ರಾಜ್ಯವೇ ಬೆಚ್ಚಿಬೀಳಿಸುವ ವಿಕೃತ ಕಾಮಿ ಸೆರೆ

ಹಾವೇರಿ, ಶನಿವಾರ, 22 ಜುಲೈ 2017 (14:06 IST)

ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವಸೆಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
 
ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿದೆ ನನ್ನ ಲೆವೆಲ್ಲೇ ಬೇರೆ ಎಂದು ಪೀಠಕ್ಕೆ ಹಾಕಿ, ಯುವತಿಯರನ್ನು ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರವೆಸಗುತ್ತಿದ್ದನು. ನಂತರ ಅತ್ಯಾಚಾರದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
 
ಯುವತಿಯರ ಮೇಲೆ ಅತ್ಯಾಚಾರವೆಸಗಿದ ನಂತರ ಆರೋಪಿ ಮನೋಜ್, ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ. ಒಂದು ವೇಳೆ ಆತನ ಮಾತಿಗೆ ಸಹಕರಿಸದ ಯುವತಿಯರ ಗುಪ್ತಾಂಗದ ಮೇಲೆ ಸಿಗರೇಟಿನಿಂದ ಸುಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ನೊಂದ ಯುವತಿಯೊಬ್ಬಳು ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರಿನನ್ವಯ ಪೊಲೀಸು ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಆದರೆ, ಒಂದು ತಿಂಗಳವರೆಗೆ ತಲೆ ಮರೆಸಿಕೊಂಡಿದ್ದ ಆರೋಪಿ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
 
ಆರೋಪಿ ಮಹಾ ಚಾಲಕಿಯಾಗಿದ್ದು, ಪೊಲೀಸರಿಗೆ ನಿರಂತರವಾಗಿ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಆದರೆ, ನಿನ್ನೆ ಮಧ್ಯರಾತ್ರಿ ಹಾವೇರಿ ಬಸ್ ನಿಲ್ದಾಣಕ್ಕೆ ಬಂದಿಳಿದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೀಲ್ ಆರ್ಮ್ ಸ್ಟ್ರಾಂಗ್ ತಂದಿದ್ದ ಚಂದ್ರನ ಧೂಳು ಹರಾಜು

ಮೊಟ್ಟ ಮೊದಲಬಾರಿಗೆ ಚಂದ್ರಯಾನ ಕೈಗೊಂಡಿದ್ದ ಗಗನಯಾತ್ರಿ ನೀಲ್‌ ಆರ್ಮ್ ಸ್ಟ್ರಾಂಗ್‌ ಚಂದ್ರನಿಂದ ಭೂಮಿಗೆ ...

news

ಶೋಬಾ ಕರಂದ್ಲಾಜೆ ಜವಾಬ್ದಾರಿಯಿಂದ ವರ್ತಿಸಲಿ: ಸಚಿವ ಖಾದರ್ ಕಿಡಿ

ಬೆಳಗಾವಿ: ಬಿಜೆಪಿ ನಾಯಕಿ ಮಾಜಿ ಸಚಿವ ಯಾವುದೇ ವಿಷಯದ ಬಗ್ಗೆ ಜವಾಬ್ದಾರಿಯಂದ ವರ್ತಿಸುವುದು ಸೂಕ್ತ ಎಂದು ...

news

ಸಂವಿಧಾನ ಸರಿಯಾಗಿ ಓದಲ್ಲ, ಕಾನೂನು ತಿಳಿದುಕೊಳ್ಳಲ್ಲ: ಬಿಜೆಪಿಗೆ ಸಿಎಂ ಟಾಂಗ್

ಬೆಂಗಳೂರು: ನಾಡ ಧ್ವಜ ಮಾಡಿದ್ರೆ ಅವಮಾನವಾಗುತ್ತಾ? ಐಕಾಂಟ್ ಅಂಡರ್‌ಸ್ಟ್ಯಾಂಡ್ ಎಂದು ಸಿಎಂ ಸಿದ್ದರಾಮಯ್ಯ ...

news

ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ರೆ ತಲೆ ಕತ್ತರಿಸಿ ಇಡ್ತಿನಿ: ಜಮೀರ್

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ರೆ ತಲೆ ಕತ್ತರಿಸಿಡ್ತಿನಿ ...

Widgets Magazine