ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಚಿಸಿ ಟೀಕೆಗೆ ಗುರಿಯಾದ ರಾಹುಲ್ ಗಾಂಧಿ!

ನವದೆಹಲಿ, ಬುಧವಾರ, 18 ಜುಲೈ 2018 (12:05 IST)

ನವದೆಹಲಿ : ಮಹತ್ವದ ನಿರ್ಧಾರ ಕೈಗೊಳ್ಳಲು ಮಂಗಳವಾರ ಕಾರ್ಯಕಾರಿ ಸಮಿತಿ ರಚಿಸಿದ ರಾಹುಲ್ ಗಾಂಧಿ ಅವರು ಇದೀಗ ಟೀಕೆಗೆ ಗುರಿಯಾಗಿದ್ದಾರೆ.

ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ರಚಿಸಿ ಅದರಲ್ಲಿ ಅನುಭವಿ ಹಾಗೂ ಯುವ ನಾಯಕರಿಗೆ ಸ್ಥಾನ ನೀಡಿದ್ದಾರೆ. ಆದರೆ ರಚನೆಯಾದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿರುವ 51 ಜನ ಸದಸ್ಯರಲ್ಲಿ ಕೇವಲ 7 ಸ್ಥಾನವನ್ನು  ಮಹಿಳೆಯರಿಗೆ ನೀಡಿದ್ದಾರೆ. ಇದರಿಂದ ಇದೀಗ ರಾಹುಲ್ ಗಾಂಧಿ ಟೀಕೆಗೆ ಗುರಿಯಾಗಿದ್ದಾರೆ.

 

ಯಾಕೆಂದರೆ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಕುರಿತಂತೆ ಇರುವ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಬೇಕು ಎಂದು ಇತ್ತೀಚೆಗಷ್ಟೇ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಕೇವಲ 15% ಮಹಿಳೆಯರಿಗಷ್ಟೇ ಸ್ಥಾನ ನೀಡಿದ್ದು, ಈ ಕಾರಣಕ್ಕೆ ಈಗ ರಾಹುಲ್ ಗಾಂಧಿ ಲೇವಡಿಗೆ ಒಳಗಾಗಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಮೇರಿಕಾದ ವಿರುದ್ಧ ಇರಾನ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ನೀಡಲು ಕಾರಣವೇನು?

ಟೆಹರಾನ್ : 2015ರಲ್ಲಿ ಜಾಗತಿಕ ಶಕ್ತ ದೇಶಗಳು ಇರಾನ್ ಜೊತೆಗೆ ಮಾಡಿಕೊಂಡ ಪರಮಾಣು ಒಪ್ಪಂದದಿಂದ ಅಮೆರಿಕ ...

news

ಸಿಎಂ ಕುಮಾರಸ್ವಾಮಿ ಏರ್ಪಡಿಸಿದ ಸಂಸದರ ಸಭೆಗೆ ಆಗಮಿಸುವವರಿಗೆ ‘ಗಿಫ್ಟ್ ವಿವಾದ’

ನವದೆಹಲಿ: ಇಂದು ದೆಹಲಿಯಲ್ಲಿ ಕಾವೇರಿ ನದಿ ಪ್ರಾಧಿಕಾರ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ...

news

ನನಗೂ ರೌಡಿ ಶೀಟರ್ ಸೈಕಲ್ ರವಿಗೂ ಸಂಬಂಧವಿಲ್ಲ: ಎಂಬಿ ಪಾಟೀಲ್ ಸ್ಪಷ್ಟನೆ

ಬೆಂಗಳೂರು: ಮಾಜಿ ಸಚಿವ, ಹಾಲಿ ಶಾಸಕ ಎಂಬಿ ಪಾಟೀಲ್ ಜತೆಗೆ ಕುಖ್ಯಾತ ರೌಡಿ ಸೈಕಲ್ ರವಿ ದೂರವಾಣಿ ಮೂಲಕ ...

news

ಇಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ಪ್ರವಾಸ

ಬೆಂಗಳೂರು: ಶಾಸಕರಾಗಿ ತಮಗೆ ಮರು ಜನ್ಮ ನೀಡಿದ ಬಾದಾಮಿ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ...

Widgets Magazine