ಪ್ರಧಾನಿ ಮೋದಿ ನನಗಿಂತ ಉತ್ತಮ ವಾಗ್ಮಿ: ರಾಹುಲ್ ಗಾಂಧಿ

ನ್ಯೂಯಾರ್ಕ್, ಮಂಗಳವಾರ, 12 ಸೆಪ್ಟಂಬರ್ 2017 (09:42 IST)

ನ್ಯೂಯಾರ್ಕ್: ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.


 
ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂದಿ ಬಿಜೆಪಿ ನನ್ನ ಬಗ್ಗೆ ಇಲ್ಲಸಲ್ಲದ ರೂಮರ್ಸ್ ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
 
‘ಇಂಡಿಯಾ@70: ರಿಫ್ಲೆಕ್ಷನ್ ಆನ್ ದಿ ಪಾತ್ ಫಾರ್ವರ್ಡ್’ ಹೆಸರಿನ ಸಂವಾದ ಕಾರ್ಯಕ್ರಮದುದ್ದಕ್ಕೂ ಅವರು ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಆಡಳಿತ ವೈಖರಿಯನ್ನು ಟೀಕಿಸಿದರು. ನೋಟು ನಿಷೇಧವನ್ನು ಟೀಕಿಸಿದ ರಾಹುಲ್, ಕಾಶ್ಮೀರವನ್ನು ಉಗ್ರರ ಸ್ವರ್ಗವಾಗಿ ಮೋದಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
 
ಪ್ರಧಾನಿ ಮೋದಿಯ ಸಾಮರ್ಥ್ಯವೆಂದರೆ ಅವರಿಗೆ ಒಂದು ಗುಂಪಿನಲ್ಲಿ ವಿವಿಧ ಮನೋಭಾವದ ವ್ಯಕ್ತಿಗಳನ್ನು ಭಾಷಣದ ಮೂಲಕ ಹೇಗೆ ಸೆಳೆದಿಟ್ಟುಕೊಳ್ಳಬೇಕು ಎಂದು ಗೊತ್ತು. ಬಹುಶಃ ಅವರು ನನಗಿಂತ ಉತ್ತಮ ಭಾಷಣಕಾರ. ಈ ಮೂಲಕ ತಾವು ದೊಡ್ಡ ಸಾಧಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
 
ಇದನ್ನೂ ಓದಿ.. ‘ನಾನು ಸುಳ್ಳು ಹೇಳಿದ್ದರೆ ನನ್ನ ಕುಟುಂಬ ಸರ್ವ ನಾಶವಾಗಲಿ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ರಾಹುಲ್ ಗಾಂಧಿ ಕಾಂಗ್ರೆಸ್ ರಾಷ್ಟ್ರೀಯ ಸುದ್ದಿಗಳು Congress Rahul Gandhi Pm Modi National News

ಸುದ್ದಿಗಳು

news

‘ನಾನು ಸುಳ್ಳು ಹೇಳಿದ್ದರೆ ನನ್ನ ಕುಟುಂಬ ಸರ್ವ ನಾಶವಾಗಲಿ’

ಬೆಂಗಳೂರು: ಲಿಂಗಾಯುತ ಪ್ರತ್ಯೇಕ ಧರ್ಮ ವಿಚಾರವಾಗಿ ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ನಾನು ತಿರುಚಿದ್ದರೆ, ...

news

ಇಂಗ್ಲಿಷ್ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

ನವದೆಹಲಿ: ಈ ಯುವಕ ತನ್ನ ಗೆಳೆಯನೊಂದಿಗೆ ಸುಲಲಿತವಾಗಿ ಇಂಗ್ಲಿಷ್ ಮಾತಾಡಿದ್ದೇ ತಪ್ಪಾಯ್ತು. ಅದೇ ತಪ್ಪಿಗೆ ...

news

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಪ್ರತಿರೋಧ ಸಮಾವೇಶ

ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಸೆಂಟ್ರಲ್ ಕಾಲೇಜು ಆವರಣದಲ್ಲಿ ...

news

ಗೌರಿ ಹತ್ಯೆ ಆರ್ ಎಸ್ ಎಸ್ ಮಾಡಿದ್ದು ಎಂದ್ರೆ ಕೇಸ್!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಸಂಘ ಪರಿವಾರದ ಸದಸ್ಯರು ಎಂದು ಕೆಲವು ...

Widgets Magazine