ಪ್ರಧಾನಿ ಮೋದಿಗೆ ಪತ್ರ ಬರೆದ ಲೈಂಗಿಕ ಕಾರ್ಯಕರ್ತೆ ಹೇಳಿದ್ದೇನು?

NewDelhi, ಬುಧವಾರ, 3 ಮೇ 2017 (12:03 IST)

Widgets Magazine

ನವದೆಹಲಿ: ಪ್ರಧಾನಿ ಮೋದಿಗೆ ಹಲವಾರು ಜನ ತಮ್ಮ ಸಮಸ್ಯೆ ಹೇಳಿಕೊಂಡು ಸಂದೇಶ ಕಳುಹಿಸುತ್ತಾರೆ. ಆದರೆ ಲೈಂಗಿಕ ಕಾರ್ಯಕರ್ತೆಯೊಬ್ಬಳು ಬರೆದ ಪತ್ರ ವಿಶೇಷವಾಗಿದೆ.


 
ತನ್ನ ಬಳಿ 10 ಸಾವಿರ ರೂ. ಹಳೇ ನೋಟುಗಳಿವೆ. ಅದನ್ನು ಹೊಸ ನೋಟಾಗಿ ಪರಿವರ್ತಿಸಲು ದಾರಿ ತೋರಿಸಿ ಎಂದು ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಪತ್ರ ಬರೆದಿದ್ದಾಳೆ.
 
ಈಕೆಯ ಕರುಣಾಜನಕ ಕತೆ ಮನಕಲಕುವಂತಿದೆ. ಮೂಲತಃ ಬಾಂಗ್ಲಾದೇಶದವಳಾದ ಈಕೆ ಗಂಡನಿಂದ ಪರಿತ್ಯಕ್ತಳಾದ ಮೇಲೆ ಅಲ್ಲಿ ಗಾರ್ಮೆಂಟ್ ಕೆಲಸ ಮಾಡಿಕೊಂಡಿದ್ದಳಂತೆ. ಆದರೆ ಅಲ್ಲೊಬ್ಬರು ಭಾರತದಲ್ಲಿ 15 ಸಾವಿರ ರೂ. ಕೆಲಸ ಕೊಡುತ್ತೇವೆ ಎಂದು ಇಲ್ಲಿಗೆ ಕರೆದುಕೊಂಡು ಬಂದರಂತೆ.
 
ಆದರೆ ಇಲ್ಲಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲಾಯಿತು. ಬಲವಂತವಾಗಿ ಆಕೆಯನ್ನು ಬೆಂಗಳೂರಿಗೂ ಕರೆ ತರಲಾಯಿತು. ನಂತರ ಪುಣೆಯ ವೇಶ್ಯಾಗೃಹವೊಂದಕ್ಕೆ ದೂಡಿದರು. ಕೊನೆಗೆ ಅಲ್ಲಿಂದ ಸಾಮಾಜಿಕ ಕಾರ್ಯಕರ್ತರು ಆಕೆಯನ್ನು ರಕ್ಷಿಸಿದರು.
 
ಇದೀಗ ತನ್ನ ವೇಶ್ಯಾಗೃಹದಲ್ಲಿ ಯಾರೋ ಟಿಪ್ಸ್ ರೂಪದಲ್ಲಿ ನೀಡಿದ ಹಳೇ ನೋಟುಗಳನ್ನು ಬದಲಾಯಿಸುವುದು ಹೇಗೆಂದು ತಿಳಿಯದೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ. ಇದಕ್ಕೆ ಪ್ರಧಾನಿ ಉತ್ತರ ಹೇಗಿರುತ್ತದೆ ಎಂದು ಕಾದು ನೋಡಬೇಕಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಲೈಂಗಿಕ ಕಾರ್ಯಕರ್ತೆ ನೋಟು ಬದಲಾವಣೆ ರಾಷ್ಟ್ರೀಯ ಸುದ್ದಿಗಳು Demonetise Sexual Worker Pm Modi National News

Widgets Magazine

ಸುದ್ದಿಗಳು

news

ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲುವುದಿಲ್ಲ: ಈಶ್ವರಪ್ಪ

ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲುವುದಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ ಡಿಸಿಎಂ ...

news

ಬಾಲಕಿಯರಿಗೆ 200 ಕೋಟಿ ಗಿಫ್ಟ್ ಕೊಟ್ಟ ಸೂರತ್ ಮೂಲದ ವ್ಯಕ್ತಿ!

ಸೂರತ್: ಪ್ರಧಾನಿ ಮೋದಿಯವರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ ಪ್ರಭಾವಿತನಾದ ಸೂರತ್ ಮೂಲದ ...

news

ಕಾಂಗ್ರೆಸ್ ಜೊತೆ ಮೈತ್ರಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಕುಮಾರಸ್ವಾಮಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ...

news

ಗಡಿಪ್ರದೇಶದಲ್ಲಿ ನಡೆಯುತ್ತಿರುವ ಈ ಚಟುವಟಿಕೆ ಭಾರತಕ್ಕೆ ಒಳ್ಳೆಯದಂತೂ ಅಲ್ಲ!

ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನಡೆದ ಮೇಲೆ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಕ್ಯಾಂಪ್ ಸಂಖ್ಯೆ ...

Widgets Magazine