ಇವನೊಬ್ಬ ಕಾಮಕ್ರಿಮಿ, ಇವನ ಕಾಮದಾಟ ಕೇಳಿದ್ರೆ ಬೆಚ್ಚಿ ಬೀಳ್ತಿರಿ(ವಿಡಿಯೋ ನೋಡಿ)

ಚೆನ್ನೈ, ಶುಕ್ರವಾರ, 17 ನವೆಂಬರ್ 2017 (19:24 IST)

ಸುಮಾರು 50ಕ್ಕೂ ಹೆಚ್ಚು ಏಕಾಂಗಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಹಣ, ಚಿನ್ನ ಲೂಟಿ ಮಾಡಿದ್ದ ಕುಖ್ಯಾತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
28 ವರ್ಷ ವಯಸ್ಸಿನ ಆರೋಪಿ ಮದನ್ ಅರಿವಲಗಮ್, ಮನೆಯಲ್ಲಿ ಮಹಿಳೆಯರು ಏಕಾಂಗಿಯಾಗಿದ್ದಾಗ ಮನೆಗೆ ನುಗ್ಗಿ ಅವರನ್ನು ಬೆದರಿಸಿ ಅತ್ಯಾಚಾರವೆಸಗುತ್ತಿದ್ದ. ಅತ್ಯಾಚಾರವೆಸಗುವ ವಿಡಿಯೋ ತೆಗೆದು ಹಣ ನೀಡದಿದ್ದಲ್ಲಿ ಇಂಟರ್‌ನೆಟ್‌ನಲ್ಲಿ ಹಾಕುವ ಬೆದರಿಕೆಯೊಡ್ಡುತ್ತಿದ್ದ ಎಂದ ಪೊಲೀಸ್ ಮೂಲಗಳು ತಿಳಿಸಿವೆ.
 
ಅತ್ಯಾಚಾರಕ್ಕೊಳಗಾದ ಮಹಿಳೆಯರು, ಯುವತಿಯರು ಮರ್ಯಾದೆಗೆ ಹೆದರಿ ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ. ಇದರಿಂದ ಮತ್ತಷ್ಟು ಉತ್ತೇಜಿತಗೊಂಡ ಆರೋಪಿ ಮದನ್, ಅತ್ಯಾಚಾರ ಮಾಡುವುದನ್ನೇ ಕಾಯಕವಾಗಿಸಿಕೊಂಡಿದ್ದ.
 
ಆದರೆ, ಆರೋಪಿ ಮದನ್ ದುರಾದೃಷ್ಟ ಹೆಗಲೇರಿತ್ತು. ಸಾಫ್ಟ್‌ವೇರ್ ಇಂಜಿನಿಯರ್‌ರೊಬ್ಬರು ಒಬ್ಬ ವ್ಯಕ್ತಿ ತಮ್ಮಿಂದ 8500 ರೂಪಾಯಿ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ದೂರು ನೀಡಿದ್ದರು. ದೂರಿನ ತನಿಖೆ ನಡೆಸಿದಾಗ ಸಿಸಿಟಿವಿ ಆಧಾರದ ಮೇಲೆ ಆರೋಪಿ ಮದನ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. 
 
ಕೃಷ್ಣಗಿರಿ ಜಿಲ್ಲೆಯ ಮತ್ತೂರ್ ಮೂಲದ ಮದನ್ ಬಂಧಿಸಿ ಮೊಬೈಲ್ ವಶಪಡಿಸಿಕೊಂಡು ಪರಿಶೀಲಿಸಿದಾಗ ಅದರಲ್ಲಿರುವ ಹಲವು ಮಹಿಳೆಯರ ರೇಪ್ ವಿಡಿಯೋಗಳನ್ನು ನೋಡಿ ಪೊಲೀಸರಿಗೆ ಆಘಾತ ಎದುರಾಗಿತ್ತು.
 
ಪೊಲೀಸರು ತಮ್ಮ ಭಾಷೆಯಲ್ಲಿಯೇ ಮದನ್ ವಿಚಾರಣೆ ನಡೆಸಿದಾಗ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾಗಿ ತಿಳಿಸಿದ್ದಾನೆ. ಪ್ರತಿಯೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದಾಗ ವಿಡಿಯೋ ಮಾಡಿಕೊಳ್ಳುವುದು ಆತನ ಹವ್ಯಾಸವಾಗಿತ್ತು. ವಿಡಿಯೋಗಳನ್ನು ಮಹಿಳೆಯರಿಗೆ ತೋರಿಸಿ ಮತ್ತೊಮ್ಮೆ ಮಗದೊಮ್ಮೆ ಅತ್ಯಾಚಾರವೆಸಗುತ್ತಿದ್ದ.
 
ಪೊಲೀಸರು ಆರೋಪಿ ಮದನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಜರಾತ್ ಚುನಾವಣೆ: ಬಿಜೆಪಿಯಿಂದ 70 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 70 ...

news

ಖಾಸಗಿ ವೈದ್ಯರ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಹಣ ಹಂಚಿಕೆ

ಕೋಲಾರ: ಖಾಸಗಿ ವೈದ್ಯರ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಆಸ್ಪತ್ರೆಯ ಸಿಬ್ಬಂದಿ ಹಣ ಹಂಚುತ್ತಿರುವ ದೃಶ್ಯ ...

news

ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮಂಡಿಸಿಯೇ ಸಿದ್ದ : ಸಿಎಂ ಘೋಷಣೆ

ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮಂಡಿಸಿಯೇ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ...

news

59 ವರ್ಷದವನಿಂದ 15ರ ಬಾಲೆಯ ಮೇಲೆ ರೇಪ್

ಕೊಡಗು: 59 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು 15 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ...

Widgets Magazine
Widgets Magazine