ವಿಚಿತ್ರ ಆದ್ರೂ ಸತ್ಯ: ದಿನದಲ್ಲಿ ಸರಕಾರಿ ಶಾಲೆ, ರಾತ್ರಿ ಡಾನ್ಸ್ ಬಾರ್

ಲಕ್ನೋ, ಗುರುವಾರ, 10 ಆಗಸ್ಟ್ 2017 (16:56 IST)

Widgets Magazine

ಗ್ರಾಮ ಪಂಚಾಯತಿಯ ಮುಖ್ಯಸ್ಥನ ಪುತ್ರನ ಜನ್ಮದಿನಾಚರಣೆಗಾಗಿ ಸರಕಾರಿ ಶಾಲೆಯಲ್ಲಿ ಯುವತಿಯರ ಅಶ್ಲೀಲ ಡಾನ್ಸ್ ಬಾರ್ ಕಾರ್ಯಕ್ರಮ ನಡೆಸಿರುವುದು ಶಿಕ್ಷಣ ಇಲಾಖೆಯಲ್ಲಿ ಆಕ್ರೋಶ ಮೂಡಿಸಿದೆ.
jail dance
ಸರಕಾರಿ ಶಾಲೆಯಲ್ಲಿ ನಡೆದ ಡಾನ್ಸ್ ಬಾರ್ ಕಾರ್ಯಕ್ರಮದಲ್ಲಿ ಯುವತಿಯರು ಅಶ್ಲೀಲ ನೃತ್ಯದಲ್ಲಿ ತೊಡಗಿದ್ದರೆ, ಇಬ್ಬರು ಪುರುಷರು ಯುವತಿಯರಿಗೆ ಹಣ ಹಂಚುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
 
ಜಮಾಲ್ಪುರ್ ಗ್ರಾಮದಲ್ಲಿರುವ ತೇತ್ರೈಹಿಯಾ ಕಲಾ ಖುರ್ದ್ ಪ್ರಾಥಮಿಕ ಶಾಲೆಗೆ ರಕ್ಷಾ ಬಂಧನದ ಅಂಗವಾಗಿ ರಜೆ ಘೋಷಿಸಲಾಗಿತ್ತು. ಆದರೆ, ಮಾರನೇ ದಿನ ಶಾಲೆಗೆ ಬಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಆಘಾತ ಕಾದಿತ್ತು. ಶಾಲೆಯ ಆವರಣದ ತುಂಬೆಲ್ಲಾ ಮದ್ಯದ ಬಾಟಲಿಗಳು ಬಿದ್ದಿರುವುದು ಕಂಡು ಬಂದಿತ್ತು.ವಿದ್ಯಾರ್ಥಿಗಳೊಂದಿಗೆ ಅದನ್ನು ಸ್ವಚ್ಛಗೊಳಿಸಬೇಕಾಯಿತು.
 
ಶಿಕ್ಷಕರು ವಿಚಾರಣೆ ನಡೆಸಿದಾಗ,  ಗ್ರಾಮದ ಮುಖ್ಯಸ್ಥರಾದ ರಾಮಕೇಶ್ ಯಾದವ್ ತನ್ನ ಮಗನ ಹುಟ್ಟುಹಬ್ಬವನ್ನು ಆಚರಿಸಲು ಒಂದು ಪಾರ್ಟಿಯನ್ನು ಏರ್ಪಡಿಸಿದ್ದರು ಎಂದು ತಿಳಿದುಬಂದಿದೆ.
 
ಘಟನೆಯ ಬಗ್ಗೆ ಸಹಾಯಕ ಶಿಕ್ಷಕ ಅಶೋಕ್ ಕುಮಾರ್ ಮೂಲಭೂತ ಶಿಕ್ಷಾ ಅಧಿಕಾರಿ (ಬಿಎಸ್ಎ) ಪ್ರವೀಣ್ ಕುಮಾರ್ ತಿವಾರಿಯನ್ನು ಮಾಹಿತಿ ನೀಡಿದರು. ಅದರ ಅನುಸಾರ ತನಿಖೆ ನಡೆಸಲು ಮೂಲ ಶಿಕ್ಷಣ ಅಧಿಕಾರಿಗಳಿಗೆ ತಿವಾರಿ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉಗ್ರ ಹಫೀಜ್‌ ಸಯೀದ್‌ ವಿರುದ್ಧ ಕ್ರಮಕ್ಕೆ ಸಾವಿರ ಮುಸ್ಲಿಂ ಮೌಲ್ವಿಗಳ ಒತ್ತಾಯ

ಮುಂಬೈ: ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವ ಜಮಾತ್ ಉದ್ ದಾವಾ ಮುಖ್ಯಸ್ಥ, ಮುಂಬೈ ಉಗ್ರರ ...

news

ಪ್ರಧಾನಿ ಮೋದಿ ಭೇಟಿಯಾದ ಮಾಜಿ ಪ್ರಧಾನಿ ದೇವೇಗೌಡರು

ಬೆಂಗಳೂರು: ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದು ನವದೆಹಲಿಯಲ್ಲಿ ಪ್ರಧಾನಿ ...

news

ಜಂತಕಲ್ ಮೈನಿಂಗ್: ಮಾಜಿ ಸಿಎಂ ಕುಮಾರಸ್ವಾಮಿಗೆ ರಿಲೀಫ್

ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣ ಕುರಿತಂತೆ ಹೈಕೋರ್ಟ್ ಪೀಠ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ...

news

ಮೂಢನಂಬಿಕೆ ನಿವಾರಿಸಲು ಏಳು ಬಾರಿ ಚಾಮರಾಜನಗರಕ್ಕೆ ಭೇಟಿ: ಸಿಎಂ

ಚಾಮರಾಜನಗರಕ್ಕೆ ಏಳು ಬಾರಿ ಭೇಟಿ ನೀಡಿದ್ದರೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿದ್ದೇನೆ ಎಂದು ಸಿಎಂ ...

Widgets Magazine