17 ವರ್ಷದ ಹದಿಹರೆಯದ ಯುವತಿಯ ಮೂವರು ಕಾಮುಕರಿಂದ ಅತ್ಯಾಚಾರ

ಚಂಡೀಗಡ್, ಸೋಮವಾರ, 30 ಅಕ್ಟೋಬರ್ 2017 (17:26 IST)

Widgets Magazine

17 ವರ್ಷದ ಹದಿ ಹರೆಯದ ಯುವತಿಯ ಮೇಲೆ ಮೂವರು ಕಾಮುಕರು ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ ಹೇಯ ಘಟನೆ ಪಂಜಾಬ್ ರಾಜ್ಯದ ಫಜಿಕಾ ಗ್ರಾಮದಲ್ಲಿ ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಯುವತಿಯ ಗುಪ್ತಾಂಗದಿಂದ ರಕ್ತ ಹರಿಯುತ್ತಿದ್ದರೂ ಕುಟುಂಬದವರು ಮರ್ಯಾದೆಗೆ ಹೆದರಿ ಪೊಲೀಸ್ ಠಾಣೆಗೆ ದೂರೂ ನೀಡಲಿಲ್ಲ. ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಾ ಕೊಡಿಸದಿರುವುದು ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಸ್ಥಳೀಯ ಸರಕಾರಿ ಕಾಲೇಜಿನಲ್ಲಿ ಪಿಯುಸಿ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿರುವ ಸಂದರ್ಭದಲ್ಲಿ ಕಾಮುಕರು ಆಕೆಯನ್ನು ಅಪಹರಿಸಿ ಗ್ಯಾಂಗ್‌ರೇಪ್ ಎಸಗಿ ಅರಣ್ಯ ಪ್ರದೇಶದೊಳಗೆ ಬಿಸಾಕಿ ಪರಾರಿಯಾಗಿದ್ದರು. ನಂತರ  ಆಕೆಯ ಕುಟುಂಬದವರು ಪತ್ತೆ ಹಚ್ಚಿ ಮನೆಗೆ ಕರೆದುಕೊಂಡು ಹೋಗಿದ್ದರು. ಯುವತಿಯ ಸ್ಥಿತಿಯ ಬಗ್ಗೆ ಗ್ರಾಮಸ್ಥನೊಬ್ಬನು ನಮಗೆ ಮಾಹಿತಿ ನೀಡಿದ್ದರಿಂದ ಅವರ ಮನೆಗೆ ಭೇಟಿ ನೀಡಲಾಗಿತ್ತು. ಆದರೆ, ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು ಎಂದು ಜಲಾಲಾಬಾದ್ ಡಿವೈಎಸ್‌ಪಿ ಅಮರ್‌ಜಿತ್ ಸಿಂಗ್ ತಿಳಿಸಿದ್ದಾರೆ. 
 
ಯುವತಿಗೆ ಕೂಡಲೇ ಚಿಕಿತ್ಸೆಯ ಅಗತ್ಯವಿತ್ತು. ಆದರೆ, ಪುತ್ರಿಯ ಮೇಲಿನ ಅತ್ಯಾಚಾರವನ್ನು ಕುಟುಂಬದ ಸದಸ್ಯರು ಮರ್ಯಾದೆ ವಿಷಯವಾಗಿ ಪರಿಗಣಿಸಿ ಆಸ್ಪತ್ರೆಗೆ ದಾಖಲಿಸದಿದ್ದರಿಂದ ಸಾವನ್ನಪ್ಪಿದ್ದಾಳೆ. ಮೂವರು ಕಾಮುಕರನ್ನು ಇಲ್ಲಿಯವರೆಗೆ ಬಂಧಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
 
ಯುವತಿಯ ಸಹಪಾಠಿಯಾಗಿದ್ದ ಆರೋಪಿಯನ್ನು ಆಕೆಯ ತಾಯಿ ಗುರುತಿಸಿದ್ದಾಳೆ. ಒಟ್ಟು ಮೂವರು ಅಪ್ರಾಪ್ತರು ಅತ್ಯಾಚಾರವೆಸಗಿರುವ ಸಾಧ್ಯತೆಗಳಿವೆ. ಅಪರಿಚಿತ ಆರೋಪಿಗಳ ವಿರುದ್ಧ ಅತ್ಯಾಚಾರ, ಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮರ್‌ಜಿತ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಧಾರವಾಡದಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: ಮಹಿಳೆ ಬಂಧನ

ಧಾರವಾಡ: ನಗರದಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ಧಾರವಾಡ ರೈಲ್ವೆ ಸುರಕ್ಷಾ ದಳ ಪೊಲೀಸರು ಓರ್ವ ...

news

100 ವರ್ಷದ ವೃದ್ಧೆಯ ಮೇಲೆ ಯುವಕನ ಅತ್ಯಾಚಾರ

ಲಕ್ನೋ: ಮದ್ಯ ಸೇವಿಸಿದ ಮತ್ತಿನಲ್ಲಿದ್ದ ಯುವಕನೊಬ್ಬ 100 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ ...

news

ನಿಗೂಢ ಸ್ಫೋಟದಿಂದ ಸಾವು: ವ್ಯಕ್ತಿ ದೇಹ ಛಿದ್ರ ಛಿದ್ರ

ಕಲಬುರ್ಗಿ: ಏಕಾಏಕಿ ಸಂಭವಿಸಿದ ವಿಚಿತ್ರ ಸ್ಫೋಟದಿಂದ ವ್ಯಕ್ತಿ ದೇಹ ಛಿದ್ರವಾಗಿ ಮೃತಪಟ್ಟಿರುವ ಘಟನೆ ಕಪನೂರ ...

news

ಎಟಿಎಂಗೆ ಹಣ ತುಂಬಿಸುತ್ತಿದ್ದಾಗ ದರೋಡೆ: 18.5ಲಕ್ಷ ಹಣ ದೋಚಿದ ಕಳ್ಳರು

ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಎಟಿಎಂ ಮಷೀನ್ ನಲ್ಲಿರುವ ಹಣ ದರೋಡೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚು ...

Widgets Magazine