ನಿತೀಶ್ ಹಾದಿ ಹಿಡಿತಾರಾ ಶರದ್ ಪವಾರ್?

ನವದೆಹಲಿ, ಶನಿವಾರ, 12 ಆಗಸ್ಟ್ 2017 (10:28 IST)

Widgets Magazine

ನವದೆಹಲಿ: ಬಿಜೆಪಿ ಸೋಲಿಸಲೆಂದು ಮಹಾಘಟಬಂದನ್ ಮಾಡಿಕೊಂಡಿದ್ದ ಕಾಂಗ್ರೆಸ್ ಗೇ ಕೈ ಕೊಟ್ಟು ಎನ್ ಡಿಎ ಪಾಳಯ ಸೇರಿಕೊಂಡ ನಿತೀಶ್ ಕುಮಾರ್ ಹಾದಿಯನ್ನೇ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹಿಡಿಯುತ್ತಾರಾ? ಹಾಗೊಂದು ಅನುಮಾನ ಮೂಡಿಸಿದೆ.


 
ಬಿಜೆಪಿಯನ್ನು ಮಣಿಸಲು ಕೂಟದ ರಾಜಕೀಯ ಪಕ್ಷಗಳು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಲಿದ್ದಾರೆ. ಆದರೆ ಈ ಮಹತ್ವದ ಸಭೆಗೆ ಹಾಜರಾಗದೇ ಇರಲು ಶರದ್ ಪವಾರ್ ನಿರ್ಧರಿಸಿದ್ದಾರೆ. ಇದನ್ನು ಬಿಜೆಪಿ ಸ್ವಾಗತಿಸಿದೆ.
 
ಇದಕ್ಕೂ ಮೊದಲು ನಡೆದ ರಾಷ್ಟ್ರಪತಿ ಚುನಾವಣೆಯಲ್ಲೂ ಶರದ್ ಪವಾರ್ ಕೊನೇ ಕ್ಷಣದಲ್ಲಿ ಯುಪಿಎಗೆ ಕೈಕೊಟ್ಟು ಎನ್ ಡಿಎ ಅಭ್ಯರ್ಥಿಗೆ ಮತ ಹಾಕಿದ್ದರು. ಇದನ್ನೆಲ್ಲಾ ಗಮನಿಸಿದರೆ ಪವಾರ್ ಕೂಡಾ ನಿತೀಶ್ ಮಾಡಿದಂತೆ ಯುಪಿಎಗೆ ಕೈ ಕೊಟ್ಟು ಎನ್ ಡಿಎ ಪಾಳಯ ಸೇರುತ್ತಾರಾ ಎಂಬ ಅನುಮಾನ ಮೂಡಿಸಿದೆ.
 
ಒಂದು ವೇಳೆ ಶರದ್ ಪವಾರ್ ಯುಪಿಎಗೆ ಕೈಕೊಟ್ಟರೆ ಅದು ಕಾಂಗ್ರೆಸ್ ಗೆ ದೊಡ್ಡ ಹೊಡೆತವಾಗಲಿದೆ. ಇದುವರೆಗೆ ಕಾಂಗ್ರೆಸ್ ಗೇ ಇದ್ದ ಎನ್ ಸಿಪಿ, ಯುಪಿಎ ಸರ್ಕಾರದಲ್ಲಿ ಬಹುದೊಡ್ಡ ಜವಾಬ್ದಾರಿ ಹೊಂದಿದ್ದ ಪವಾರ್ ಈಗ ಯುಪಿಎ ಕೂಟದಿಂದ ಹೊರಬಂದರೆ, ಆಪ್ತ ಮಿತ್ರ ಕೈ ಕೊಟ್ಟ  ಅನುಭವ ಕಾಂಗ್ರೆಸ್ ಗೆ ಆಗಲಿದೆ.
 
ಇದನ್ನೂ ಓದಿ… ಪಲ್ಲಿಕೆಲೆ ಟೆಸ್ಟ್: ಟೀಂ ಇಂಡಿಯಾಕ್ಕೆ ಬಂದ ಹಾಲುಗಲ್ಲದ ಹುಡುಗ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶರದ್ ಪವಾರ್ ನಿತೀಶ್ ಕುಮಾರ್ ಸೋನಿಯಾ ಗಾಂಧಿ ಕಾಂಗ್ರೆಸ್ ಯುಪಿಎ ರಾಷ್ಟ್ರೀಯ ಸುದ್ದಿಗಳು Congress Upa Sonia Gandhi Sharad Pawar Nitish Kumar National News

Widgets Magazine

ಸುದ್ದಿಗಳು

news

ರಾಜಕೀಯದ ಬಗ್ಗೆ ಉಪೇಂದ್ರ ಮಾತು.. ಇಲ್ಲಿದೆ ಕೇಳಿ.

ಸೂಪರ್ ಸ್ಟಾರ್ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ...

news

ಭಾರತ-ಚೀನಾ ಗಡಿಯಲ್ಲಿ ಹೆಚ್ಚಾಯ್ತು ಸೈನಿಕರ ಹೆಜ್ಜೆ ಸದ್ದು!

ಡೋಕ್ಲಾಂ: ಚೀನಾದೊಂದಿಗೆ ಡೋಕ್ಲಾಂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಹೆಚ್ಚಿದ ಹಿನ್ನಲೆಯಲ್ಲಿ ಭಾರತೀಯ ಸೇನೆ ...

news

ಹತ್ಯೆ ಪ್ರಕರಣ: ಗುಜರಾತ್ ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ

ಅಹ್ಮದಾಬಾದ್: ಕಳೆದ 2004ರಲ್ಲಿ ಹತ್ಯೆಯಾದ ವ್ಯಕ್ತಿಯೊಬ್ಬನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌರಾಷ್ಟ್ರದ ...

news

ಶರದ್ ಯಾದವ್ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಕ್ತರು: ನಿತೀಶ್ ಕುಮಾರ್

ನವದೆಹಲಿ: ಬಂಡಾಯ ನಾಯಕ ಶರದ್ ಯಾದವ್ ಅವರೊಂದಿಗೆ ಯಾವುದೇ ಸಾಮರಸ್ಯದಿಂದ ಬಾಗಿಲನ್ನು ಮುಚ್ಚಿರುವ ಜೆಡಿಯು ...

Widgets Magazine