Widgets Magazine
Widgets Magazine

ನಟ ಶರತ್ ಕುಮಾರ್, ಆರೋಗ್ಯ ಸಚಿವ ವಿಜಯ ಭಾಸ್ಕರ್ ನಿವಾಸದ ಮೇಲೆ ಐಟಿ ದಾಳಿ

ಚೆನ್ನೈ, ಶುಕ್ರವಾರ, 7 ಏಪ್ರಿಲ್ 2017 (11:11 IST)

Widgets Magazine

ಶಶಿಕಲಾ ಬಣದಲ್ಲಿ ಗುರುತಿಸಿಕೊಂಡಿರುವ ತಮಿಳುನಾಡು ಆರೋಗ್ಯ ಸಚಿವ  ಸಿ. ವಿಜಯಭಾಸ್ಕರ್ ಮತ್ತು ನಟ ಶರತ್ ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಜಯಲಲಿತಾ ನಿಧನದ ಬಳಿಕ ತೆರವಾದ ಆರ್.ಕೆ. ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಕಾರಣಿಗಳ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
 


ಬೆಳ್ಳಂಬೆಳಗ್ಗೆ ಈ ಇಬ್ಬರು ನಾಯಕರ ನಿವಾಸದ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ವಿಜಯ ಭಾಸ್ಕರ್ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ ಆಸ್ತಿ ಇರುವ 34 ಕಡೆ ದಾಳಿ ನಡೆದಿದೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಮತದಾರನಿಗೆ ಹಣ ನೀಡುತ್ತಿದ್ದ ದೃಶ್ಯವಿತ್ತು. ಅಲ್ಲದೆ, ಶಶಿಕಲಾ ಬಣದ ಅಭ್ಯರ್ಥಿಗೆ ಮತ ಹಾಕುವಂತೆ ಆತ ಹೇಳುತ್ತಿದ್ದ. ಇದರ ಆಧಾರದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಶಶಿಕಲಾ ಬಣಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಆರ್,ಕೆ, ನಗರ ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಲು ನಿರ್ಧರಿಸಿರುವ ಕೆಲ ನಾಯಕರು ಹಣದ ಹೊಳೆ ಹರಿಸುತ್ತಿದ್ದಾರೆ ಎನ್ನಲಾಗಿದೆ.ಹಣ ಹಂಚಿಕೆಯಲ್ಲಿ ವಿಜಯ ಭಾಸ್ಕರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೆಸರಿನಲ್ಲಿ ಹೂತುಕೊಂಡಿದ್ದ ಶ್ರೀಕಂಠೇಶ್ವರನ ರಥದ ಚಕ್ರ

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಇವತ್ತು ಶ್ರೀಕಂಠೇಶ್ವರನ ರಥೋತ್ಸವ ನಡೆಯುತ್ತಿದೆ. ರಥ ಸಂಚರಿಸುತ್ತಿದ್ದ ...

news

ಸಿರಿಯಾ ವಾಯುನೆಲೆ ಮೇಲೆ ಅಮೆರಿಕದ 60 ಕ್ಷಿಪಣಿ ದಾಳಿ

ವಿಷಾನಿಲ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟ ಬಳಿಕ ಸಿರಿಯಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಅಮೆರಿಕ ...

news

ಜಿ.ಪರಮೇಶ್ವರ್ ದುಡ್ಡುಕೊಟ್ಟು ಸಚಿವರಾಗಿದ್ದಾರೆ: ಶ್ರೀನಿವಾಸ್ ಪ್ರಸಾದ್ ಬಾಂಬ್

ನಂಜನಗೂಡು: ಗೃಹ ಸಚಿವ ಜಿ.ಪರಮೇಶ್ವರ್ ದುಡ್ಡುಕೊಟ್ಟು ಸಚಿವರಾಗಿದ್ದಾರೆ. ನನ್ನ ಮನೆಗೆ ದುಡ್ಡಿನ ಚೀಲ ...

news

ಸಿದ್ರಾಮಯ್ಯನವರೇ ಖಜಾನೆ ಲೂಟಿ ಮಾಡಿ ಹಣ ಹಂಚುತ್ತಿದ್ದೀರಾ? ಯಡಿಯೂರಪ್ಪ

ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖಜಾನೆಯನ್ನು ಲೂಟಿ ಮಾಡಿ ಉಪಚುನಾವಣೆಯಲ್ಲಿ ಗೆಲ್ಲಲು ಹಣ ...

Widgets Magazine Widgets Magazine Widgets Magazine