ಎಐಎಡಿಎಂಕೆ ಪಕ್ಷದಿಂದ ಶಶಿಕಲಾ, ದಿನಕರನ್ ವಜಾ

ಚೆನ್ನೈ, ಸೋಮವಾರ, 28 ಆಗಸ್ಟ್ 2017 (14:08 IST)

Widgets Magazine

ತಮಿಳುನಾಡಿನಲ್ಲಿ ಇಂದು ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ವಿ.ಕೆ. ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರನ್ನು ಸಿಎಂ ಪಳನಿಸ್ವಾಮಿ ನೇತೃತ್ವದ ಸಭೆಯಲ್ಲಿ ವಜಾಗೊಳಿಸಲಾಗಿದೆ.
ಇಂದು ಎಐಎಡಿಎಂಕೆ ಕಚೇರಿಯಲ್ಲಿ ಸಿಎಂ ಪಳನಿಸ್ವಾಮಿ ನೇತೃತ್ವದಲ್ಲಿ ರಾಜ್ಯದ ರಾಜಕೀಯ ಸ್ಥಿತಿಗತಿ ಕುರಿತಂತೆ ಚರ್ಚಿಸಲು ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಶಶಿಕಲಾ ಮತ್ತು ದಿನಕರನ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ವಜಾಗೊಳಿಸಲಾಯಿತು.
 
ಕೆಲ ದಿನಗಳ ಹಿಂದೆ ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಬಣಗಳು ಒಂದಾಗಿದ್ದವು. ಕೆಲ ದಿನಗಳಲ್ಲಿ ಪಕ್ಷದಿಂದ ಶಶಿಕಲಾ ಮತ್ತು ದಿನಕರನ್ ಅವರನ್ನು ಉಚ್ಚಾಟಿಸಬೇಕು ಎನ್ನುವ ಷರತ್ತು ಇಡಲಾಗಿತ್ತು. ಅದರಂತೆ, ಇಂದು ಶಶಿಕಲಾ ಮತ್ತು ದಿನಕರನ್‌ಗೆ ಗೇಟ್ ಪಾಸ್ ನೀಡಲಾಗಿದೆ.
 
ಮತ್ತೊಂದೆಡೆ ಟಿಟಿವಿ ದಿನಕರನ್ ಪ್ರತ್ಯೇಕ ಸಭೆ ಕರೆದಿದ್ದು 21 ಎಐಎಡಿಎಂಕೆ ಶಾಸಕರು ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಶಿಕಲಾ ದಿನಕರನ್ ಎಐಎಡಿಎಂಕೆ ಸಿಎಂ ಪಳನಿಸ್ವಾಮಿ Sashikala Dinakaran Dismiss Aiadmk Party Cm Palaniswami

Widgets Magazine

ಸುದ್ದಿಗಳು

news

ಬೆಂಗಳೂರಿಗೆ ಬಂದಿವೆ 200, 50 ರೂ. ಹೊಸ ನೋಟು: ನೋಟು ಪಡೆಯಲು ಮುಗಿಬಿದ್ದ ಜನ

ಗಣೇಶ ಹಬ್ಬದಂದು ಆರ್`ಬಿಐ ಬಿಡುಗಡೆಗೊಳಿಸಿದ 200, 50 ರೂ. ಹೊಸ ನೋಟು ಬೆಂಗಳೂರಿನಲ್ಲಿ ಇಂದಿನಿಂದ ...

news

ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕಸುಬಾಗಿದೆ: ಸಚಿವ ಜಾರ್ಜ್

ಬೆಂಗಳೂರು: ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕಸುಬಾಗಿದೆ. ಸುಳ್ಳು ಆರೋಪಗಳನ್ನು ಮಾಡಿ ಸರಕಾರದ ತೇಜೋವಧೆಗೆ ...

news

ಡೋಕ್ಲಾಂ ಬಿಕ್ಕಟ್ಟು ಅಂತ್ಯ: ಭಾರತ, ಚೀನಾ ಸೇನಾಪಡೆಗಳು ವಾಪಸ್

ನವದೆಹಲಿ: ಡೋಕ್ಲಾಂ ಬಿಕ್ಕಟ್ಟು ಅಂತ್ಯಗೊಳಿಸಲು ಭಾರತ ಮತ್ತು ಚೀನಾ ದೇಶಗಳು ಗಡಿಯಲ್ಲಿನ ಸೇನಾ ಪಡೆಗಳನ್ನು ...

news

ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ: ಅಣ್ಣಾಡಿಎಂಕೆ ಸಭೆಗೆ 40 ಶಾಸಕರ ಗೈರು

ಅಣ್ಣಾಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಸಿಎಂ ಪಳನಿಸ್ವಾಮಿ ...

Widgets Magazine