ಜಿಎಸ್ ಟಿ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ: ಪ್ರಧಾನಿ ಮನ್ ಕಿ ಬಾತ್

ನವದೆಹಲಿ, ಭಾನುವಾರ, 30 ಜುಲೈ 2017 (15:00 IST)

ನವದೆಹಲಿ:ಜಿಎಸ್ ಟಿಯಿಂದ ಓರ್ವ ಸಾಮಾನ್ಯ ವ್ಯಕ್ತಿಗೂ ಲಾಭವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಿದೆ. ಒಂದು ದೇಶ ಒಂದು ತೆರಿಗೆ ಜಾರಿಯಾಗಿದೆ. ಜಿಎಸ್‌ಟಿ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆ ತಂದಿದೆ.ಇದರ ಲಾಭ ಜನರಿಗೆ ಈಗಲೆ ಲಭ್ಯವಾಗುತ್ತಿದೆ. ಇದಕ್ಕಾಗಿ ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
 
ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಜಿಎಸ್ ಟಿ ದೇಶದ ಆರ್ಥಿಕ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಒಕ್ಕೂಟ ಸಹಕಾರಕ್ಕೆ ಇದೊಂದು ಉದಾಹಣೆಯಾಗಿದೆ. ಇಲ್ಲಿ ಎಲ್ಲಾ ನಿರ್ಧಾರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಲ್ಳುತ್ತವೆ. ಗ್ರಾಹಕರು, ಮಾರಾಟಾಗಾರರು ಮತ್ತು ಸರ್ಕಾರದ ನಡುವೆ ಜಿಎಸ್ ಟಿ ಸ್ನೇಹಯುತ ಪರಿಸ್ಥಿತಿ ನಿರ್ಮಾಣ ಮಾಡಿದೆ. ಮುಂದಿನ ದಿನಗಳಲ್ಲಿ ಇದು ನಂಬಿಕೆಗಳನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.
 
ಅಸ್ಸಾಂ, ಗುಜರಾತ್‌ ಮತ್ತು ರಾಜಸ್ಥಾನದಲ್ಲಿನ ಪ್ರವಾಹದ ಕುರಿತು ಮಾತನಾಡಿ ಅವರು, ಪ್ರವಾಹಕ್ಕೊಳಗಾಗಿರುವ ರಾಜ್ಯಗಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.  ಸರ್ಕಾರ ಸತ್ರಸ್ತ್ರರಿಗೆ ಎಲ್ಲಾ ರೀತಿ ನೆರವು ನೀಡುತ್ತಿದೆ ಎಂದರು. ರೈತರಿಗೆ ತ್ವರಿತವಾಗಿ ವಿಮಾ ಪರಿಹಾರಗಳನ್ನು ನೀಡಬೇಕಿದೆ. ಪ್ರವಾಹ ಪೀಡಿತ ರಾಜ್ಯಗಳಿಗಾಗಿ ಈಗಾಗಲೇ ಅಲ್ಪಾವಧಿ ಹಾಗೂ ದೀರ್ಘಾವಧಿ ಚಯೋಜನೆಗಳು ಸಿದ್ಧಗೊಂಡಿದ್ದು, 24X7 ಪ್ರವಾಹ ನಿಯಂತ್ರಣ ಸಹಾಯವಾಣಿ 1078 ಕಾರ್ಯನಿರ್ವಹಿಸುತ್ತಿವೆ. ಆಧುನಿಕ ತಂತ್ರಜ್ಞಾನದಿಂದಾಗಿ ಹವಾಮಾನ ಮುನ್ಸೂಚನಾ ವರದಿಗಳು ಲಭಿಸುತ್ತಿವೆ ಎಂದು ತಿಳಿಸಿದರು.
 
ಆಗಸ್ಟ್‌ ತಿಂಗಳು ಐತಿಹಾಸಿಕ ತಿಂಗಳು, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿವಿಧ ಹಬ್ಬಗಳು ಬಂದಿವೆ. ಹಬ್ಬಗಳನ್ನು ಪರಿಸರಕ್ಕೆ ಪೂರಕವಾಗಿ ಆಚರಿಸೋಣ. 70 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು ಈ ವರ್ಷವನ್ನು ಸಂಕಲ್ಪ ವರ್ಷವನ್ನಾಗಿ ಆಚರಿಸಬೇಕು. ನ್ಯೂ ಇಂಡಿಯಾಕ್ಕಾಗಿ ನಾವೆಲ್ಲ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
 ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ Mann Ki Baat Prime Minister Narendra Modi

ಸುದ್ದಿಗಳು

news

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿ ರದ್ದು

ಬೆಂಗಳೂರು: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ...

news

ಗುಜರಾತ್ ಕೋಸ್ಟ್ ಗಾರ್ಡ್‌ನಿಂದ 3500 ಕೋಟಿ ಮೌಲ್ಯದ ಡ್ರಗ್ಸ್ ವಶ

ಪೋರಬಂದರ್: ಹಡುಗಿನಲ್ಲಿ ಸಾಗಿಸುತ್ತಿದ್ದ 3500 ಕೋಟಿ ಮೌಲ್ಯದ 1500 ಕೆಜಿ ಹೆರಾಯಿನ್‌ನನ್ನು ಕೋಸ್ಟ್ ...

news

ಮಾತೆ ಮಹಾದೇವಿ ಭಾವಚಿತ್ರಕ್ಕೆ ಪ್ರತಿಭಟನಾಕಾರರಿಂದ ಚಪ್ಪಲಿ ಏಟು

ಕಲಬುರಗಿ: ವೀರಶೈವ ಲಿಂಗಾಯತ ಸಮಾಜದವರು ಮಾತೆ ಮಹಾದೇವಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ...

news

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರಿಂದ 10 ಕೋಟಿ ಆಮಿಷ: ಹರಿಪ್ರಸಾದ್

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಶಾಸಕರಿಗೆ 10 ಕೋಟಿ ರೂ ಆಮಿಷ ಒಡ್ಡಿದ್ದಾರೆ ...

Widgets Magazine