ಮಹಿಳೆಯ ಮರ್ಮಾಂಗಕ್ಕೆ ಬಿಯರ್ ಬಾಟಲ್, ಖಾರದ ಪುಡಿ ಹಾಕಿದನಾ ಪೊಲೀಸ್ ಅಧಿಕಾರಿ..!

ಶ್ರೀನಗರ, ಮಂಗಳವಾರ, 9 ಮೇ 2017 (13:29 IST)

Widgets Magazine

ದೆಹಲಿಯಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್  ರೀತಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆ ಮೇಲೆ ಲೈಂಗಿಕ ಹಲ್ಲೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಕಣಚಕ್ ಪ್ರದೇಶದ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿ ವಿರುದ್ಧವೇ ಇಂಥದ್ದೊಂದು ಆರೋಪ ಮಾಡಿದ್ದಾರೆ.
 


ಠಾಣಾಧಿಕಾರಿ ರಾಕೇಶ್ ಶರ್ಮಾ ಬಲವಂತವಾಗಿ ನನ್ನ ಬಟ್ಟೆ ಬಿಚ್ಚಿಸಿ ಮರ್ಮಾಂಗಕ್ಕೆ ಬಿಯರ್ ಬಾಟಲ್ ಮತ್ತು ಖಾರದ ಪುಡಿ ಹಾಕಿ ಹಿಂಸೆ ನೀಡಿದ್ದಾರೆ ಎಂದು 25 ವರ್ಷದ ಮಹಿಳೆ ಆರೋಪಿಸಿದ್ದಾರೆ. ಮನೆಗೆಲಸ ಮಾಡುತ್ತಿದ್ದ ನಮ್ಮನ್ನ ಕೆಲ ದಿನಗಳ ಹಿಂದೆ ಬಂಧಿಸಿದ ಪೊಲೀಸರು ಸುಳ್ಳು ಆರೋಪ ಹೊರಿಸಿ ಒಂದು ವಾರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
 
ಈ ಹಲ್ಲೆ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣವನ್ನೇ ಹೋಲುತ್ತಿದೆ. ಪತ್ನಿಯನ್ನ ನೋಡಲು ಹೋದ ಪತಿಯನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಮಹಿಳೆ ಪರ ವಕೀಲರು ಹೇಳಿದ್ದಾರೆ. ಮಹಿಲೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.

ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಕೂಡಲೇ ಕ್ರಮ ಜರುಗಿಸುವಂತೆ ಜಮ್ಮು ಸರ್ಕಾರವನ್ನ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಶರಣಾಗಿ, ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ನಾಗನ ಮಾಸ್ಟರ್ ಪ್ಲಾನ್..?

ತನ್ನ ಮನೆ ಮೇಲಿನ ದಾಳಿ ಬಳಿಕ ನಾಪತ್ತೆಯಾಗಿರುವ ರೌಡಿ ಶೀಟರ್ ನಾಗ ಪೊಲೀಸರ ಕೈಯಿಂದ ಬೀಳುವ ಲಾಠಿ ಏಟು ...

news

ವಿಜಯ್ ಮಲ್ಯಗೆ ನ್ಯಾಯಾಂಗ ನಿಂದನೆಯ ಉರುಳು

9 ಸಾವಿರ ಕೋಟಿ ರೂ. ಸಾಲ ಮರುಪಾವತಿಸದೇ ಲಂಡನ್ನಿನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯಗೆ ...

news

ಬ್ರಿಟನ್ ರಾಣಿಗೆ ಬರ್ತ್ ಡೇ ಪಾರ್ಟಿಗೆ ಆಹ್ವಾನವಿತ್ತ ಭಾರತೀಯ ಪೋರ!

ಲಂಡನ್: ಸಾಮಾನ್ಯವಾಗಿ ಬರ್ತ್ ಡೇ ಪಾರ್ಟಿ ಮಾಡುವಾಗ ಯಾರು ಆಹ್ವಾನಿತರಿರುತ್ತಾರೆ? ನಮ್ಮ ಸ್ನೇಹಿತರು, ...

news

ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೇ ಶಿಕ್ಷೆ ವಿಧಿಸಿದ ನ್ಯಾಯಮೂರ್ತಿಗೆ ಜೈಲು ಶಿಕ್ಷೆ!

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೇ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋಲ್ಕೊತ್ತಾ ಹೈ ಕೋರ್ಟ್ ...

Widgets Magazine Widgets Magazine