ಶಿಕ್ಷಕರಿಂದಲೇ ಅತ್ಯಾಚಾರಕ್ಕೊಳಗಾದ ಬಳಿಕ ಅಮ್ಮ ಬೇಕು ಎಂದು ಅಳುತ್ತಿದ್ದ ಬಾಲಕಿ!

ಕೋಲ್ಕೊತ್ತಾ, ಸೋಮವಾರ, 4 ಡಿಸೆಂಬರ್ 2017 (08:56 IST)

ಕೋಲ್ಕೊತ್ತಾ: ಇಲ್ಲಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕರಿಂದಲೇ ಅತ್ಯಾರಕ್ಕೊಳಗಾದ ಬಾಲಕಿ ದಿನವಿಡೀ ಅಮ್ಮ ಬೇಕೆಂದು ಅಳುತ್ತಿದ್ದಳಂತೆ!
 

ಶೌಚಾಲಯಕ್ಕೆ ಹೋಗಿ ಮರಳಿದ ಬಾಲಕಿ ನನಗೆ ಅಮ್ಮ ಬೇಕು. ಅಮ್ಮನ ಬಳಿ ಹೋಗಲು ಬಿಡಿ ಎಂದು ಅಳುತ್ತಿದ್ದಳಂತೆ. ಹೀಗಂತ ಆಕೆಯ ಸಹಪಾಠಿಗಳೇ ಹೇಳಿದ್ದಾರೆ. ಆದರೆ ಶಾಲೆಯವರು ಆಕೆಯ ಅಳುವಿಗೆ ಕಾರಣ ಹುಡುಕಲು ಹೋಗಿಲ್ಲ.
 
ಆದರೆ ಸಂಜೆ ವೇಳೆಗೆ ಸಂತ್ರಸ್ತೆಯ ತಾಯಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆಕೆಯ ಸಮವಸ್ತ್ರದಲ್ಲಿ ರಕ್ತದ ಕಲೆಯಿದ್ದುದು ಕಂಡು ಪೋಷಕರು ವೈದ್ಯರಿಗೆ ತೋರಿಸಿದಾಗ ಒಂದಕ್ಕಿಂತ ಹೆಚ್ಚು ಮಂದಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರಬಹುದು ಎಂದು ತಿಳಿದು ಬಂದಿದೆ.
 
ವಿಚಾರಣೆಯ ನಂತರ ಘಟನೆಯಲ್ಲಿ ಶಾಲೆಯ ದೈಹಿಕ ಶಿಕ್ಷಕರ ಪಾತ್ರವಿರುವುದು ತಿಳಿದುಬಂದಿದೆ. ಇದೀಗ ಇಬ್ಬರನ್ನೂ ಬಂಧಿಸಲಾಗಿದ್ದು, ಶಾಲೆಯೂ ಇವರನ್ನು ಅಮಾನತುಗೊಳಿಸಿದೆ. ಇದೀಗ ಶಾಲೆಯ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಅನಿರ್ದಿಷ್ಟಾವಧಿಗೆ ಶಾಲೆ ಬಂದ್ ಮಾಡಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರತಾಪಸಿಂಹ ಬಂಧನ ಖಂಡಿಸಿ ಹುಣಸೂರು ಬಂದ್- ನಿಷೇಧಾಜ್ಞೆ ಜಾರಿ

ಸಂಸದ ಪ್ರತಾಪ ಸಿಂಹ ಅವರ ಬಂಧನ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಹುಣಸೂರು ಪಟ್ಟಣ ಬಂದ್ ಹಿನ್ನೆಲೆಯಲ್ಲಿ ...

news

‘125 ಕೋಟಿ ಜನರೇ ನನ್ನ ದೇವರು’

ನವದೆಹಲಿ: ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ನಾಯಕರ ಧರ್ಮದ ಬಗ್ಗೆ ...

news

ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಇಂದು ರಾಹುಲ್ ಗಾಂಧಿ ನಾಮತ್ರ ಸಲ್ಲಿಕೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಆಂತರಿಕ ಚುನಾವಣೆಗೆ ಉಪಾಧ್ಯಕ್ಷ ರಾಹುಲ್ ಗಾಂಧಿ ...

news

ಪ್ರತಾಪ್ ಸಿಂಹ ಬಿಡುಗಡೆ ಮಾಡದಿದ್ರೆ ರಾಜ್ಯಾದ್ಯಂತ ಪ್ರತಿಭಟನೆ: ಬಿಎಸ್‌ವೈ ವಾರ್ನಿಂಗ್

ಅಫ್ಜಲ್‌ಪುರ್: ಬಿಜೆಪಿ ಸಂಸದ ಪ್ರತಾಪ್ ಸಿಂಹರನ್ನು ಇಂದು ಸಂಜೆಯೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ...

Widgets Magazine