ಯಾದವ್ ಕೌಟುಂಬಿಕ ಕಲಹದಲ್ಲಿ ಬಹುದೊಡ್ಡ ಟ್ವಿಸ್ಟ್

ಲಖನೌ, ಮಂಗಳವಾರ, 31 ಜನವರಿ 2017 (16:45 IST)

ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ತಾವು ಹೊಸಪಕ್ಷವನ್ನು ಕಟ್ಟುವುದಾಗಿ ಮುಲಾಯಂ ಸಹೋದರ, ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಸಿಂಗ್ ಘೋಷಿಸಿದ್ದಾರೆ. 
ಇಟವಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ತಮ್ಮ ಸಂಪ್ರದಾಯಿಕ ಕ್ಷೇತ್ರ ಜಸ್ವಂತ ನಗರದಿಂದ ಸಮಾಜವಾದಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದಿದ್ದಾರೆ. 
 
ಇಂದು ನಾಮಪತ್ರ ಸಲ್ಲಿಸಿದ ಶಿವಪಾಲ್, ಭೃಷ್ಟಾಚಾರವನ್ನು ತಡೆಯಲು ಯತ್ನಿಸಿದ್ದರಿಂದ ತಮ್ಮನ್ನು ಅಮಾನತು ಮಾಡಲಾಯಿತು ಎಂದರು.
 
ಮುಲಾಯಂ ಅವರನ್ನು ಕೊಂಡಾಡಿದ ಅವರು,ಮುಲಾಯಂ, ಎಸ್‌ಪಿ- ಕಾಂಗ್ರೆಸ್ ಮೈತ್ರಿ ವಿರೋಧಿಸುತ್ತಿರುವುದನ್ನು ಸಮರ್ಥಿಸಿಕೊಂಡಿದ್ದು ತಮ್ಮ ರಾಜಕೀಯ ಜೀವನದಲ್ಲಿ ನೇತಾಜಿಗೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಸ್.ಎಂ.ಕೃಷ್ಣ ಮನವೊಲಿಸುವಲ್ಲಿ ಪಕ್ಷ ಕಾರ್ಯಗತವಾಗಿದೆ: ಆಸ್ಕರ್ ಫರ್ನಾಂಡಿಸ್

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಮನವೊಲಿಸುವಲ್ಲಿ ಪಕ್ಷ ಕಾರ್ಯಗತವಾಗಿದೆ. ಈ ಸಮಸ್ಯೆಗೊಂದು ...

news

ಐಟಿ ಮೇಲೆ ಟ್ರಂಪ್ ಸರ್ಜಿಕಲ್ ಸ್ಟ್ರೈಕ್

ವಿದೇಶಿ ಐಟಿ ಉದ್ಯೋಗಿಗಳಿಗೆ ಅಮೇರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರ್ಮಾಘಾತ ನೀಡಿದ್ದಾರೆ.ಕನಿಷ್ಠ ...

news

ಎಸ್.ಎಂ.ಕೃಷ್ಣ ಇಲ್ಲದ ಕಾಂಗ್ರೆಸ್ ಪಕ್ಷದಲ್ಲಿ ನಾನು ಇರುವುದಿಲ್ಲ: ರವೀಂದ್ರ ಶ್ರೀಕಂಠಯ್ಯ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಲ್ಲದ ಕಾಂಗ್ರೆಸ್ ಪಕ್ಷದಲ್ಲಿ ನಾನು ಇರುವುದಿಲ್ಲ. ಕಾಂಗ್ರೆಸ್ ...

news

ಅಂಬರೀಶ್ ಬಿಜೆಪಿಗೆ ಬಂದರೆ ಸ್ವಾಗತ: ಆರ್.ಅಶೋಕ್

ಮಾಜಿ ಸಚಿವ ಹಾಗೂ ನಟ ರೆಬಲ್ ಸ್ಟಾರ್ ಅಂಬರೀಶ್ ಬಿಜೆಪಿ ಪಕ್ಷಕ್ಕೆ ಬರುವುದಾದರೆ ನಮ್ಮ ಸ್ವಾಗತವಿದೆ ಎಂದು ...

Widgets Magazine
Widgets Magazine