ಸೆಲ್ಫಿ ಹುಚ್ಚು: ದೋಣಿ ಮುಗುಚಿ ಎಂಟು ಯುವಕರ ಸಾವು

ನಾಗ್ಪುರ್, ಸೋಮವಾರ, 10 ಜುಲೈ 2017 (15:59 IST)

Widgets Magazine

ನಾಗ್ಪುರದ ವೇನಾ ಅಣೆಕಟ್ಟಿನ ಹಿನ್ನಿರಿನಲ್ಲಿ ಫೇಸ್ಬುಕ್ ಲೈವ್ ಮಾಡುತ್ತಾ ಸೆಲ್ಫಿ ತೆಗೆಯುತ್ತಿರುವಾಗ ದೋಣಿ ಮುಗುಚಿದ್ದರಿಂದ ಕನಿಷ್ಠ ಎಂಟು ಮಂದಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.
 
20 ರಿಂದ 25 ವಯೋಮಾನದ ಯುವಕರು ದೋಣಿಯಲ್ಲಿ ಒಂದೇ ಕಡೆ ಕುಳಿತು ಸೆಲ್ಫಿ ತೆಗೆಯುತ್ತಾ ಫೇಸ್‌ಬುಕ್ ಲೈವ್ ಮಾಡುತ್ತಿರುವ ಸಂದರ್ಭದಲ್ಲಿ ಆಯತಪ್ಪಿದ ದೋಣಿ ಮುಳುಗುತ್ತಿರುವ ವಿಡಿಯೋ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ದೋಣಿಯಲ್ಲಿ 11 ಪ್ರಯಾಣಿಕರಿದ್ದು, ಮೂವರನ್ನು ರಕ್ಷಿಸಲಾಗಿದೆ. ಉಳಿದ ಎಂಟು ಯುವಕರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ನಾಗ್ಪುರ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಬಾಲ್ಕಾವಾಡೆ ಮಾಹಿತಿ ನೀಡಿದ್ದಾರೆ.
 
ದೋಣಿ ಮುಗುಚಿ ವಿದ್ಯಾರ್ಥಿಗಳು ನೀರುಪಾಲಾಗಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆ ಮೂವರನ್ನು ಮಾತ್ರ ರಕ್ಷಿಸುವಲ್ಲಿ ಯಶಸ್ವಿಯಾಗಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸೆಲ್ಫಿ ದೋಣಿ ವಿಹಾರ ವೇನಾ ಡ್ಯಾಮ್ ಫೇಸ್‌ಬುಕ್ ಲೈವ್ Selfie Boat Drown Vena Dam Facebook Live

Widgets Magazine

ಸುದ್ದಿಗಳು

ಫೇಸ್ ಬುಕ್ ನಲ್ಲಿ ಸೆಲ್ಫೀ ಪೋಸ್ಟ್ ಮಾಡುತ್ತಲೇ ನೀರಿನಲ್ಲಿ ಮುಳುಗಿದರು!

ನಾಗ್ಪುರ: ಸ್ನೇಹಿತರೊಂದಿಗೆ ಸುತ್ತಾಡುವಾಗ ಸೆಲ್ಫೀ ತೆಗೆದು ಫೇಸ್ ಬುಕ್ ನಲ್ಲಿ ಫೋಟೋ, ವಿಡಿಯೋ ಪೋಸ್ಟ್ ...

news

ನಿರಾಶ್ರಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ

ನವದೆಹಲಿ: ನಗರದ ಕನ್ನಾಟ್ ಪ್ರದೇಶದಲ್ಲಿ ತನ್ನ ಪೋಷಕರೊಂದಿಗೆ ಮಲಗಿದ್ದ 8 ವರ್ಷ ವಯಸ್ಸಿನ ಬಾಲಕಿಯೊಬ್ಬಳ ...

news

ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಬಸವರಾಜ್ ಪಾಟೀಲ್ ಸೇಡಂ?

ಬೆಂಗಳೂರು: ಬಿಜೆಪಿ ರಾಜ್ಯಸಭೆ ಸದಸ್ಯರಾಗಿರುವ ಬಸವರಾಜ್ ಪಾಟೀಲ್ ಸೇಡಂ ಎನ್‌ಡಿಎ ಉಪರಾಷ್ಟ್ರಪತಿ ...

news

ಬಿಜೆಪಿ ಸುಮ್ಮನಿದ್ರೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ: ಜಿ.ಪರಮೇಶ್ವರ್

ಬೆಂಗಳೂರು: ಬಿಜೆಪಿ ಮತ್ತವರ ಸಂಘಟನೆಗಳು ಸುಮ್ಮನಿದ್ರೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ ಎಂದು ಕೆಪಿಸಿಸಿ ...

Widgets Magazine