ಪಟಾಕಿ ನಿಷೇಧ ಕುರಿತ ತೀರ್ಪನ್ನು ರಾಜಕೀಯಗೊಳಿಸಬೇಡಿ: ಸುಪ್ರೀಂಕೋರ್ಟ್

ನವದೆಹಲಿ, ಶುಕ್ರವಾರ, 13 ಅಕ್ಟೋಬರ್ 2017 (13:54 IST)

ನವದೆಹಲಿ: ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಪಟಾಕಿ  ಸಿಡಿಸುವುದು ನಿಷೇಧ ಮಾಡಿರುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ ಈ ಆದೇಶವನ್ನು ಮಾರ್ಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ನ್ಯಾಯಾಲಯದ ತೀರ್ಪನ್ನು ರಾಜಕೀಯಗೊಳಿಸಬಾರದು  ಎಂದು ಹೇಳಿದೆ.


ತೀರ್ಪಿನ ಬಗ್ಗೆ ಕೋಮುವಾದದ ಟೀಕೆಗಳು ಕೇಳಿ ಬರುತ್ತಿವೆ. ಪಟಾಕಿ ನಿಷೇಧಕ್ಕೆ ಕೋಮುವಾದದ ಲೇಪವ ಮಾಡುವುದು ಬೇಡ. ಇದನ್ನು ರಾಜಕೀಯಗೊಳಿಸಬೇಡಿ ಎಂದು ನ್ಯಾಯಾಲಯ ಹೇಳಿದೆ.

ದೆಹಲಿ-ಎನ್ ಸಿಆರ್ ನಲ್ಲಿ ಪಟಾಕಿ ಮಾರಾಟ ನಿಷೇಧವನ್ನು ಜಾರಿಗೆ ತರಲು ನ್ಯಾಯಾಲಯ ದೆಹಲಿಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಆದೇಶ ನೀಡುವುದಕ್ಕೂ ಮೊದಲು ಪಟಾಕಿ ಖರೀದಿಸಿರುವವರು ದೀಪಾವಳಿಯಂದು ಪಟಾಕಿ ಸಿಡಿಸಲು ಯಾವುದೇ ನಿರ್ಬಂಧ ಹೇರಿಲ್ಲ.

ತಾತ್ಕಾಲಿಕ ಪರವಾನಗಿ ಹೊಂದಿರುವವರು ದೆಹಲಿ ಮತ್ತು ಎನ್ ಸಿಆರ್ ನಲ್ಲಿ ಪಟಾಕಿ ಮಾರಾಟ ಮಾಡದಂತೆ ನಿಷೇಧಿಸಿರುವ ಆದೇಶವನ್ನು ಸಡಿಲಗೊಳಿಸುವಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರನ್ನು ಗಾರ್ಬೆಜ್ ಸಿಟಿ ಮಾಡಿದ್ದು ಬಿಜೆಪಿ : ರಾಮಲಿಂಗಾರೆಡ್ಡಿ ವಾಗ್ದಾಳಿ

ಬೆಂಗಳೂರು: ಕಳೆದ 2013 ರಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಬೆಂಗಳೂರು ನಗರವನ್ನು ಗಾರ್ಬೆಜ್ ...

news

ಮಾಮೂಲಿ ನೀಡದ್ದಕ್ಕೆ ದಂಪತಿಗಳ ಮೇಲೆ ಪೊಲೀಸರಿಂದ ಹಲ್ಲೆ

ಬೆಂಗಳೂರು: ಯಲಹಂಕ ನಗರದ ಎನ್‌ಇಎಸ್ ಸರ್ಕಲ್ ಬಳಿ ಟೀ ಅಂಗಡಿಯಿಟ್ಟು ವ್ಯಾಪಾರ ಮಾಡುತ್ತಿದ್ದ ದಂಪತಿಗಳ ...

news

24 ಗಂಟೆಯಲ್ಲಿ 3ನೇ ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್

ಜಮ್ಮು ಕಾಶ್ಮೀರ: ಪಾಕ್ ಪಡೆ ಮತ್ತೆ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿವೆ. ಪೂಂಚ್ ಜಿಲ್ಲೆಯ ಕೃಷ್ಣಘಾಟಿ ...

news

ಹಾಸನಾಂಬೆಯ ದರ್ಶನಕ್ಕೆ ಬಂದ ದೇವೇಗೌಡ ಕುಟುಂಬ

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬೆ ಕ್ಷೇತ್ರದ ಬಾಗಿಲು ತೆರೆದಿದ್ದು, ...

Widgets Magazine