ಪತ್ನಿ ಶಶಿಕಲಾ ನಂತ್ರ ಪತಿ ನಟರಾಜನ್‌ ಜೈಲು ಪಾಲು

ಚೆನ್ನೈ, ಶುಕ್ರವಾರ, 17 ನವೆಂಬರ್ 2017 (19:46 IST)

ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆಯಾಗಿದ್ದ ವಿ.ಕೆ.ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾದ ನಂತರ ಇದೀಗ ಅವರ ಪತಿ ನಟರಾಜನ್ ಕೂಡಾ ಜೈಲು ದಾರಿ ಹಿಡಿದಿದ್ದಾರೆ. 
 
ಅಕ್ರಮವಾಗಿ ಲೆಕ್ಸಸ್ ಕಾರ್ ಅನ್ನು ಆಮದು ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ಸಿಬಿಐ ವಿಶೇಷ ಕೋರ್ಟ್ ನಟರಾಜನ್ ಅವರಿಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. 
 
ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿದ ನಟರಾಜನ್ ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ಆದರೆ, ಹೈಕೋರ್ಟ್ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ.
 
1994ರಲ್ಲಿ ದೇಶದ ತೆರಿಗೆಯನ್ನು ವಂಚಿಸಿ ನಟರಾಜನ್ ಸೇರಿದಂತೆ ಇತರ ನಾಲ್ವರು ವಿದೇಶದಿಂದ ಲೆಕ್ಸಾಸ್ ಕಾರು ಅಮುದು ಮಾಡಿಕೊಂಡಿದ್ದರು. ಪ್ರಕರಣದ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ನಂತರ ಸಿಬಿಐಗೆ ವರ್ಗಾಯಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇವನೊಬ್ಬ ಕಾಮಕ್ರಿಮಿ, ಇವನ ಕಾಮದಾಟ ಕೇಳಿದ್ರೆ ಬೆಚ್ಚಿ ಬೀಳ್ತಿರಿ(ವಿಡಿಯೋ ನೋಡಿ)

ಚೆನ್ನೈ : ಸುಮಾರು 50ಕ್ಕೂ ಹೆಚ್ಚು ಏಕಾಂಗಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಹಣ, ಚಿನ್ನ ಲೂಟಿ ಮಾಡಿದ್ದ ...

news

ಗುಜರಾತ್ ಚುನಾವಣೆ: ಬಿಜೆಪಿಯಿಂದ 70 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 70 ...

news

ಖಾಸಗಿ ವೈದ್ಯರ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಹಣ ಹಂಚಿಕೆ

ಕೋಲಾರ: ಖಾಸಗಿ ವೈದ್ಯರ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಆಸ್ಪತ್ರೆಯ ಸಿಬ್ಬಂದಿ ಹಣ ಹಂಚುತ್ತಿರುವ ದೃಶ್ಯ ...

news

ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮಂಡಿಸಿಯೇ ಸಿದ್ದ : ಸಿಎಂ ಘೋಷಣೆ

ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮಂಡಿಸಿಯೇ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ...

Widgets Magazine
Widgets Magazine