ಅಕಸ್ಮಿಕವಾಗಿ ಮಹಿಳೆಯರ ಶೌಚಾಲಯ ಪ್ರವೇಶಿಸಿದ ರಾಹುಲ್ ಗಾಂಧಿ

ಚೋಟಾ ಉದಯ್‌ಪುರ್, ಗುರುವಾರ, 12 ಅಕ್ಟೋಬರ್ 2017 (15:41 IST)

ಅಕಸ್ಮಿಕ ತಪ್ಪಿನಿಂದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಹಿಳಾ ಶೌಚಾಲಯವನ್ನು ಪ್ರವೇಶಿಸಿದ ಘಟನೆ ವರದಿಯಾಗಿದೆ.
ಗುಜರಾತ್‌ ರಾಜ್ಯದ ಮೂರು ದಿನಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಯುವಕರೊಂದಿಗೆ ಸಂವಾದ ನಡೆಸಿದ ನಂತರ ಶೌಚಾಲಯಕ್ಕೆ ತೆರಳಿದ್ದಾರೆ. ಶೌಚಾಲಯದ ಮುಂದೆ ಗುಜರಾತ್‌ ಭಾಷೆಯಲ್ಲಿ ಎಂದು ಬರೆದಿರುವುದು ಗೊತ್ತಾಗದ ಹಿನ್ನೆಲೆಯಲ್ಲಿ ರಾಹುಲ್ ಮಹಿಳಾ ಶೌಚಾಲಯ ಪ್ರವೇಶಿಸಿದ್ದಾರೆ.
 
ರಾಹುಲ್ ಗಾಂಧಿ ಮಹಿಳೆಯರ ಶೌಚಾಲಯ ಪ್ರವೇಶಿಸುತ್ತಿದ್ದಂತೆ ತಪ್ಪಿನ ಅರಿವಾದ ಎಸ್‌ಪಿಜಿ ಕಮಾಂಡೋಗಳು ಅವರ ಹಿಂದೆ ತೆರಳಿ, ಇದು ಮಹಿಳೆಯರ ಶೌಚಾಲಯ ಎಂದು ತಿಳಿಸಿದಾಗ, ಕೆಲವೇ ಸೆಕೆಂಡ್‌ಗಳಲ್ಲಿ ರಾಹುಲ್ ಹೊರಬಂದರು ಎಂದು ಮೂಲಗಳು ತಿಳಿಸಿವೆ.
 
ಈ ಸಂದರ್ಭದಲ್ಲಿ ಹಾಜರಿದ್ದ ಅನೇಕ ಮಹಿಳೆಯರು ರಾಹುಲ್ ಶೌಚಾಲಯದಿಂದ ಹೊರಬರುತ್ತಿರುವ ಫೋಟೋಗಳನ್ನು ತೆಗೆದು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಶೇರ್ ಮಾಡಿದ್ದಾರೆ.
 
ಗುಜರಾತ್ ಪ್ರವಾಸದ ವೇಳೆ ರಾಹುಲ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಅವರ ವಿರುದ್ಧ ವಾಗ್ದಾಳಿ ನಡೆಸಿ, ಅಚ್ಚೇದಿನ್ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾಗೆ ಮಾತ್ರ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರುಷಿ ಕೊಲೆ ಪ್ರಕರಣ: ರಾಜೇಶ್ ತಲ್ವಾರ್, ನೂಪುರ್ ತಲ್ವಾರ್ ಖುಲಾಸೆ

ನವದೆಹಲಿ: 2008ರಲ್ಲಿ ನಡೆದಿದ್ದ ಆರುಷಿ ತಲ್ವಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ...

news

ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿ ಅರೆಸ್ಚ್

ಬೆಂಗಳೂರು: 13 ವರ್ಷ ವಯಸ್ಸಿನ ಮಲಮಗಳ ಮೇಲೆ ಅತ್ಯಾಚಾರವೆಸಗಿದ 24 ವರ್ಷ ವಯಸ್ಸಿನ ಆರೋಪಿಯನ್ನು ಪೊಲೀಸರು ...

news

ಸಿಎಂ ಪುತ್ರನ ಪರ ಸಚಿವ ಎಚ್‌‍.ಸಿ.ಮಹಾದೇವಪ್ಪ ಬ್ಯಾಟಿಂಗ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಯಾವುದೇ ಭೂ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ...

news

ಶೋಭಾ, ಅಶೋಕ್ ಮಾತ್ರ ನಾಯಕರೇ? ಪಕ್ಷದಲ್ಲಿ ಬೇರೆಯವರಿಲ್ಲವೇ?: ಬಿಎಸ್‌ವೈಗೆ ಟಾಂಗ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ ...

Widgets Magazine
Widgets Magazine