ಪ್ರಧಾನಿಯಾಗಲು ನಾನು ರೆಡಿ ಎಂದ ರಾಹುಲ್ ಗಾಂಧಿ

ನ್ಯೂಯಾರ್ಕ್, ಮಂಗಳವಾರ, 12 ಸೆಪ್ಟಂಬರ್ 2017 (09:57 IST)

ನ್ಯೂಯಾರ್ಕ್: 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಲು ತಾನು ಸಿದ್ಧ ಎಂದು ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಈ ಮೂಲಕ ತಾನು ಪ್ರಧಾನಿಯಾಗಲು ರೆಡಿ ಎಂದು ಸೂಚನೆ ನೀಡಿದ್ದಾರೆ.


 
ಕ್ಯಾಲಿಫೋರ್ನಿಯಾ ವಿವಿಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ‘2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿಯಾಗಲು ನಾನು ರೆಡಿ. ಆದರೆ ಇದನ್ನು ಪಕ್ಷ ನಿರ್ಧರಿಸಬೇಕು’ ಎಂದಿದ್ದಾರೆ.
 
ನಮ್ಮದು ಸಂಘಟಿತ ಪಕ್ಷ. ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಎಲ್ಲರ ಇಂಗಿತ ಅದೇ ಆದರೆ, ನಾನು ಪ್ರಧಾನಿ ಅಭ್ಯರ್ಥಿಯಾಗಲು ರೆಡಿ ಎಂದಿದ್ದಾರೆ. ವಿಶೇಷವೆಂದರೆ 1949 ರಲ್ಲಿ ರಾಹುಲ್ ಗಾಂಧಿ ತಾತ, ಭಾರತದ ಪ್ರಥಮ ಪ್ರಧಾನಿ ಜವಹರ ಲಾಲ್ ನೆಹರೂ ಇದೇ ವಿವಿಯಲ್ಲಿ ಭಾಷಣ ಮಾಡಿದ್ದರು. ಈಗ ರಾಹುಲ್ ಸರದಿ.
 
ಇದನ್ನೂ ಓದಿ.. ಪ್ರಧಾನಿ ಮೋದಿ ನನಗಿಂತ ಉತ್ತಮ ವಾಗ್ಮಿ: ರಾಹುಲ್ ಗಾಂಧಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ನನಗಿಂತ ಉತ್ತಮ ವಾಗ್ಮಿ: ರಾಹುಲ್ ಗಾಂಧಿ

ನ್ಯೂಯಾರ್ಕ್: ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಯಾಲಿಫೋರ್ನಿಯಾ ...

news

‘ನಾನು ಸುಳ್ಳು ಹೇಳಿದ್ದರೆ ನನ್ನ ಕುಟುಂಬ ಸರ್ವ ನಾಶವಾಗಲಿ’

ಬೆಂಗಳೂರು: ಲಿಂಗಾಯುತ ಪ್ರತ್ಯೇಕ ಧರ್ಮ ವಿಚಾರವಾಗಿ ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ನಾನು ತಿರುಚಿದ್ದರೆ, ...

news

ಇಂಗ್ಲಿಷ್ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

ನವದೆಹಲಿ: ಈ ಯುವಕ ತನ್ನ ಗೆಳೆಯನೊಂದಿಗೆ ಸುಲಲಿತವಾಗಿ ಇಂಗ್ಲಿಷ್ ಮಾತಾಡಿದ್ದೇ ತಪ್ಪಾಯ್ತು. ಅದೇ ತಪ್ಪಿಗೆ ...

news

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಪ್ರತಿರೋಧ ಸಮಾವೇಶ

ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಸೆಂಟ್ರಲ್ ಕಾಲೇಜು ಆವರಣದಲ್ಲಿ ...

Widgets Magazine