ಮೋದಿ ಭೇಟಿ : ಬಿಜೆಪಿ ಸೇರ್ಪಡೆಯತ್ತ ರಾಖಿ ಸಾವಂತ್ ಚಿತ್ತ

ಮುಂಬೈ, ಸೋಮವಾರ, 19 ಮೇ 2014 (15:00 IST)

ರಾಷ್ಟ್ರೀಯ ಆಮ್ ಪಾರ್ಟಿ ಎಂಬ ಹೆಸರಿನ ಪಕ್ಷವನ್ನು ಸ್ಥಾಪಿಸಿ ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಕೇವಲ  1,995 ಮತಗಳನ್ನು ಪಡೆದಿದ್ದ ರಾಖಿ ಸಾವಂತ್ ತಾನೇ ಸ್ಥಾಪಿಸಿರುವ ರಾಷ್ಟ್ರೀಯ ಆಮ್ ಪಾರ್ಟಿಗೆ ರಾಜೀನಾಮೆ ನೀಡಿದ್ದು  ಬಿಜೆಪಿಯನ್ನು ಸೇರುವ ಆಶಯವನ್ನು ವ್ಯಕ್ತ ಪಡಿಸಿದ್ದಾರೆ.
 
ಶಿವಸೇನೆಯ ಗಜಾನನ ಚಂದ್ರಕಾಂತ್ ಕೀರ್ತಿಕರ್, ಕಾಂಗ್ರೆಸ್ಸಿನ ಗುರುದಾಸ್ ಕಾಮತ್ ಮತ್ತು ಆಪ್‪ನ ಮಾಯಾಂಕ್ ರಮೇಶ್ ಗಾಂಧಿ ವಿರುದ್ಧ ಕಣಕ್ಕಿಳಿದಿದ್ದ ರಾಖಿ ಹೀನಾಯವಾಗಿ ಸೋಲನ್ನು ಅನುಭವಿಸಿದ್ದರು.  
 
ವಿಶೇಷವಾದ ಸುದ್ದಿ ಏನೆಂದರೆ ಈಗ ಅವಳು ಬಿಜೆಪಿಯನ್ನು  ಸೇರಲು ಬಯಸುತ್ತಿದ್ದಾಳೆ. ವರದಿಗಳ ಪ್ರಕಾರ ಅವಳು ಬಿಜೆಪಿ ನಾಯಕರಾದ 'ರಾಜನಾಥ್ ಸಿಂಗ್, ನರೇಂದ್ರ ಮೋದಿ ಮತ್ತು ಸುಷ್ಮಾ ಸ್ವರಾಜ್‌ರವರನ್ನು ಭೇಟಿಯಾಗಲು ದೆಹಲಿಗೆ ಹೋಗುತ್ತಿದ್ದಾರೆ. 
 
ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ರಾಖಿ 'ನನಗೆ ನನ್ನ ತಪ್ಪಿನ  ಅರಿವಾಗಿದ್ದು, ಈಗ ಬಿಜೆಪಿಯನ್ನು ಸೇರಲು ಬಯಸಿದ್ದೇನೆ. ಪಕ್ಷ ನನ್ನನ್ನು ಸ್ವೀಕರಿಸುತ್ತದೆ ಎಂಬ ನಂಬಿಕೆ ಇದೆ. ನಾನಿನ್ನು ಚುನಾವಣೆಗೆ ಸ್ಪರ್ಧಿಸಲು ಬಯಸುವುದಿಲ್ಲ. ಆದರೆ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಲು ಬಿಜೆಪಿಯನ್ನು ಸೇರ ಬಯಸುತ್ತೇನೆ" ಎಂದು ತಿಳಿಸಿದರು. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚುನಾವಣೆಯಲ್ಲಿ ಸೋಲು ಗೆಲುವು ಸಹಜ: ರಮ್ಯಾಗೆ ಅಂಬಿ ಅಂಕಲ್ ಸಲಹೆ

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸೋಲನುಭವಿಸಿದ್ದ ರಮ್ಯಾಗೆ ಸಚಿವ ಅಂಬಿ ಅಂಕಲ್ ಸಮಾಧಾನದ ಹೇಳಿಕೆ ...

ವಿಧಾನ ಪರಿಷತ್‌ಗೆ ಪ್ರತಿಪಕ್ಷ ನಾಯಕನ ರೇಸ್‌ನಲ್ಲಿ ಈಶ್ವರಪ್ಪ

ಬೆಂಗಳೂರು: ವಿಧಾನ ಪರಿಷತ್‌ಗೆ ಪ್ರತಿಪಕ್ಷ ನಾಯಕರನ್ನು ನೇಮಿಸುವ ಬಗ್ಗೆ ಬಿಜೆಪಿಯಲ್ಲಿ ರಾಜಕೀಯ ...

ನಾನೊಬ್ಬ ಹುಟ್ಟಾ ಹೋರಾಟಗಾರ, ಸಂಸತ್ತಿನಲ್ಲಿ ಗುಡುಗುತ್ತೇನೆ: ದೇವೇಗೌಡ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪಿಗೆ ತಲೆಬಾಗುತ್ತೇನೆ. ಇಬ್ಬರು ಸಂಸದರು ...

ಖರ್ಗೆಗೆ ಸಂಸದೀಯ ಪಕ್ಷದ ನಾಯಕ ಪಟ್ಟ ಸಾಧ್ಯತೆ

ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ...

Widgets Magazine