ಅನೆಯೊಂದಿಗೆ ಸೆಲ್ಫಿ ತೆಗೆಯುಲು ಹೋಗಿ ಜೀವತೆತ್ತ ಭೂಪ(ವಿಡಿಯೋ ನೋಡಿ)

ಪಶ್ಚಿಮ ಬಂಗಾಳ, ಶುಕ್ರವಾರ, 24 ನವೆಂಬರ್ 2017 (16:51 IST)

ಸೆಲ್ಫಿ ಮಾಡುವಂತಹ ಅವಾಂತರ ಒಂದಲ್ಲ ಎರಡಲ್ಲ ಸಾವಿರಾರು. ಸೆಲ್ಫಿ ತೆಗೆಯುವಾಗ ಸಾವನ್ನಪ್ಪಿರುವ ಅನೇಕ ಘಟನೆಗಳು ನಡೆದರೂ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ.
ಅನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ಮಹಾನುಭಾನೊಬ್ಬ ಆನೆಯಿಂದಲೇ ತುಳಿಸಿಕೊಂಡು ಸಾವನ್ನಪ್ಪಿದ್ದ ಹೇಯ ಘಟನೆ ವರದಿಯಾಗಿದೆ. 
 
ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಹೆದ್ದಾರಿಯಲ್ಲಿ ಆನೆಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಹುಚ್ಚಿನಿಂದ ವಾಹನದಿಂದ ಇಳಿದು ಆನೆಯ ಸೆಲ್ಫಿ ತೆಗೆಯುತ್ತಿರುವಾಗಲೇ ಆನೆಯ ದಾಳಿಗೆ ಬಲಿಯಾಗಿದ್ದಾನೆ.
 
ಜಲಪೈಗುರಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದಲ್ಲಿ ಸಾಗುತ್ತಿದ್ದ 40 ವರ್ಷ ವಯಸ್ಸಿನ ಬ್ಯಾಂಕ್ ಭದ್ರತಾ ಸಿಬ್ಬಂದಿ ಸಾಧಿಕ್ ರೆಹಮಾನ್, ದಾರಿಯಲ್ಲಿ ಬಂದ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಉದ್ದೇಶದಿಂದ ಕೆಳಗಿಳಿದು ಫೋಟೋ ತೆಗೆಯಲು ಪ್ರಯತ್ನಿಸಿದ್ದಾನೆ.   
 
ಸಾದಿಕ್ ಮೇಲೆ ಆನೆ ದಾಳಿ ಮಾಡಿದಾಗ ಸ್ಥಳದಲ್ಲಿಯೇ ಇದ್ದ ಸಾರ್ವಜನಿಕರು ಅಸಹಾಯಕರಾಗಿ ಮೂಕ ಪ್ರೇಕ್ಷಕರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಾಧಿಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗದೇ ಸಾವನ್ನಪ್ಪಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

2019ರೊಳಗೆ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ

ಉಡುಪಿ: ಮುಂಬರುವ 2019ರೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಪೇಜಾವರ ಶ್ರೀಗಳು ...

news

ಉಡುಪಿ ನಗರದಲ್ಲಿ ಪ್ಲ್ಯಾಸ್ಟಿಕ್ ಇಲ್ಲದೇ ವಿವಾಹ ಕಾರ್ಯಕ್ರಮ

ಉಡುಪಿ: ಉಡುಪಿ ಜಿಲ್ಲೆಯನ್ನು 2018 ಅಕ್ಟೋಬರ್ 2ರ ಒಳಗಾಗಿ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ...

news

ಲಿಂಗ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ ಮಹಿಳಾ ಪೊಲೀಸ್ ಪೇದೆ

ಬೀಢ್: ಬಹುಶಃ ಭಾರತೀಯ ಪೋಲಿಸ್ ಪಡೆಗಳಲ್ಲಿ ಮೊದಲ ಬಾರಿಗೆ ಈ ರೀತಿಯ ಬೆಳವಣಿಗೆ ಕಂಡುಬಂದಿದೆ. ಮಹಾರಾಷ್ಟ್ರದ ...

news

ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ: ಉದ್ಭವ್ ಠಾಕ್ರೆ ಗುಡುಗು

ಚಿಂಡೋಲಿ: ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ. ಮಹಾರಾಷ್ಟ್ರದ ಗಡಿ ಜಿಲ್ಲೆಯಲ್ಲ ಎಂದು ಶಿವಸೇನೆ ...

Widgets Magazine
Widgets Magazine