ಮಾಧ್ಯಮದೆದುರು ಅಂತರಾಳ ಬಿಚ್ಚಿಟ್ಟ ರಜನಿಕಾಂತ್

ಚೆನ್ನೈ, ಬುಧವಾರ, 3 ಜನವರಿ 2018 (07:01 IST)

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅವರು ಈಗಾಗಲೇ ಹೊಸ ಪಕ್ಷವನ್ನು ಘೋಷಿಸಿದ್ದು, ನಂತರ ಪಕ್ಷದ ವೆಬ್ ಸೈಟ್ ಕೂಡ ಬಿಡುಗಡೆ ಮಾಡಿ ಜನರಲ್ಲಿ ಸದಸ್ಯತ್ವ ನೊಂದಾಯಿಸಲು ಹೇಳಿದ್ದರು. ಮಾಧ್ಯಮವೊಂದರಲ್ಲಿ ತಮ್ಮ ಜೀವನದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.


ಅವರು ಕೆಲ ಕಾಲ ಬೆಂಗಳೂರಿನಲ್ಲಿ  ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಕೆಲಸ ಮಾಡಿದ್ದು, ನಂತರ ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡಿರುವುದಾಗಿ ಹೇಳಿದರು. ನಂತರ ಅವರು ಚಿತ್ರರಂಗಕ್ಕೆ ಪ್ರವೇಶಿಸಿ ಮತ್ತೆ ಪತ್ರಕರ್ತರ ಒಡನಾಟ ಬೆಳೆಯಿತು ಎನ್ನುವುದಾಗಿ ತಿಳಿಸಿದರು. ತಮಿಳುನಾಡು ಹಲವು ಕ್ರಾಂತಿಗಳು ನಡೆದ ಸ್ಥಳ, ಅಲ್ಲಿಂದಲ್ಲೇ  ರಾಜಕೀಯ ಆರಂಭಿಸಿದೆ. ಮುಂದೆಯೂ ಅಲ್ಲಿ ಹೊಸ ಕ್ರಾಂತಿ ನಡೆಯುವ ವಿಶ್ವಾಸವಿದೆ. ಪಕ್ಷದ ಅಭ್ಯರ್ಥಿಗಳನ್ನು 234 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಾಗುವುದು ಎಂದು ಹೇಳಿದ್ದಾರೆ. ಹಾಗೆ ತಾನು ಮಾಧ್ಯಮಗಳಿಂದ ಸ್ವಲ್ಪ ದೂರವಿದಿದ್ದು, ಈಗ ರಾಜಕೀಯ ಪ್ರವೇಶಿಸಿದ್ದರಿಂದ ಎಲ್ಲರ ಸಹಕಾರ ಬಯಸುತ್ತಿರುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯ ಬಿಜೆಪಿಯಲ್ಲಿನ ದಿನದಿನದ ಮಾಹಿತಿ ಪಡೆಯುತ್ತಿರುವ ಅಮಿತ್ ಶಾ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ...

news

ತರಬೇತಿ ನೆಪದಲ್ಲಿ 11ವರ್ಷದ ಬಾಲಕಿ ಗುಪ್ತಾಂಗ ಸ್ಪರ್ಶಿಸಿ ಅತ್ಯಾಚಾರ ಎಸಗಿದ ಕರಾಟೆ ಶಿಕ್ಷಕ

11 ವರ್ಷದ ವಿದ್ಯಾರ್ಥಿನಿಗೆ ತರಬೇತಿ ನೀಡುವ ಸಲುವಾಗಿ ಮ್ಯಾಟ್‌ ಮೇಲೆ ಮಲಗುವಂತೆ ಸೂಚಿಸಿ ಆಕೆಯ ...

news

ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ– ಬೆಟ್ಟು ಕಟ್ಟುವೆ ಎಂದ ಡಿಕೆಶಿ

ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲುವುದಿಲ್ಲ. ಬೇಕಾದರೆ ನಾನು ಬೆಟ್ಟು ...

news

ಲೋಕಸಭೆಯಲ್ಲಿ ಮಹಾದಾಯಿ ವಿವಾದ ಪ್ರಸ್ತಾಪ– ಮೋದಿ ಮಧ್ಯಸ್ತಿಕೆ ಒತ್ತಾಯ

ಮಹಾದಾಯಿ ವಿವಾದದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆದಿದ್ದು, ಜನರಿಗೆ ಕುಡಿಯುವ ನೀರು ಪೂರೈಸಲು ...

Widgets Magazine