ರಾಹುಲ್ ಗಾಂಧಿ ಟ್ವೀಟ್ ಗಳನ್ನು ಮಾಡೋದು ಯಾರು ಗೊತ್ತಾ?

ನವದೆಹಲಿ, ಸೋಮವಾರ, 30 ಅಕ್ಟೋಬರ್ 2017 (09:16 IST)

ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ಖಾತೆ ಬಗ್ಗೆ ಹಲವು ಚರ್ಚೆಗಳಾಗುತ್ತಿವೆ. ಅವರ ಖಾತೆಯನ್ನುಇನ್ಯಾರೋ ನಿರ್ವಹಿಸುತ್ತಿದ್ದಾರೆಂಬ ಟೀಕೆಗಳಿಗೆ ರಾಹುಲ್ ತಿರುಗೇಟು ನೀಡಿದ್ದಾರೆ. ಆದರೆ ಇದಕ್ಕೆ ಬಿಜೆಪಿಯಿಂದ ತಕ್ಕ ಎದಿರೇಟನ್ನೂ ಪಡೆದಿದ್ದಾರೆ.


 
ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ರಾಹುಲ್ ಖಾತೆಯನ್ನು ಬೇರೆ ಯಾರೋ ನಿರ್ವಹಿಸುತ್ತಿದ್ದಾರೆ, ಅವರ ಖಾತೆಯಲ್ಲಿ ಹಲವು ನಕಲಿ ಖಾತೆಗಳಿವೆ, ರಿಟ್ವೀಟ್ ದಾಖಲೆಗಳಲ್ಲೇ ನಕಲಿ ಎಂಬ ಆರೋಪಗಳಿಗೆ ರಾಹುಲ್ ವಿಡಿಯೋ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
 
ತಮ್ಮ ಮುದ್ದಿನ ನಾಯಿ ಸ್ಟಂಟ್ ಮಾಡುವ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿರುವ ರಾಹುಲ್, ನೋಡಿ ನನ್ನ ಖಾತೆಯನ್ನು ನಿರ್ವಹಿಸುತ್ತಿರುವುದು ಇದೇ ಎಂದಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಅಮಿತ್ ಮಾಲ್ವಿಯಾ ಅಕ್ಷಯ್ ಕುಮಾರ್ ಅಭಿನಯದ ಪದ್ಮನ್ ಚಿತ್ರದ ಪೋಸ್ಟರ್ ನ್ನೇ ತಿರುಚಿದ ಫೋಟೋ ಹಾಕಿದ್ದಾರೆ.
 
ಈ ಪೋಸ್ಟರ್ ನಲ್ಲಿ ರಾಹುಲ್ ಸೈಕಲ್ ಮೇಲೆ ತಮ್ಮ ನಾಯಿಯನ್ನು ಕೂರಿಸಿಕೊಂಡು ಹೋಗುವ ಚಿತ್ರವಿದೆ. ಅಲ್ಲದೆ, ಇದನ್ನು ಸಿನಿಮಾ ಪೋಸ್ಟರ್ ನಂತೆ ಬಿಂಬಿಸಲಾಗಿದ್ದು, ‘ಪಿಡಿಮ್ಯಾನ್’ ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬ್ರಿಟನ್ ನ ಈ ರಾಜ ಪೋರ ಐಸಿಸ್ ಉಗ್ರರ ಟಾರ್ಗೆಟ್!

ಲಂಡನ್: ಐಸಿಸ್ ಉಗ್ರರ ಕಾಕ ದೃಷ್ಟಿ ಎಲ್ಲೆಲ್ಲಿ ಬೀಳುತ್ತದೆ ನೋಡಿ. ರಕ್ತಪಾತ ನಡೆಸುತ್ತಿರುವ ಈ ರಾಕ್ಷಸರು ...

news

ಕೊನೆಗೂ ವಿಮಾನವೇರುವ ಮುನ್ನ ಈ ಕೆಲಸ ಮಾಡಿಯೇ ಬಿಟ್ಟರು ಪ್ರಧಾನಿ ಮೋದಿ!

ಬೆಂಗಳೂರು: ರಾಜ್ಯಕ್ಕೆ ಒಂದು ದಿನದ ಪ್ರವಾಸಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ನಿನ್ನೆ ಧರ್ಮಸ್ಥಳ ದೇವರ ...

news

ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿ ಎಕ್ಸ್ ಕ್ಲೂಸಿವ್ ಫೋಟೋಗಾಗಿ ಕ್ಲಿಕ್ ಮಾಡಿ

ಮಂಗಳೂರು: ಧರ್ಮಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಅದರ ಕೆಲವು ಝಲಕ್ ...

news

`ನನ್ನನ್ನು ಕರೆದಿದ್ದರೆ ಹೋಗುತ್ತಿದ್ದೆ, ಕರೆಯದೇ ಹೋಗಲಾಗುತ್ತಾ?

ಮಂಡ್ಯ: ನನ್ನನ್ನು ಕರೆದಿದ್ದರೆ ಹೋಗುತ್ತಿದ್ದೆ, ಕರೆಯದೇ ಹೋಗಲಾಗುತ್ತಾ ಎಂದು ಸಿಎಂ ಸಿದ್ದರಾಮಯ್ಯ ...

Widgets Magazine
Widgets Magazine