ರಾಜ್ಯ ಸರಕಾರದ ವಿರುದ್ಧ 100 ಆರೋಪ ಪಟ್ಟಿ ಬಿಡುಗಡೆ ಮಾಡಿ: ಅಮಿತ್ ಶಾ

ಬೆಂಗಳೂರು, ಬುಧವಾರ, 20 ಸೆಪ್ಟಂಬರ್ 2017 (13:07 IST)

2018ರ ವಿಧಾನಸಭೆ ಚುನಾವಣೆಗೆ ಟಾರ್ಗೆಟ್ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸೆಪ್ಟೆಂಬರ್‌ನೊಳಗೆ ರಾಜ್ಯ ಸರಕಾರದ ವಿರುದ್ಧ 100 ಆರೋಪ ಪಟ್ಟಿ ಬಿಡುಗಡೆ ಮಾಡಿ ಎಂದು ರಾಜ್ಯ ಬಿಜೆಪಿ ಘಟಕಕ್ಕೆ ಆದೇಶಿಸಿದ್ದಾರೆ.
ದೆಹಲಿಯಲ್ಲಿಯೇ ಕುಳಿತು ರಾಜ್ಯ ಬಿಜೆಪಿಯನ್ನು ನಿಯಂತ್ರಿಸುತ್ತಿರುವ ಶಾ, ಸೆಪ್ಟೆಂಬರ್‌ನೊಳಗೆ ರಾಜ್ಯ ಸರಕಾರದ ವಿರುದ್ಧ 100 ಆರೋಪ ಪಟ್ಟಿ ಬಿಡುಗಡೆ ಮಾಡಿ. ರಾಜ್ಯದಲ್ಲಿ ಜನಾಂದೋಲನ ಸೃಷ್ಟಿಸಿ ಹೋರಾಟವನ್ನು ಆರಂಭಿಸಿ ಎಂದು ಸೂಚನೆ ನೀಡಿದ್ದಾರೆ.
 
ಮುಂಬರುವ ಫೆಬ್ರವರಿಯವರೆಗೆ ರಾಜ್ಯ ಸರಕಾರದ ವಿರುದ್ಧದ ಹೋರಾಟಗಳು ಪೂರ್ಣಗೊಳ್ಳಬೇಕು. ಸರಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಬೇಕು.ಜಿಲ್ಲಾ, ತಾಲೂಕು ಮತ್ತು ಗ್ರಾಮಗಳವರೆಗೆ ಹೋರಾಟವನ್ನು ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.
 
ಮುಂಬರುವ 2018ರ ಚುನಾವಣೆಯ ರಣತಂತ್ರವನ್ನು ರೂಪಿಸಿಕೊಂಡು ಸಿಎಂ ಸಿದ್ದರಾಮಯ್ಯ ಸರಕಾರದ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಿ ಎಂದು ಬಿಜೆಪಿ ನಾಯಕರಿಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಅಮಿತ್ ಶಾ ಸಿಎಂ ಸಿದ್ದರಾಂಮಯ್ಯ ಯಡಿಯೂರಪ್ಪ ಬಿಜೆಪಿ ಕಾಂಗ್ರೆಸ್ Yeddyurappa Bjp Congress Cm Siddaramaiah Amit Sha

ಸುದ್ದಿಗಳು

news

ನಾವು ಯಾವ ನಾಯಕರನ್ನೂ ಕಡೆಗಣಿಸುತ್ತಿಲ್ಲ: ಡಿ.ಕೆ.ಸುರೇಶ್ ಆರೋಪಕ್ಕೆ ಸಿಎಂ ಉತ್ತರ

ಪಕ್ಷದಲ್ಲಿ ನಮ್ಮನ್ನ ಕಡೆಗಣಿಸಲಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಕ್ಕೆ ಕೋಲಾರದಲ್ಲಿ ...

news

ಸಿದ್ದರಾಮಯ್ಯರಷ್ಟು ಸುಳ್ಳು ಹೇಳುವ ವ್ಯಕ್ತಿ ಯಾರು ಇಲ್ಲ: ಬಿಎಸ್‌ವೈ

ಬೆಂಗಳೂರು: ಸಿದ್ದರಾಮಯ್ಯರಷ್ಟು ಸುಳ್ಳು ಹೇಱುವ ವ್ಯಕ್ತಿ ಯಾರು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

news

ಐಷಾರಾಮಿ ಜೀವನಕ್ಕಾಗಿ ಉಂಡ ಮನೆಗೆ ದ್ರೋಹ ಬಗೆದ ಕೆಲಸಗಾರರು

ಬೆಂಗಳೂರು: ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಕಂಪನಿಯ ಸಿಇಒ ಮನೆಯಲ್ಲಿ, ಮನೆಕೆಲಸಗಾರರೇ ಕೋಟ್ಯಂತರ ರೂ. ...

news

ನನ್ನ ಕ್ಷೇತ್ರಕ್ಕೆ ಮೇಯರ್ ಸ್ಥಾನ ಸಿಗಬೇಕು, ನನ್ನ ಸಹನೆಯ ಕಟ್ಟೆ ಒಡೆದಿದೆ: ಡಿ.ಕೆ. ಸುರೇಶ್ ಖಡಕ್ ವಾರ್ನಿಂಗ್

ಕಾಂಗ್ರೆಸ್`ನಲ್ಲಿ ನಮ್ಮನ್ನ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿ ಮತ್ತು ಅಧಿಕಾರ ಹಂಚಿಕೆಯಲ್ಲಿ ನಮ್ಮ ...

Widgets Magazine
Widgets Magazine