST)

ನವದೆಹಲಿ: ಇನ್ನು ಮುಂದೆ ನೀವು ಅಥವಾ ನಿಮ್ಮ ಕುಟುಂಬದವರು ವಿದೇಶ ಪ್ರಯಾಣ ಕೈಗೊಳ್ಳುವ ಮೊದಲು ನನಗೆ ತಿಳಿಸಿ ಎಂದು ಪ್ರಧಾನಿ ಮೋದಿ ದೇಶದ ಎಲ್ಲಾ ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.
 
ಅಷ್ಟಕ್ಕೂ ಪ್ರಧಾನಿ ಯಾಕೆ ಇಂತಹದ್ದೊಂದು ಸೂಚನೆ ನೀಡಿದ್ದಾರೆ ಗೊತ್ತಾ?  ವಿಪಕ್ಷಗಳ ಆರೋಪಗಳಿಂದ ತಪ್ಪಿಸಿಕೊಳ‍್ಳಲು ಮತ್ತು ಅಧಿಕಾರಶಾಹಿ ನಡೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹೀಗೆ ಸೂಚನೆ ನೀಡಿದ್ದಾರೆ.
 
‘ಕೆಲವೊಮ್ಮೆ ಸಿಎಂ ಅಥವಾ ಅವರ ಕುಟುಂಬದ ವಿದೇಶ ಪ್ರಯಾಣದ ಖರ್ಚು ವೆಚ್ಚದ ಬಗ್ಗೆ ವಿಪಕ್ಷಗಳು ಟೀಕಾಸ್ತ್ರವಾಗಿ ಬಳಸುವುದು ಇದೆ. ಹೀಗಾಗಿ ವಿದೇಶೀ ಯಾನದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿದರೆ ವಿಪಕ್ಷಗಳ ಟೀಕೆಗೆ ತಕ್ಕ ತಿರುಗೇಟು ಕೊಡಬಹುದು’ ಎಂದು ಮೋದಿ ಹೇಳಿರುವುದಾಗಿ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಲೋಕಸಭೆ ಚುನಾವಣೆ ಮತ್ತು ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮೋದಿ ಇಂತಹದ್ದೊಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಲ್ಯ ಓಡಿ ಹೋಗಲು ಸಹಾಯ ಮಾಡಿದಿರಿ ಎಂದ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

ನವದೆಹಲಿ: ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗುವ ಮೊದಲು ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿದ್ದೆ ...

news

ಕೋಟೆ ನಾಡಿನಲ್ಲಿ ಹಿಂದೂ ಗಣಪ

ಕೋಟೆ ನಾಡಿನಲ್ಲಿ ಅತ್ಯಂತ ಖ್ಯಾತಿಯನ್ನು ಗಳಿಸಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿಯ ಪ್ರತಿಷ್ಟಾಪನೆ ...

news

ಬಿಸಿಲು ನಗರಿಯಲ್ಲಿ ಗಣೇಶ ಹಬ್ಬದ ಸಂಭ್ರಮ

ದೇಶದಲ್ಲೆಡೆ ಗೌರಿ ಗಣೇಶ್ ಹಬ್ಬದ ಸಂಭ್ರಮ ಮನೆ ಮಾಡಿದ್ದು ಕಲಬುರ್ಗಿಯಲ್ಲಿ ಕೂಡ ಜನ ಹಬ್ಬವನ್ನ ಸಂಭ್ರಮದಿಂದ ...

news

ಹಾವೇರಿಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ

ಗೌರಿ ಗಣೇಶನ ಹಬ್ಬದ ಸಡಗರ ಹಾವೇರಿಯಲ್ಲಿಯು ಮನೆ ಮಾಡಿದೆ.

Widgets Magazine