ತಿರುಪತಿಯಲ್ಲಿ ಯಾವಾಗ ಬೇಕಾದರೂ ಭೂಕಂಪ ಸಂಭವಿಸಬಹುದು

ತಿರುಪತಿ, ಸೋಮವಾರ, 18 ಸೆಪ್ಟಂಬರ್ 2017 (15:57 IST)

ಜಗತ್ತಿನ ವಿಶ್ವ ವಿಖ್ಯಾತ ತಿರುಪತಿ ತಿಮ್ಮಪ್ಪನಿಗೂ ಈಗ ಆತಂಕ ಶುರುವಾಗಿದೆ. ತಿರುಪತಿ ಇರುವ ಭೂಪ್ರದೇಶದ ಟೆಕ್ಟೋನಿಕ್ ಪ್ಲೇಟ್`ಗಳು ನಿರಂತರ ಚಲನೆಯಲ್ಲಿದ್ದು. ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂಬ ವರದಿ ಬಂದಿದೆ.


ರೂರ್ಕಿ ಐಐಟಿ ತಂಡ ತಿರುಮಲ ಪರ್ವತದ ಭೂಗರ್ಭದಲ್ಲಿ ಉಂಟಾಗುತ್ತಿರುವ ಟಕ್ಟೋನಿಕ್ ಪದರಗಳ ಚಲನೆಯ ಬಗ್ಗೆ ಮಾಹಿತಿ ಕಲೆ ಹಾಕಿದೆ. ತಮಿಳುನಾಡಿನ ಪಾಲಾರ್ ಮತ್ತು ತರಂಗಂಬಾಡಿ ಪ್ರದೇಶದಲ್ಲೂ ಭೂಕಂಪನದ ಸೂಚನೆ ಇದ್ದು, ಇಲ್ಲಿ ಟೆಕ್ಟೋನಿಕ್ ಪದರಗಳು ಘರ್ಷಣೆಯಾಗಿ ಕಂಪನವಾಗುವ ಸಾಧ್ಯತೆ ಇದೆ ಎಂದು ರೂರ್ಕಿ ಐಐಟಿ ತಂಡ ತಿಳಿಸಿದೆ.

ಒಂದೊಮ್ಮೆ ಈ ಅಂಕಿ ಅಂಶಗಳ ಪ್ರಕಾರವೇ ಸಂಭವಿಸಿದರೆ ದಿನಂಪತ್ರಿ ಲಕ್ಷಾಂತರ ಭಕ್ತರು ಭೇಟಿ ನೀಡುವ ಪ್ರಸಿದ್ಧ ಧಾರ್ಮಿಕ ಕೇಂದ್ರ ತಿರುಪತಿಯಲ್ಲಿ ಭಾರೀ ಸಾವುನೋವು ಸಂಭವಿಸುವ ಸಾಧ್ಯತೆ ಇದೆ. ತಂರಗಬಾಡಿ ಅಥವಾ ಪಾಲಾರ ಬಳಿ ಭೂಕಂಪ ಸಂಭವಿಸಿದರೂ 200 ಕಿ.ಮೀ ದೂರದ ಚೆನ್ನೈವರೆಗೆ ಅದರ ಪರಿಣಾಮ ಇರಲಿದೆಯಂತೆ.

ದಕ್ಷಿಣ ಭಾರತದಲ್ಲಿ ಭೂಕಂಪನದ ಅಪಾಯವಿರುವ ಕೇಂದ್ರಗಳನ್ನ ಗುರ್ತಿಸಿರುವ ರೂರ್ಕಿಯ ಐಐಟಿ, ಜಲಾಶಯ ಮತ್ತು ಪವರ್ ಪ್ಲಾಂಟ್`ಗಳಲ್ಲಿ ಭೂಕಂಪನ ಸಂಭವಿಸಿದರೂ ಯಾವುದೇ ಅಪಾಯವಾಗದಂತೆ  ನಿರೋಧಕ ವಿನ್ಯಾಸಗಳನ್ನ ಸಿದ್ಧಪಡಿಸಿ ಕೆಂದ್ರದ ಜಲ ಆಯೋಗದ ಇಂಜಿನಿರ್`ಗಳಿಗೆ ನೀಡಲಿದೆ.
   
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ಅಲ್ಲ, ಬೆಂಕಿರಾಮಯ್ಯ: ಆರ್.ಅಶೋಕ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅಲ್ಲ ಬೆಂಕಿರಾಮಯ್ಯರಾಗಿದ್ದಾರೆ ಎಂದು ಮಾಜಿ ಗೃಹಸಚಿವ ಆರ್.ಅಶೋಕ್ ...

news

ಖಮರುಲ್ ಇಸ್ಲಾಂ ಆಸೆಯಂತೆ ತಾಯಿ, ತಂದೆಯ ಸಮಾಧಿ ಪಕ್ಕದಲ್ಲೇ ದಫನ್

ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಕೊನೆಯ ಆಸೆಯಂತೆ ಕಲಬುರಗಿ ಜಿಲ್ಲಾ ನ್ಯಾಯಾಲಯ ...

news

ಸಿಎಂ ಸಿದ್ದರಾಮಯ್ಯ ಸರಕಾರ ಭ್ರಷ್ಟಾತಿ ಭ್ರಷ್ಟ ಸರಕಾರ: ಬಿಎಸ್‌ವೈ

ಯಾದಗಿರಿ: ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತಿರುವ ಸಿಎಂ ಸಿದ್ದರಾಮಯ್ಯವರಿಗೆ ಮುಂಬರುವ ಚುನಾವಣೆಯಲ್ಲಿ ...

news

ಮಾಯಾ ಕೊಡ್ನಾನಿ ಕೇಸ್: ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ನುಡಿದ ಅಮಿತ್ ಶಾ

ನವದೆಹಲಿ: ಮಾಜಿ ಸಚಿವೆ ಮಾಯಾ ಕೊಡ್ನಾನಿ ಪರವಾಗಿ ಸಾಕ್ಷ್ಯ ಹೇಳಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ...

Widgets Magazine
Widgets Magazine