ಮುಂದಿನ ತಿಂಗಳೇ ರಾಹುಲ್ ಗಾಂಧಿಗೆ ಪಟ್ಟ?

ನವದೆಹಲಿ, ಶನಿವಾರ, 16 ಸೆಪ್ಟಂಬರ್ 2017 (08:33 IST)

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರುವುದು ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಬರುತ್ತಲೇ ಇದೆ. ಪಕ್ಷದ ಮೂಲದ ಪ್ರಕಾರ ಆ ದಿನ ಮುಂದಿನ ತಿಂಗಳೇ ಬಂದರೂ ಅಚ್ಚರಿಯಿಲ್ಲ.


 
ಅಮೆರಿಕಾದಲ್ಲಿ ಸಂವಾದ ನಡೆಸಿದ್ದ ರಾಹುಲ್ ತಾನು ಪ್ರಧಾನಿಯಾಗಲು ರೆಡಿ ಎಂದಿದ್ದರು. ಅದಕ್ಕಿಂತ ಮೊದಲು ರಾಹುಲ್ ಗೆ ಕಾಂಗ್ರೆಸ್ ನ ಅಧ್ಯಕ್ಷ ಹುದ್ದೆ ಸಿಗಬೇಕಿದೆ. ಆದರೆ ಅದು ಇಷ್ಟು ದಿನ ಮುಂದೂಡುತ್ತಲೇ ಇತ್ತು.
 
ಆದರೆ ಮಾಜಿ ಸಚಿವ ವೀರಪ್ಪ ಮೊಯಿಲಿ ಈ ಬಗ್ಗೆ ತುಟಿ ಬಿಚ್ಚಿದ್ದು, ರಾಹುಲ್ ಆಂತರಿಕ ಚುನಾವಣೆ ಮೂಲಕ ಅಧ್ಯಕ್ಷರಾಗಲು ಬಯಸಬಹುದು. ಅದು ಮುಂದಿನ ತಿಂಗಳೇ ನಡೆದರೂ ಅಚ್ಚರಿಯಿಲ್ಲ ಎಂದಿದ್ದಾರೆ.
 
ಹಲವು ರಾಜ್ಯಗಳ ಚುನಾವಣೆ ದೃಷ್ಟಿಯಿಂದ ಮತ್ತು ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ರಾಹುಲ್ ತಕ್ಷಣವೇ ಅಧ್ಯಕ್ಷರಾಗಬೇಕು. ಅದು ಪಕ್ಷದ ಮತ್ತು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.
 
ಇದನ್ನೂ ಓದಿ.. ‘ನನ್ನನ್ನು ಈ ಜಗತ್ತಿಗೆ ಪರಿಚಯಿಸಿದ್ದೇ ವಿರಾಟ್ ಕೊಹ್ಲಿ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಗರಗಳಿರುವುದು ಸುಗಮ ಜೀವನಕ್ಕಾಗಿ, ವಾಹನಗಳ ಭರಾಟೆಗಲ್ಲ

ನಗರಗಳಿರುವುದು ಜನರ ಸುಗಮ ಜೀವನಕ್ಕಾಗಿಯೇ ಹೊರತು ವಾಹನಗಳ ಭರಾಟೆಗಲ್ಲ. ನಗರಗಳ ಸುಸ್ಥಿರತೆಗೆ ನೇಸರ್ಗಿಕ ...

news

ನಾಳೆ ಸಿಎಂ ಸಿದ್ದರಾಮಯ್ಯ, ಸೋನಿಯಾ ಗಾಂಧಿ ಭೇಟಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿ ...

news

ಸಿಎಂ ಸಿದ್ದರಾಮಯ್ಯರೊಂದಿಗೆ ನಡೆದ ಎಂಎಲ್‌ಸಿಗಳ ಸಭೆ ವಿಫಲ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಪರಿಷತ್ ಸದಸ್ಯರೊಂದಿಗೆ ...

news

.ನಡುರಸ್ತೆಯಲ್ಲೇ ಮುತ್ತು ಮತ್ತು ಮತ್ತಿನಾಟ.. ಬೆಚ್ಚಿಬಿದ್ದ ಬೆಂಗಳೂರು

ಉದ್ಯಾನ ನಗರಿ ಬೆಂಗಳೂರಿನಲ್ಲಿ ಪುಂಡರ ಪುಂಡಾಟಕ್ಕೆ ಮಿತಿಯೇ ಇಲ್ಲದಂತಾಗಿದೆ. ನಡುರಸ್ತೆಯ ಸಿಗ್ನಲ್`ನಲ್ಲಿ ...

Widgets Magazine
Widgets Magazine