ಪ್ರಧಾನಿ ಮೋದಿಯನ್ನು ಮಹಿಷಾಸುರನಿಗೆ ಹೋಲಿಸಿದವರು ಯಾರು ಗೊತ್ತಾ?

ನವದೆಹಲಿ, ಭಾನುವಾರ, 14 ಅಕ್ಟೋಬರ್ 2018 (08:50 IST)


ನವದೆಹಲಿ: ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪ್ರಧಾನಿ ಮೋದಿಯನ್ನು ಮಹಿಷಾಸುರನಿಗೆ ಹೋಲಿಕೆ ಮಾಡಿದ್ದಾರೆ.
 
ಮಹಾರಾಷ್ಟ್ರ ಬಿಜೆಪಿ ವಕ್ತಾರರು ಪ್ರಧಾನಿ ಮೋದಿಯನ್ನು ಭಗವಾನ್ ವಿಷ್ಣುವಿನ ಅವತಾರ ಎಂದು ಹೊಗಳಿದ ಬೆನ್ನಲ್ಲೇ ಸಂಜಯ್ ನಿರುಪಮ್ ಈ ರೀತಿ ಟೀಕೆ ಮಾಡಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ಸಂಜಯ್ ನಿರುಪಮ್ ‘ಬಿಜೆಪಿ ವಕ್ತಾರರು ಪ್ರಧಾನಿ ಮೋದಿಯನ್ನು ವಿಷ್ಣುವಿನ ಅವತಾರ ಎಂದಿದ್ದನ್ನು ನಾನು ಖಂಡಿಸುತ್ತೇನೆ. ಭಗವಾನ್ ವಿಷ್ಣು ಎಂದಿಗೂ ಸುಳ್ಳು ಹೇಳಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಇದು ನವರಾತ್ರಿಯ ಸಂದರ್ಭ. ಮೋದಿಯವರ ನಡೆ ನೋಡಿದರೆ ಅವರು ಮಹಿಷಾಸುರನ ಅವತಾರ ಎನಿಸುತ್ತದೆ’ ಎಂದು ವ್ಯಂಗ್ಯ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಪಸಮರದ ಕೈ ಅಭ್ಯರ್ಥಿಗಳ ಪಟ್ಟಿ ಇಂದು ಘೋಷಣೆ

ಬೆಂಗಳೂರು: ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ಸಮರದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ...

news

ಮಂಗಳೂರಿನತ್ತ ಇಂದು ಸಿಎಂ ಎಚ್ ಡಿಕೆ ಪ್ರಯಾಣ

ಮಂಗಳೂರು: ಕಡಲ ತೀರ ಮಂಗಳೂರಿಗೆ ಇಂದು ಸಿಎಂ ಕುಮಾರಸ್ವಾಮಿ ಪ್ರಯಾಣ ಬೆಳೆಸಲಿದ್ದು, ವಿವಿಧ ಯೋಜನೆಗಳಿಗೆ ...

news

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ ಬೆದರಿಕೆ!

ತಿರುವನಂತಪುರಂ: ಕೇರಳದಲ್ಲಿ ಸುಪ್ರೀಂಕೋರ್ಟ್ ನ ಶಬರಿಮಲೆ ತೀರ್ಪಿನ ವಿರುದ್ಧದ ಪ್ರತಿಭಟನೆ ಜೋರಾಗಿದ್ದು, ...

news

ಶಿವರಾಜ್ ಕುಮಾರ್ ತಮ್ಮ ಪತ್ನಿಯನ್ನು ಉಪ ಚುನಾವಣೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದ್ಯಾಕೆ?

ಬೆಂಗಳೂರು : ಶಿವಮೋಗ್ಗ ಲೋಕಸಭಾ ಉಪಚುನಾವಣೆಗೆ ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕೀಳಿಸಲು ...

Widgets Magazine