ಲವ್ ಜಿಹಾದ್: ಮುಸ್ಲಿಂ ವ್ಯಕ್ತಿಯನ್ನು ಕೊಚ್ಚಿ ಸಜೀವವಾಗಿ ದಹಿಸಿದ ಆರೋಪಿ

ರಾಜ್ಸಾಮಂದ್, ಗುರುವಾರ, 7 ಡಿಸೆಂಬರ್ 2017 (13:02 IST)

ಲವ್‌ಜಿಹಾದ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿಹಾಕಿ ಜೀವಂತವಾಗಿ ದಹಿಸಿದ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು ರಾಜಸ್ಥಾನದಿಂದ ವರದಿಯಾಗಿದೆ. 
ವಿಡಿಯೋದಲ್ಲಿ, ವ್ಯಕ್ತಿಯೊಬ್ಬನನ್ನು ಹಲ್ಲೆ ಮಾಡುತ್ತಿರುವ ದೃಶ್ಯ ಮತ್ತು ಸಜೀವ ದಹಿಸುವ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಹೋಗಿದೆ.
 
ಹತ್ಯೆ ಕುರಿತು ತನಿಖೆ ನಡೆಸುವುದಲ್ಲದೇ ಯಾವುದೇ ಕೋಮುಗಲಭೆಯ ದೃಷ್ಟಿಕೋನ ಹೊಂದಿದೆಯೇ ಎಂದು ಪತ್ತೆ ಮಾಡಲು ರಾಜಸ್ಥಾನ್ ಸರ್ಕಾರ ವಿಶೇಷ ತನಿಖಾ ತಂಡ ಸ್ಥಾಪಿಸಿದೆ.
 
ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿಕೊಂಡಿರುವುದು ಆಘಾತಕಾರಿ ಸಂಗತಿ. ಎಸ್‌ಐಟಿ ತನಿಖೆ ನಡೆಸುತ್ತಿದೆ ಎಂದು ಗೃಹ ಸಚಿವ ಗುಲಾಬ್ ಚಾಂದ್ ಕಟಾರಿಯಾ ತಿಳಿಸಿದ್ದಾರೆ.
 
ಹತ್ಯೆಯಾದ ವ್ಯಕ್ತಿ ಮೊಹಮ್ಮದ್ ಅಫ್ರಾಝಲ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾದಿಂದ ವಲಸೆ ಬಂದಿದ್ದು ರಾಜಸ್ಥಾನದ ರಾಜ್ಸಾಮಂದ್ ಜಿಲ್ಲೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.
 
ಈ ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡುವಂತೆ ಆರೋಪಿ ತನ್ನ ಸ್ನೇಹಿತನಿಗೆ ಒತ್ತಾಯಿಸಿದ್ದಾನೆ. ಆರೋಪಿ ಮಚ್ಚಿನಿಂದ ಹಲ್ಲೆ ಮಾಡುತ್ತಿರುವ ಸಂದರ್ಭದಲ್ಲಿ ಹತ್ಯೆಯಾದ ವ್ಯಕ್ತಿ ನೆರವಿಗಾಗಿ ಅಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪ್ರಾಪ್ತೆಯ ಮೇಲೆ ಐವರು ಸ್ನೇಹಿತರಿಂದ ಅತ್ಯಾಚಾರ

ತುಮಕೂರು:ಅಪ್ರಾಪ್ತೆಯ ಮೇಲೆ ಐವರು ಸ್ನೇಹಿತರಿಂದ ಗ್ಯಾಂಗ್ ರೇಪ್ ನಡೆದ ಭೀಕರ ಘಟನೆಯೊಂದು ತುಮಕೂರಿನ ಮಹಿಳಾ ...

news

ಮತ್ತೊಬ್ಬ ಸ್ವಾಮೀಜಿ ಕಾಮದಾಟ ಬಯಲು

ಮತ್ತೊಬ್ಬ ಸ್ವಾಮೀಜಿಯ ಕಾಮಪುರಾಣ ಬಯಲಾಗಿದ್ದು, ಗಂಗಾವತಿಯ ಕಲ್ಮಠದ ಕೊಟ್ಟೂರು ಸ್ವಾಮಿ ಹಲವಾರು ...

news

ಭೀಕರ ಅಪಘಾತ- ಸ್ಥಳದಲ್ಲಿ ಒಂಭತ್ತು ಮಂದಿ ಸಾವು

ತಮಿಳುನಾಡಿನ ತಿರುಚಿರಾಪಳ್ಳಿಯ ತಾವರನ್ ಕುರಚ್ಚಿಯಲ್ಲಿ ನಿಂತಿದ್ದ ಲಾರಿಗೆ ವ್ಯಾನೊಂದು ಡಿಕ್ಕಿ ಹೊಡೆದ ...

news

ತಂದೆಯಾದ ಖುಷಿಯನ್ನು ಯದುವೀರ್ ಹಂಚಿಕೊಂಡಿದ್ದು ಹೀಗೆ!

ಬೆಂಗಳೂರು: ಮೈಸೂರು ರಾಜ ವಂಶಸ್ಥರ ಕುಟುಂಬಕ್ಕೆ ಹೊಸ ಯುವರಾಜನ ಆಗಮನವಾಗಿದೆ. ತಂದೆಯಾದ ಖುಷಿಯಲ್ಲಿರುವ ...

Widgets Magazine
Widgets Magazine