ಪ್ರಕಾಶ್ ರೈ ನಂತರ ಮತ್ತೊಬ್ಬ ನಟನಿಂದ ಪ್ರಧಾನಿ ಮೋದಿಗೆ ಶ್ರೇಷ್ಠ ನಟ ಪಟ್ಟ!

ನವದೆಹಲಿ, ಸೋಮವಾರ, 16 ಅಕ್ಟೋಬರ್ 2017 (08:56 IST)

ನವದೆಹಲಿ: ಇತ್ತೀಚೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರನ್ನು ತನಗಿಂತ ದೊಡ್ಡ ನಟ ಎಂದು ಪ್ರಕಾಶ್ ರೈ ವಿವಾದವೆಬ್ಬಿಸಿದ್ದರು. ಇದೀಗ ಬಾಲಿವುಡ್ ನ ಇನ್ನೊಬ್ಬ ನಟ ಅದೇ ರೀತಿಯ ಮಾತಾಡಿದ್ದಾರೆ.


 
ವಿಶೇಷವೆಂದರೆ ಈ ಹೇಳಿಕೆ ನೀಡಿರುವುದು ಬಿಜೆಪಿಯವರೇ ಆದ ನಟ ಶತ್ರುಘ್ನಾ ಸಿನ್ಹಾ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿ ಸಂದರ್ಶನವೊಂದರಲ್ಲಿ ಟಾಂಗ್ ಕೊಟ್ಟಿದ್ದ ಸಿನ್ಹಾ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
 
‘ಮೋದಿ ಒಬ್ಬ ಆಕ್ಷನ್ ಹೀರೋ’ ಎಂದು ಅವರು ಲೇವಡಿ ಮಾಡಿದ್ದಾರೆ. ಪ್ರಧಾನಿ ಮೋದಿ ಬಿಹಾರಕ್ಕೆ ಆಗಮಿಸಿದ್ದಾಗ ಶತ್ರುಘ್ನಾ ಸಿನ್ಹಾ ಬಂದಿರಲಿಲ್ಲ. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಅವರು ‘ಅದರಲ್ಲಿ ವಿವಾದವೇನೂ ಇಲ್ಲ. ನಾನು ದೇಶದ ಅತೀ ದೊಡ್ಡ ಆಕ್ಷನ್ ಹೀರೋ ಜತೆಗಿದ್ದೇನೆ. ಆದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನನ್ನ ಕೈಗೆ ತಡವಾಗಿ ಬಂತಷ್ಟೇ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ಹೇಳಿಕೆ ಇದೀಗ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಕಾಶ್ ರೈ ಶತ್ರುಘ್ನಾ ಸಿನ್ಹಾ ಪ್ರಧಾನಿ ಮೋದಿ ಬಿಜೆಪಿ ರಾಷ್ಟ್ರೀಯ ಸುದ್ದಿಗಳು Bjp Shatrughna Sinha Pm Modi Prakash Raj National News

ಸುದ್ದಿಗಳು

news

ಶತಮಾನಗಳ ದಾಖಲೆ ಅಳಿಸಿದ ಬೆಂಗಳೂರು ಮಳೆ

ಬೆಂಗಳೂರು: ರಾಜ್ಯ ರಾಜಧಾನಿ ಇದೀಗ ಅಕ್ಷರಶಃ ಪ್ರಳಯ ಸದೃಶವಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ...

news

ಬಿಜೆಪಿ ಪಕ್ಷ ಕಾಂಗ್ರೆಸ್, ಮುಸ್ಲಿಂ, ಬೌದ್ಧ, ಜೈನ ಮುಕ್ತ ಭಾರತ ಬಯಸುತ್ತದೆ: ಜ್ಞಾನಪ್ರಕಾಶ್

ಬೆಂಗಳೂರು: ಬಿಜೆಪಿ ಮೂಲವಾದವೇ ಕೋಮುವಾದ. ಬಿಜೆಪಿಗೆ ಹಿಂದುತ್ವದ ಹೆಸರಲ್ಲಿ ಅಧಿಕಾರ ಪಡೆಯಲು ಹವಣಿಸುತ್ತಿದೆ ...

news

ಪ್ರತ್ಯೇಕ ನಾಡಧ್ವಜ ಆರು ಕೋಟಿ ಕನ್ನಡಿಗರ ಕನಸು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರತ್ಯೇಕ ನಾಡಧ್ವಜವಿರಬೇಕು ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಕನಸಾಗಿದೆ ಎಂದು ಸಿಎಂ ...

news

ದಲಿತ ಅರ್ಚಕರ ನೇಮಕಕ್ಕೆ ವಿರೋಧ ಇಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ಕರ್ನಾಟಕದಲ್ಲೂ ಮುಜರಾಯಿ ಇಲಾಖೆಗಳಿಗೆ ದಲಿತ ಅರ್ಚಕರ ನೇಮಕ ಮಾಡಲು ನಾವು ಮುಕ್ತ ಮನಸ್ಸು ...

Widgets Magazine