ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೇ ಶಿಕ್ಷೆ ವಿಧಿಸಿದ ನ್ಯಾಯಮೂರ್ತಿಗೆ ಜೈಲು ಶಿಕ್ಷೆ!

NewDelhi, ಮಂಗಳವಾರ, 9 ಮೇ 2017 (11:31 IST)

Widgets Magazine

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೇ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋಲ್ಕೊತ್ತಾ ಹೈ ಕೋರ್ಟ್ ನ್ಯಾಯಾಧೀಶ ಕರ್ಣನ್ ಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.


 
ಸುಪ್ರೀಂ ಕೋರ್ಟ್ ನ ಹಲವು ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಾರ್ವಜನಿಕವಾಗಿ ನ್ಯಾಯಾಂಗ ವ್ಯವಸ್ಥೆಯ ಅವಹೇಳನ ಮಾಡುತ್ತಿದ್ದ ಕರ್ಣನ್ ರನ್ನು ತಕ್ಷಣವೇ ಬಂಧಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
 
ಸೋಮವಾರ ನ್ಯಾಯಮೂರ್ತಿ ಕರ್ಣನ್ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಜಗದೀಶ್ ಸಿಂಗ್ ಕೇದಾರ್ ಸೇರಿದಂತೆ ಏಳು ಮಂದಿ ನ್ಯಾಯಾಧೀಶರ ವಿರುದ್ಧ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ತೀರ್ಪಿತ್ತಿದ್ದರು.
 
ದಲಿತ ನ್ಯಾಯಾಧೀಶರೊಬ್ಬರ ಮೇಲೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಕರ್ಣನ್ ನ್ಯಾಯಾಧೀಶರಿಗೇ ಶಿಕ್ಷೆ ವಿಧಿಸಿದ್ದರು. ಇದಕ್ಕೂ ಮೊದಲೇ ಪ್ರಕರಣವೊಂದರ ವಿಚಾರಣೆಗೆ ಬಾರದ ಹಿನ್ನಲೆಯಲ್ಲಿ ಕರ್ಣನ್ ವಿರುದ್ಧ ಸುಪ್ರೀಂ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಾಕಿಸ್ತಾನ ಯೋಧರ ತಲೆಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಮುಸ್ಲಿಂ ಸಂಘಟನೆ!

ನವದೆಹಲಿ: ಭಾರತೀಯ ಯೋಧರ ಶಿರಚ್ಛೇದ ನಡೆಸಿದ ಪಾಕಿಸ್ತಾನ ಸೈನಿಕರ ವಿರುದ್ದ ಭಾರತದಲ್ಲಿ ಭಾರೀ ಆಕ್ರೋಶವಿದೆ. ...

news

ಸುನಂದಾ ಪುಷ್ಕರ್ ಸಾವಿಗೆ ಹೊಸ ಟ್ವಿಸ್ಟ್!

ನವದೆಹಲಿ: ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅನುಮಾನಸ್ಪದ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ...

news

ನಾಪತ್ತೆಯಾಗಿದ್ದ ಬೀಚ್ 30 ವರ್ಷಗಳ ನಂತರ ಮತ್ತೆ ಪ್ರತ್ಯಕ್ಷ!

ಐರ್ಲೆಂಡ್: ಬೀಚ್ ನಾಪತ್ತೆಯಾಗುವುದು, ಪ್ರತ್ಯಕ್ಷವಾಗುವುದು ಎಂದರೇನು? ಐರ್ಲೆಂಡ್ ನಲ್ಲಿ ಇಂತಹದ್ದೊಂದು ...

news

ಭಾರತದ ಭೂಪಟದಲ್ಲಿ ಕಾಶ್ಮೀರವೇ ನಾಪತ್ತೆ!

ನವದೆಹಲಿ: ಭಾರತದ ಭೂಶಿರ ನಾಪತ್ತೆಯಾಗಿದೆ. ಅಂದರೆ ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರವೇ ...

Widgets Magazine