ಜಯಲಲಿತಾ ಪಕ್ಷಕ್ಕೆ ಕೈಕೊಟ್ಟು ಕರುಣಾನಿಧಿ ಜತೆ ಕೈ ಜೋಡಿಸಲಿದ್ದಾರಾ ಪ್ರಧಾನಿ ಮೋದಿ?

ಚೆನ್ನೈ, ಶುಕ್ರವಾರ, 10 ನವೆಂಬರ್ 2017 (08:21 IST)

ಚೆನ್ನೈ: ಪ್ರಧಾನಿ ಮೋದಿ ಕೆಲವೊಂದು ಅನಿರೀಕ್ಷಿತ ನಿರ್ಧಾರಗಳಿಂದಲೇ ರಾಜಕೀಯ ಚದುರಂಗದಾಟವಾಡುವವರು. ಇದೀಗ ತಮಿಳುನಾಡಿನಲ್ಲೂ ತಮ್ಮದೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.


 
ಕಾಂಗ್ರೆಸ್ ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾಗಿದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯುವನ್ನು ತನ್ನ ತೆಕ್ಕೆಗೆ ಪಡೆದುಕೊಂಡಂತೆ ತಮಿಳುನಾಡಿನಲ್ಲೂ ಪ್ರಧಾನಿ ಮೋದಿ ಅಣ್ಣಾ ಡಿಎಂಕೆಗೆ ಕೈಕೊಟ್ಟು ಕರುಣಾನಿಧಿ ನೇತೃತ್ವದ ಡಿಎಂಕೆ ಜತೆ ಕೈ ಜೋಡಿಸುವ ಸೂಚನೆ ನೀಡಿದ್ದಾರೆ.
 
ದಿಡೀರ್ ಆಗಿ ಚೆನ್ನೈನ ಕರುಣಾನಿಧಿ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ತಮ್ಮ ಜತೆ ಕೈ ಜೋಡುವಂತೆ ಕರುಣಾನಿಧಿಗೆ ಆಹ್ವಾನವಿತ್ತಿದ್ದಾರೆ ಎನ್ನಲಾಗಿದೆ. ಇದೀಗ 2 ಜಿ ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ತೂಗುಗತ್ತಿ ಎದುರಿಸುತ್ತಿರುವ ಡಿಎಂಕೆಗೂ ಕೇಂದ್ರದ ಬೆಂಬಲ ಬೇಕಾಗಿದೆ.
 
ಹಾಗೆಯೇ ಬಿಜೆಪಿಗೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಬೆಂಬಲ ಅಗತ್ಯವಾಗಿದೆ. ಇದರ ಜತೆಗೆ ಯುಪಿಎ ಮೈತ್ರಿಕೂಟಕ್ಕೆ ದಕ್ಷಿಣದಲ್ಲಿ ಶಾಕ್ ಕೊಡಲು ಪ್ರಧಾನಿ ಮೋದಿ ಯೋಜನೆ ರೂಪಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
 
ಈ ಎಲ್ಲಾ ಹಿನ್ನಲೆಯಲ್ಲಿ ಪ್ರಧಾನಿ ಮೋದಿ-ಕರುಣಾನಿಧಿ ಭೇಟಿ ಮಹತ್ವ ಪಡೆದುಕೊಂಡಿದೆ. ಇದೀಗ ಚೆಂಡು ಡಿಎಂಕೆ ನಾಯಕ, ಕರುಣಾನಿಧಿ ಪುತ್ರ ಎಂಕೆ ಸ್ಟಾಲಿನ್ ಅಂಗಳದಲ್ಲಿದೆ. ಒಂದು ವೇಳೆ ಡಿಎಂಕೆ ಬಿಜೆಪಿ ಜತೆ ಕೈಜೋಡಿಸಿದರೆ ಯುಪಿಎಗೆ ದೊಡ್ಡ ಹೊಡೆತವೆಂದೇ ಹೇಳಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಎಂ ಕರುಣಾನಿಧಿ ಡಿಎಂಕೆ ಎಐಎಡಿಎಂಕೆ ತಮಿಳುನಾಡು ರಾಜಕೀಯ Dmk Aiadmk Pm Modi M Karunanidhi Tamilnadu Politics

ಸುದ್ದಿಗಳು

news

ಪ್ರಜ್ವಲ್ ರೇವಣ್ಣ ಟಿಕೆಟ್ ಸಿಗದಂತೆ ಒತ್ತಡ ಹೇರಿದ್ದರೇ ಸಹೋದರ ನಿಖಿಲ್? ನಿಖಿಲ್ ಹೇಳಿದ್ದೇನು?

ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರ ಮೊಮ್ಮಕ್ಕಳ ನಡುವೆ ಪರಸ್ಪರ ಭಿನ್ನಮತವಿದೆ. ಅದೇ ಕಾರಣಕ್ಕೆ ...

news

ಶಿವರಾಜ್ ಕುಮಾರ್ ದೂರಿನ ಬಿಸಿಗೆ ಕರಗಿದ ಗೃಹಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಕಿರಿ ಕಿರಿಯಾಗುತ್ತಿದೆಯೆಂದು ಸ್ಯಾಂಡಲ್ ವುಡ್ ...

news

ಶಶಿಕಲಾ ನಟರಾಜನ್ ಆಸ್ಥಿ ಮೇಲೆ ಐಟಿ ದಾಳಿ

ಚೆನ್ನೈ: ಪ್ರಧಾನಿ ಮೋದಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಭೇಟಿ ಮಾಡಿದ ಬೆನ್ನಲ್ಲೇ ಶಶಿಕಲಾ ನಟರಾಜನ್ ಮತ್ತು ...

news

ಮೋದಿ ರೀತಿ ಭಾಷಣ ಮಾಡಕ್ಕೆ ನನಗೆ ವರ್ಷಗಟ್ಟಲೆ ಬೇಕು: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿ ಭಾಷಣ ಕಲೆಗಾರಿಕೆ ಬಗ್ಗೆ ಎರಡು ಮಾತಿಲ್ಲ. ಅದನ್ನು ಇದೀಗ ರಾಹುಲ್ ಗಾಂಧಿ ಕೂಡಾ ...

Widgets Magazine
Widgets Magazine